ಬೆಂಗಳೂರಿನಲ್ಲಿ ಕೊರೋನಾ ವಿರುದ್ಧದ ಹೋರಾಟ ಹೇಗೆ? ಬಿಬಿಎಂಪಿ ಆಯುಕ್ತರಿಂದ ಸಲಹೆ-ಸೂಚನೆ
ಬೆಂಗಳೂರು(ಆ. 01): ನಗರದಲ್ಲಿ ಕೋವಿಡ್ ಉಚ್ಛ್ರಾಯ ಸ್ಥಿತಿ ತಲುಪುತ್ತಿದ್ದು, ಇಲ್ಲಿ ಕಂಟೈನ್ಮೆಂಟ್ ಜೋನ್ಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಈ ಕೋವಿಡ್ ಬಿಕ್ಕಟ್ಟು ನಿರ್ವಹಣೆಯೇ ಆಡಳಿತಯಂತ್ರಕ್ಕೆ ದೊಡ್ಡ ತಲೆನೋವಾಗಿದೆ. ಬಿಬಿಎಂಪಿ ವಿಪರೀತ ಒತ್ತಡದಲ್ಲಿದೆ. ಕೊರೋನಾ ವಿರುದ್ಧದ ಹೋರಾಟದ ಮೊನಚನ್ನು ಇನ್ನಷ್ಟು ಹೆಚ್ಚಿಸಲು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇಂದು ವಾರ್ಡ್ ಮಟ್ಟದಲ್ಲಿ ಸಭೆ ನಡೆಸಿದರು. ಇಲ್ಲಿ ಕೊರೋನಾ ನಿಯಂತ್ರಣಕ್ಕೆ ಏನೇನು ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಿ ಸಲಹೆ ಸೂಚನೆ ನೀಡಿದರು. (ವರದಿ: ಸೌಮ್ಯಾ ಕಳಸ)
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಬೂತ್ ಮಟ್ಟದ ಸಮಿತಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿದರು. ಕೊರೋನಾ ಸಂಬಂಧಿತ ಕಾರ್ಯಗಳಿಗೆ ಚುರುಕು ಮುಟ್ಟಿಸಿದರು.
2/ 8
ಇರುವ ಸಂಪನ್ಮೂಲಗಳನ್ನ ಸರಿಯಾಗಿ ಬಳಕೆ ಮಾಡಲು ಅಗತ್ಯ ತಂಡ ಕಟ್ಟಬೇಕು. ಸ್ವಯಂ ಸೇವಕರು ಮತ್ತು ಸ್ಥಳೀಯವಾಗಿ ಲಭ್ಯ ಇರುವ ಸರ್ಕಾರಿ ನೌಕರರನ್ನು ಬಳಕೆ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತರು ಸಲಹೆ ನೀಡಿದರು.
3/ 8
ಮನೆಮನೆಗೆ ತೆರಳಿ ಅಲ್ಲಿರುವ ಹಿರಿಯರು, ಮಕ್ಕಳು, ಆರೋಗ್ಯ ಸೂಕ್ಷ್ಮ ಇರುವವರು, ಐಎಲ್ಐ, SARI ಮುಂತಾದ ಪ್ರಕರಣಗಳನ್ನ ಗುರುತು ಮಾಡಬೇಕು ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.
4/ 8
ಸೋಂಕಿತರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ಗಳನ್ನ ಟ್ರೇಸ್ ಮಾಡುವುದು. ಹೋಮ್ ಐಸೋಲೇಶನ್ನಲ್ಲಿ ಇರುವವರ ಮೇಲೆ ನಿಗಾ ಇಡಬೇಕು ಎಂದರು.
5/ 8
ಹೋಮ್ ಐಸೋಲೇನ್ನಲ್ಲಿರುವವರ ಮನೆಗಳಿಗೆ ಖುದ್ದು ಭೇಟಿ ಮಾಡುವ ಬದಲು ದೂರವಾಣಿ ಮೂಲಕವೇ ನಿಯಮಿತ ವಿಚಾರಣೆ ನಡೆಸಬೇಕು ಎಂದು ಬಿಬಿಎಂಪಿ ಅಯುಕ್ತರು ನಡೆಸಿದ ಸಭೆಯಲ್ಲಿ ತಿಳಿಸಲಾಯಿತು.
6/ 8
ಕಂಟೈನ್ಮೆಂಟ್ ಜೋನ್ಗಳ ನಿರ್ವಹಣೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಜೋನ್ಗಳಲ್ಲಿ ಇರುವ ಕುಟುಂಬಗಳಲ್ಲಿ ಉಚಿತ ದಿನಸಿಯ ಅಗತ್ಯ ಇರುವವರನ್ನು ಗುರುತಿಸುವ ಕೆಲಸ ಆಗಬೇಕು.
7/ 8
ಹಾಗೆಯೇ, ಅಗತ್ಯವಸ್ತುಗಳಿಗೆ ಹಣಪಾವತಿಸಲು ಶಕ್ತರಿರುವವರ ಪಟ್ಟಿಯನ್ನೂ ಮಾಡಬೇಕು. ಅವರೆಲ್ಲರಿಗೂ ಅಗತ್ಯ ಸೌಕರ್ಯ ಮಾಡಿಕೊಡಬೇಕು ಎಂದು ಬಿಬಿಎಂಪಿ ಕಮಿಷನರ್ ಸೂಚನೆ ನೀಡಿದರು.
8/ 8
ಕಂಟೇನ್ಮೆಂಟ್ ಜೋನ್ನಲ್ಲಿ ಇರುವ ಜನರ ಪೈಕಿ ಪ್ರತಿ ದಿನ ಹೊರಗೆ ಹೋಗಲೇಬೇಕಾದವರು, ಆರೋಗ್ಯ ಸಿಬ್ಬಂದಿ, ಪೊಲೀಸ್, ಸ್ವಚ್ಛತಾ ಸಿಬ್ಬಂದಿ ಮೊದಲಾದವರ ಪಟ್ಟಿ ಮಾಡಿ ಅವರ ಪ್ರತಿದಿನದ ಓಡಾಟಕ್ಕೆ ಪರವಾನಗಿ ಪತ್ರ ನೀಡಬೇಕು ಎಂದು ಮಂಜುನಾಥ್ ಪ್ರಸಾದ್ ಹೇಳಿದರು.