Crime News: ಒಂಟಿಯಾಗಿ ಓಡಾಡೋರೇ ಹುಷಾರ್​! ಆಟೋ ಡ್ರೈವರ್ ಮೇಲೆ ಅಟ್ಯಾಕ್‌‌, ಯುವತಿ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅಂದರ್

ಶೋಕಿ ಜೀವನಕ್ಕಾಗಿ ಸುಲಿಗೆ, ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಜಬೀ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಇದೀಗ ಮತ್ತೆ ಮುದ್ದೆ ಮುರಿಯಲು ಹೋಗಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Crime News: ಒಂಟಿಯಾಗಿ ಓಡಾಡೋರೇ ಹುಷಾರ್​! ಆಟೋ ಡ್ರೈವರ್ ಮೇಲೆ ಅಟ್ಯಾಕ್‌‌, ಯುವತಿ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅಂದರ್

    ಬೆಂಗಳೂರು: ಇವರಿಬ್ಬರು ನಟೋರಿಯಸ್ ಸುಲಿಗೆಕೋರರು, ಒಂಟಿಯಾಗಿ ಯಾರೇ ಕಂಡರು ಬೆದರಿಸಿ ಸುಲಿಗೆ ಮಾಡುವುದು ಅವರ ಪರ್ಮನೆಂಟ್‌ ಕಾಯಕ. ಇತ್ತೀಚಿಗೆ ಯುವತಿ ಮತ್ತು ಆಟೋ ಚಾಲಕನನ್ನು ಸುಲಿಗೆ ಮಾಡಿದ್ದರು.

    MORE
    GALLERIES

  • 27

    Crime News: ಒಂಟಿಯಾಗಿ ಓಡಾಡೋರೇ ಹುಷಾರ್​! ಆಟೋ ಡ್ರೈವರ್ ಮೇಲೆ ಅಟ್ಯಾಕ್‌‌, ಯುವತಿ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅಂದರ್

    ಈ ಸಿಸಿಟಿವಿ ದೃಶ್ಯಾವಳಿ ನೋಡಿದ್ದೀರಿ ಅಲ್ವಾ, ಜನನಿಬಿಡ ರಸ್ತೆಯಲ್ಲಿ ಖದೀಮನೊಬ್ಬ ಯುವತಿಯನ್ನ ಅಡ್ಡಗಟ್ಟಿ ರಾಜಾರೋಷವಾಗಿ ಸುಲಿಗೆ ಮಾಡುತ್ತಿದ್ದಾನೆ. ಕೂಡಲೇ ಮಹಿಳೆಯೊಬ್ಬರು ಯುವತಿಯ ಸಹಾಯಕ್ಕೆ ಬಂದಿದ್ದಾರೆ.

    MORE
    GALLERIES

  • 37

    Crime News: ಒಂಟಿಯಾಗಿ ಓಡಾಡೋರೇ ಹುಷಾರ್​! ಆಟೋ ಡ್ರೈವರ್ ಮೇಲೆ ಅಟ್ಯಾಕ್‌‌, ಯುವತಿ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅಂದರ್

    ಪುಲಕೇಶಿನಗರದಲ್ಲಿ ನಡೆದಿದ್ದ ಸುಲಿಗೆಕೋರರ ಹಾವಳಿ ಬಳಿಕ ಪೊಲೀಸರು ತಲೆಕೆಡಿಸಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಭಾರತಿನಗರ ವ್ಯಾಪ್ತಿಯಲ್ಲಿ ಆಟೋ ಚಾಲಕನಿಗೆ ಬೆದರಿಕೆ ಹಾಕಿದ್ದ ಅಸಾಮಿಗಳು ಚಾಲಕನನ್ನ ಹೊರ ದಬ್ಬಿ ಆಟೋ ಸಮೇತ ಪರಾರಿಯಾಗಿದ್ದರು.

    MORE
    GALLERIES

  • 47

    Crime News: ಒಂಟಿಯಾಗಿ ಓಡಾಡೋರೇ ಹುಷಾರ್​! ಆಟೋ ಡ್ರೈವರ್ ಮೇಲೆ ಅಟ್ಯಾಕ್‌‌, ಯುವತಿ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅಂದರ್

    ಅಕ್ಕ ಪಕ್ಕದ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೆದಿದ್ದು, ಪೊಲೀಸರ ನಿದ್ದೆ ಕೆಡಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

    MORE
    GALLERIES

  • 57

    Crime News: ಒಂಟಿಯಾಗಿ ಓಡಾಡೋರೇ ಹುಷಾರ್​! ಆಟೋ ಡ್ರೈವರ್ ಮೇಲೆ ಅಟ್ಯಾಕ್‌‌, ಯುವತಿ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅಂದರ್

    ಶಿವಾಜಿನಗರ ಮೂಲದ ಇಬ್ಬರು ಖದೀಮರನ್ನು ಬಂಧಿಸಿದ್ದು, ಆರೋಪಿಗಳನ್ನು ಮೊಹಮ್ಮದ್ ಜಬೀ ಮತ್ತು ಯಾಸೀನ್ ಎಂದು ಗುರ್ತಿಸಲಾಗಿದೆ.

    MORE
    GALLERIES

  • 67

    Crime News: ಒಂಟಿಯಾಗಿ ಓಡಾಡೋರೇ ಹುಷಾರ್​! ಆಟೋ ಡ್ರೈವರ್ ಮೇಲೆ ಅಟ್ಯಾಕ್‌‌, ಯುವತಿ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅಂದರ್

    ವೃತ್ತಿ ಪರ ಬೈಕ್ ಕಳ್ಳರಾಗಿದ್ದ ಇವರು, ಒಂಟಿಯಾಗಿ ಓಡಾಡುವವರನ್ನೇ ಟಾರ್ಗೆಟ್‌ ಮಾಡಿ ಚಿನ್ನಾಭರಣ, ಮೊಬೈಲ್ ಸುಲಿಗೆ ಮಾಡ್ತಿದ್ರಂತೆ. ಆರೋಪಿ ಜಬೀ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದನಂತೆ.

    MORE
    GALLERIES

  • 77

    Crime News: ಒಂಟಿಯಾಗಿ ಓಡಾಡೋರೇ ಹುಷಾರ್​! ಆಟೋ ಡ್ರೈವರ್ ಮೇಲೆ ಅಟ್ಯಾಕ್‌‌, ಯುವತಿ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅಂದರ್

    ಬಂಧಿತರಿಂದ ಹತ್ತು ಲಕ್ಷ ಮೌಲ್ಯದ 19 ದುಬಾರಿ ಬೆಲೆಯ ಬೈಕ್‌ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಶೋಕಿ ಜೀವನಕ್ಕಾಗಿ ಸುಲಿಗೆ, ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಜಬೀ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಇದೀಗ ಮತ್ತೆ ಮುದ್ದೆ ಮುರಿಯಲು ಹೋಗಿದ್ದಾರೆ. ಪೊಲೀಸರು ಖದೀಮರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಶಿಕ್ಷೆ ಪ್ರಮಾಣ ಹೆಚ್ಚಾಗುವಂತೆ ಮಾಡಬೇಕಿದೆ. (ವರದಿ: ಮುನಿರಾಜು, ಕ್ರೈಮ್ ಬ್ಯೂರೋ, ನ್ಯೂಸ್ 18)

    MORE
    GALLERIES