ವಿವಿಧ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಜಾತ್ರೆಗೆ ಸೇರುವದರಿಂದ ಸರ್ಕಾರದ ಕೋವಿಡ್-19 ನಿಯಮದಂತೆ ಸಾವಿರಾರು ಜನ ಸೇರುವಂತಿಲ್ಲ. ಹಾಗಾಗಿ ಆಗಸ್ಟ್ 13 ರಂದು ನಡೆಯಬೇಕಿದ ಈ ಜಾತ್ರೆ ಮಹೋತ್ಸವವನ್ನು ಆಚರಣೆಗೆ ಬ್ರೇಕ್ ಬಿದ್ದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಹತ್ತಿರವಿರುವ ಕಪ್ಪತ್ತಗುಡ್ಡದ ಶ್ರೀ ಕಪ್ಪತ್ತಮಲ್ಲೇಶ್ವರ ಸ್ವಾಮಿಯ ಈ ಜಾತ್ರೆ ಮಹೋತ್ಸವವನ್ನು ಆಚರಣೆಗೆ ಬ್ರೇಕ್ ಬಿದ್ದಿದೆ.
2/ 11
ವಿವಿಧ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಜಾತ್ರೆಗೆ ಸೇರುವದರಿಂದ ಸರ್ಕಾರದ ಕೋವಿಡ್-19 ನಿಯಮದಂತೆ ಸಾವಿರಾರು ಜನ ಸೇರುವಂತಿಲ್ಲ. ಹಾಗಾಗಿ ಆಗಸ್ಟ್ 13 ರಂದು ನಡೆಯಬೇಕಿದ ಈ ಜಾತ್ರೆ ಮಹೋತ್ಸವವನ್ನು ಆಚರಣೆಗೆ ಬ್ರೇಕ್ ಬಿದ್ದಿದೆ.
3/ 11
ಪ್ರತಿ ವರ್ಷ ಶ್ರಾವಣ ಮಾಸದ 3 ನೇ ಗುರುವಾರ ಈ ಕಪ್ಪತ್ತಮಲ್ಲೇಶ್ವರ ಜಾತ್ರೆ ನಡೆಯುತ್ತದೆ. ಜಾತ್ರೆಯ ದಿನದಂದು ಕಪ್ಪತ್ತಮಲ್ಲೇಶ್ವರ ಮತ್ತು ಭ್ರಮರಾಂಭಿಕಾ ದೇವಿಯ ವಿವಾಹ ನಡೆಯುತ್ತದೆ ಅದೇ ದಿನ ಹುಚ್ಚಾಯ ಎಳೆಯುತ್ತಾರೆ.
4/ 11
ಪ್ರತಿ ವರ್ಷ ಸಾವಿರಾರು ಭಕ್ತರು ತಮ್ಮ ಹರಕೆ ತೀರಿಸಲು ಇಲ್ಲಿಗೆ ಆಗಮಿಸುತ್ತಾರೆ.
5/ 11
ತಮ್ಮ ಇಷ್ಟಾರ್ಥ ಸಿದ್ದಿಗಾಗಿ ತಮ್ಮ ಮನಸ್ಸಿನ ಇಚ್ಚೆಯಂತೆ ಕಪ್ಪತ್ತಮಲ್ಲೇಶ್ವರ ದೇವಸ್ಥಾನದ ಸುತ್ತಲಿನ ಗುಡ್ಡದಲ್ಲಿ ಮದುವೆಯಾಗದವರು ಮದುವೆ ಆಗಲೆಂದು ಹರಕೆ ಹೊತ್ತುಕೊಂಡು ಬರುತ್ತಾರೆ
6/ 11
ಹೊಲ ಖರೀದಿಸುವವರು ಹಾಗೂ ಮನೆ ಇಲ್ಲದವರು ಮನೆ ಕಟ್ಟಿಸಲು ಅಲ್ಲೇ ಇರುವಂತಹ ಕಲ್ಲುಗಳನ್ನ ಜೋಡಿಸಿ ಆಕೃತಿ ಮಾಡಿ ಹರಕೆ ಬೇಡಿಕೊಳ್ಳುತ್ತಾರೆ.
7/ 11
ಮುಂದಿನ ವರ್ಷ ಜಾತ್ರೆಯೊಳಗೆ ಆ ಹರಕೆಗಳು ತೀರುತ್ತವೆನ್ನುವದು ಭಕ್ತರ ನಂಬಿಕೆ. ಕಪ್ಪತ್ತಮಲ್ಲೇಶ್ವರನಿಗೆ ಹರಕೆ ಬೇಡಿಕೊಳ್ಳುವವರು ಬೆಟ್ಟದ ಮೇಲ್ಭಾಗದಲ್ಲಿರುವ ಗಾಳಿಗುಂಡಿ ಬಸವೇಶ್ವರ ಹಾಗೂ ಅದರ ಎದುರಿರುವ ದೈವೀ ವೃಕ್ಷಕ್ಕೂ ಹರಕೆ ಕಟ್ಟುವದು ವಾಡಿಕೆ ಇದೆ.
8/ 11
ಕಳೆದ ಹತ್ತಾರು ವರ್ಷಗಳಿಂದ ಗಾಳಿಗುಂಡಿ ಬಸವೇಶ್ವರನಿಗೆ ಪೇರಲ ಹಣ್ಣುಗಳನ್ನ ತಿಕ್ಕುವ ವಾಡಿಕೆ ಬೆಳೆದು ಬಂದಿದೆ.
9/ 11
ಪ್ರತಿ ವರ್ಷ ಸಾವಿರಾರು ಭಕ್ತರು ತಮ್ಮ ಹರಕೆ ತೀರಿಸಲು ಇಲ್ಲಿಗೆ ಆಗಮಿಸುತ್ತಾರೆ.
10/ 11
ಮಕ್ಕಳಾಗದವರು ತಮ್ಮ ಹರಕೆಯನ್ನ ತೀರಿಸಲು ಬಸವಣ್ಣನ ಗುಡಿ ಎದುರಿನ ವೃಕ್ಷಕ್ಕೆ ಕಾಯಿ ಕಟ್ಟಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.
11/ 11
ಮರಳಿ ಹೋಗುವಾಗ ಆಯುರ್ವೇದ ಸಸ್ಯಕಾಶಿಯ ತೆಪ್ಪವನ್ನ ತೆರೆದುಕೊಂಡು ಅಂದರೆ ತಪ್ಪಲನ್ನ ಹರಿದುಕೊಂಡು ಹೋಗಿ ಅದನ್ನ ಮನೆ ಹಾಗೂ ದನದ ಹಕ್ಕೆಗಳಲ್ಲಿ ಧೂಪ ಹಾಕುವರು ವಾಡಿಕೆ. ಈ ಸಾರಿ ಕೊರೋನಾ ಕಾರಣದಿಂದಾಗಿ ಈ ಸಾರಿ ಜಾತ್ರೆ ರದ್ದಾಗಿದೆ.