ಶಾಲೆಯಲ್ಲಿ ಶಿಕ್ಷಣ ಗುಣಮಟ್ಟ ಚೆನ್ನಾಗಿರುವುದರಿಂದ ದಾಖಲಾತಿ ಚೆನ್ನಗಾಗಿದೆ. ಆದ್ರೆ ಮೂಲ ಬಿಲ್ಡಿಂಗ್ ಶಿಥಿಲವಾಗಿರೋ ಕಾರಣ ಮಕ್ಕಳನ್ನ ಶಾಲೆಗೆ ಕಳಸ್ಬೇಕೋ ಬೇಡ್ವೊ ಅನ್ನೋ ಪಶ್ನೆ ಪಾಲಕರಲ್ಲಿ ಮೂಡಿದೆ. ಈಗಾಗ್ಲೆ ಶಾಲೆ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೇವಲ ಒಂದು ಕೊಠಡಿ ಮಂಜೂರಾಗಿದೆ. ಅದೂ ಟೆಂಡರ್ ಹಂತದಲ್ಲಿದ್ದು ಅದ್ಯಾವಾಗ ಕಟ್ಟಡ ಕಾಮಗಾರಿ ಆರಂಭವಾಗುತ್ತೆ ಗೊತ್ತಿಲ್ಲ.
ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರ್ತಿದಾರೆ. ಬಿಲ್ಡಿಂಗ್ ಅಂಗಳದಲ್ಲಿ ಓಡಾಡೋವಾಗ ಮಕ್ಕಳ ಮೈ ಮೇಲೆ ಕಾಂಕ್ರೀಟ್ ತುಂಡು ಬಿದ್ರೆ ಅನಾಹುತ ಸಂಭವಿಸಬಹುದು. ಹೀಗಾಗಿ ಕೂಡಲೆ ಅಧಿಕಾರಿಗಳು ಎಚ್ಚೆತ್ತು ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಮಕ್ಕಳಿಗೆ ಮೂಲ ಸೌಕರ್ಯವಿರೋ ಯಾವುದಾದ್ರೂ ರೂಮ್ ವ್ಯವಸ್ಥೆ ಮಾಡಿ ಕಲಿಕಾ ವಾತಾವರಣ ಸೃಷ್ಟಿಸಬೇಕಿದೆ.