ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, ಪಿಯುಸ್ ಕರೆ ಮಾಡಿದ ನಂಬರ್ ಫೇಕ್ ಹೆಲ್ಪ್ಲೈನ್ ನಂಬರ್ ಆಗಿದೆ. ಇಂಟರ್ನೆಟ್ನಲ್ಲಿ ಸರ್ಚ್ ಮಾಡುವ ಸಂದರ್ಭದಲ್ಲಿ ಅವರಿಗೆ ನಂಬರ್ ಸಿಕ್ಕಿದೆ. ಆ ಬಳಿಕ ಅವರು ಹೇಳಿದ್ದ ಆ್ಯಪ್ ಅನ್ನು ವ್ಯಕ್ತಿ ತಮ್ಮ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ನಾವು ಈಗ ಹಣ ಯಾವ ಖಾತೆಗೆ ವರ್ಗಾವಣೆ ಆಗಿದೆ ಎಂಬ ಬಗ್ಗೆ ತನಿಖೆ ಮಾಡ್ತಿದ್ದೇವೆ. ಸದ್ಯ ಐಟಿ ಆ್ಯಕ್ಟ್ ಸೆಕ್ಷನ್ 66 (ಸಿ), 66 (ಡಿ) ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
ಫಾಸ್ಟ್ಟ್ಯಾಗ್ ರಿಚಾರ್ಜ್, 5ಜಿ ಸಿಮ್ ಅಪ್ಡೇಟ್ ಹೆಸರಿನಲ್ಲಿ ಹಲವರು ವಂಚನೆಗೆ ಒಳಗಾಗುತ್ತಿದ್ದು, ಗೂಗಲ್ನಲ್ಲಿ ಸಿಗುವ ಸಹಾಯವಾಣಿ ನಂಬರ್ಗಳನ್ನು ನಂಬಬೇಡಿ, ಯಾರಿಗೂ ಓಟಿಪಿ ಸಂಖ್ಯೆಯನ್ನು ಶೇರ್ ಮಾಡಬೇಡಿ ಹಾಗೂ ಗೊತ್ತಿಲ್ಲದ ಆ್ಯಪ್ಗಳು, ಲಿಂಕ್ಗಳನ್ನು ನಿಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಲು ಹೋಗಬೇಡಿ ಎಂದು ತಜ್ಞರು ನಿರಂತರವಾಗಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ವಂಚಕರು ನಿತ್ಯ ಆಪ್ಡೇಟ್ ಆಗುತ್ತಿದ್ದು, ಒಂದಿಲ್ಲೊಂದು ಮಾರ್ಗವನ್ನು ಹುಡುಕಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)