ಕೊಡಗು(ಅ. 27): ಹಲವು ವರ್ಷಗಳಿಂದ ಲಕ್ಷಾಂತರ ಜನರ ಕಣ್ಮನ ಕೋರೈಸುತಿದ್ದ ಮಡಿಕೇರಿ ದಸರಾ ಜನೋತ್ಸವ ಈ ಬಾರಿ ಕೊರೋನಾ ಮಹಾಮಾರಿಯಿಂದ ನಲುಗಿ ಹೋಗಿದೆ. ದಸರಾದಲ್ಲಿ ಕೇವಲ ಸ್ಥಳೀಯರಿಗಷ್ಟೇ ಭಾಗವಹಿಸಲು ಅವಕಾಶ ನೀಡಿದ್ದರಿಂದ ಲಕ್ಷಾಂತರ ಜನರು ಭಾಗವಹಿಸುತ್ತಿದ್ದ ಮಡಿಕೇರಿ ದಸರಾದಲ್ಲಿ ನೂರಾರು ಮಂದಿಯಷ್ಟೇ ಭಾಗವಹಿಸಿ ಎಂಜಾಯ್ ಮಾಡಿದರು. (ವರದಿ: ರವಿ ಎಸ್ ಹಳ್ಳಿ)
ಪ್ರತೀ ವರ್ಷ ಮಡಿಕೇರಿ ದಸರಾ ವೀಕ್ಷಿಸಿ ಎಂಜಾಯ್ ಮಾಡಲು ಲಕ್ಷಾಂತರ ಜನರ ಜಂಗುಳಿ ಇರುತಿತ್ತು. ಆದರೆ ಈ ಬಾರಿ ಕೊಡಗಿನಲ್ಲಿ ಕೊರೋನಾ ಮಹಾಮಾರಿ ಹೆಚ್ಚು ಹರಡುತ್ತಿದ್ದರಿಂದ ಹೊರ ಜಿಲ್ಲೆಯಿಂದ ಬರುವವರಿಗೆ ನಿರ್ಬಂಧ ವಿಧಿಸಲಾಗಿತ್ತು.
2/ 8
ಸ್ಥಳೀಯರೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸದಂತೆ ಸೂಚಿಸಲಾಗಿತ್ತು. ಹೀಗಾಗಿ ಒಂದು ಮಂಟಪದ ಜೊತೆಗೆ ಕೇವಲ 50 ಜನರು ಮಾತ್ರವೇ ಭಾಗವಹಿಸಲು ಅವಕಾಶ ನೀಡಿದ್ದರಿಂದ ಮಂಟಪಗಳ ಮೆರವಣಿಗೆ ಸಾಗುವ ಬೀದಿಗಳಲ್ಲಿ ಜನರ ಜಂಗುಳಿ ಇರಲಿಲ್ಲ.
3/ 8
ಜಿಲ್ಲಾಡಳಿತ ಕೂಡ ಆದಷ್ಟು ಬೇಗ ಮಂಟಪಗಳ ಮೆರವಣಿಗೆ ಮುಗಿಸುವಂತೆ ಸೂಚನೆ ನೀಡಿದ್ದರಿಂದ ಅ. 26ರಂದು ಬೆಳಗ್ಗೆ ಒಂಭತ್ತುವರೆ ಎನ್ನುವಷ್ಟರಲ್ಲೇ ಮೆರವಣಿಗೆ ಹೊರಟವು.
4/ 8
ಪ್ರತೀ ವರ್ಷ ಸ್ವಯಂ ಚಲನವಲನಗಳ ಮೂಲಕ ಲಕ್ಷಾಂತರ ಜನರನ್ನು ಮೂಕ ವಿಸ್ಮಿತರನ್ನಾಗಿಸುತಿದ್ದ ಪೌರಾಣಿಕ ಪಾತ್ರಗಳು ದೇವಲೋಕವನ್ನೇ ಧರೆಗೆ ಇಳಿಸುತಿದ್ದವು. ಆ ಮೂಲಕ ಇಡೀ ಮಡಿಕೇರಿ ದೇವತೆಗಳು ರಾಕ್ಷಸರ ಯುದ್ಧಭೂಮಿಯಾಗಿ ಪರಿವರ್ತನೆ ಆಗಿರುತಿತ್ತು.
5/ 8
ಆದರೆ ಈ ಬಾರಿ ಅದ್ಯಾವುದೂ ಇರಲಿಲ್ಲ. ಸ್ತಬ್ಧ ಚಿತ್ರಗಳಂತೆ ಮಾಡಿದ್ದ ದಶ ಮಂಟಪಗಳು ಒಂದೊಂದು ದೇವರ ಆಕೃತಿಯನ್ನು ಪ್ರತಿಷ್ಠಾಪಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದವು. ಆ ಮೂಲಕ ಸ್ಥಳೀಯ ನೋಡುಗರ ಕಣ್ಮನ ಸೆಳೆಯುತ್ತಿದ್ದವು.
6/ 8
ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಮಡಿಕೇರಿಯ ದಸರಾ ಆಚರಣೆಗಳು ಸಿಂಪಲ್ಲಾಗಿಯೇ ಇದ್ದವು.
7/ 8
ಸರಳವಾಗಿಯೇ ಇದ್ದ ಮಂಟಪಗಳಿಗೆ ಬೆಳಕಿನ ಚಿತ್ತಾರದಿಂದ ಸಿಂಗಾರ ಮಾಡಲಾಗಿತ್ತು. ಒಂದು ಮಂಟಪದ ಜೊತೆ 50 ಜನರು ಭಾಗವಹಿಸಲು ಅವಕಾಶ ನೀಡಲಾಗಿತ್ತು.
8/ 8
ಆದರೂ ಹೆಚ್ಚಿನ ಸಂಖ್ಯೆಯಲ್ಲೇ ಭಾಗವಹಿಸಿದ್ದ ಸ್ಥಳೀಯರು ಕೊಡವ ಓಲಗಕ್ಕೆ ಹೆಜ್ಜೆಹಾಕಿ ಕುಣಿದು ಕುಪ್ಪಳಿಸಿದರು.