ಕಳೆದ ವಾರ ನವಿಲು ತೀರ್ಥ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ಉಕ್ಕಿ ಹರದಿದೆ. ಹಾಗಾಗಿಯೇ ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ಭಾಗದ 32 ಗ್ರಾಮಗಳಲ್ಲಿ ಬೆಳೆದ ಹೆಸರು, ಸೂರ್ಯಕಾಂತಿ, ಗೋವಿನ ಜೋಳ, ಹತ್ತಿ ಹಾಗೂ ಈರುಳ್ಳಿ ಮಲಪ್ರಭಾ ಆರ್ಭಟಕ್ಕೆ ಸಿಲುಕಿ ಸಂಪೂರ್ಣವಾಗಿ ಜಲಾವೃತವಾಗಿದೆ.