BWSSB Calender – ಕ್ಯಾಲೆಂಡರ್ ಮೂಲಕ ಬೆಂಗಳೂರಿನ ನೀರಿನ ಕಥೆ ಹೇಳುತ್ತಿದೆ ಜಲಮಂಡಳಿ
ಬೆಂಗಳೂರು: ಉದ್ಯಾನ ನಗರಿಯಲ್ಲಿ ನೀರಿನ ಸಂಕಷ್ಟ ಎದುರಾಗಿದೆ. ಅಂತರ್ಜಲ ಬಹಳ ವೇಗವಾಗಿ ಬತ್ತಿ ಹೋಗುತ್ತಿದೆ. ನೀರಿನ ಗುಣಮಟ್ಟವೂ ಮಾಲಿನ್ಯದಿಂದಾಗಿ ಕಳಪೆಯಾಗುತ್ತಿದೆ. ಈ ಸಮಸ್ಯೆ ಎದುರಿಸಲು ಹಲವು ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಒಂದು ಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿ ತುಂಬಿತುಳುಕುತ್ತಿದ್ದ ಕೆರೆ ಕಟ್ಟೆಗಳು ಬೆಂಗಳೂರಿಗೆ ಜಲಭದ್ರತೆ ಒದಗಿಸಿದ್ದವು. ಈಗ ಆ ಸ್ಥಿತಿಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. 19ನೇ ಶತಮಾನದ ಅಂತ್ಯದಲ್ಲಿ ಹೆಸರಘಟ್ಟ ಕೆರೆಯಿಂದ ನೀರು ಸರಬರಾಜಾಗುತ್ತಿತ್ತು. ಅಲ್ಲಿಂದ ಇಲ್ಲಿಯವರೆಗೆ ಕಾವೇರಿ ನೀರು ಪೂರೈಕೆ ಸೇರಿದಂತೆ ಹಲವು ಜಲಯೋಜನೆಗಳು ಬೆಂಗಳೂರಿಗೆ ಬಂದಿವೆ. ಅವೆಲ್ಲದರ ಮಾಹಿತಿ ಹೊತ್ತ ಕ್ಯಾಲೆಂಡರ್ ಅನ್ನು ಬೆಂಗಳೂರು ಜಲಮಂಡಳಿ ಬಿಡಬ್ಲ್ಯೂಎಸ್ಎಸ್ಬಿ ಹೊರತಂದಿದೆ. (ವರದಿ: ಶರಣು ಹಂಪಿ)