Tumakuru: ಅದೃಷ್ಟ ಕೈಹಿಡಿಯಬೇಕು ಅಂತ ನರಿಯನ್ನು ಸಾಕಿ ಜೈಲು ಪಾಲಾದ ಉದ್ಯಮಿ!

ಮುಖ್ಯ ಕೆಲಸ ಮೇಲೆ ಹೊರಗಡೆ ಹೋಗುವ ಸಂದರ್ಭದಲ್ಲಿ ಲಕ್ಷ್ಮಿಕಾಂತ್ ತಪ್ಪದೆ ನರಿ ಮುಖವನ್ನು ನೋಡಿಕೊಂಡೆ ಹೋಗುತ್ತಿದ್ದರಂತೆ.

First published:

  • 19

    Tumakuru: ಅದೃಷ್ಟ ಕೈಹಿಡಿಯಬೇಕು ಅಂತ ನರಿಯನ್ನು ಸಾಕಿ ಜೈಲು ಪಾಲಾದ ಉದ್ಯಮಿ!

    ಯಾರಿಗಾದರೂ ಲೈಫ್​ ಸೆಟಲ್​ ಆಗುವಂತಹ ಘಟನೆ ನಡೆದರೆ ಆತ ಬೆಳಗ್ಗೆ ನರಿ ಮುಖ ನೋಡಿ ಬಂದಿದ್ದ ಅಂತ ಜನರು ಮಾತನಾಡಿಕೊಳ್ಳುವುದನ್ನು ನೀವು ಗಮನಿಸಿರುತ್ತೀರಿ. ಅದರಲ್ಲೂ ಆತನಿಗೆ ಲಾಭವಾಗುತ್ತಿದ್ದರೆ ಆತ ಪ್ರತಿ ದಿನ ನರಿ ಮುಖ ನೋಡಿಕೊಂಡು ಬರ್ತಾನೆ ಅಂತಲೂ ಹೇಳುತ್ತಾರೆ. ಈ ಮಾತುಗಳನ್ನು ನಿಜ ಎಂದುಕೊಂಡ ವ್ಯಕ್ತಿಯೋರ್ವ ಪ್ರತಿ ದಿನ ನರಿ ಮುಖ ನೋಡಲು ನರಿಯನ್ನೇ ಸಾಕಿಕೊಂಡಿದ್ದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. (Image Credit Pixabay)

    MORE
    GALLERIES

  • 29

    Tumakuru: ಅದೃಷ್ಟ ಕೈಹಿಡಿಯಬೇಕು ಅಂತ ನರಿಯನ್ನು ಸಾಕಿ ಜೈಲು ಪಾಲಾದ ಉದ್ಯಮಿ!

    ರಾಜ್ಯದ ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ನಾಗವಲ್ಲಿ ಬಳಿ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ನಿವಾಸಿಯಾಗಿರುವ ಲಕ್ಷ್ಮಿಕಾಂತ್​ ಎಂಬಾತ ಕೃಷಿ ಮಾಡುತ್ತಾ, ತನ್ನದೆ ಜಮೀನಿನಲ್ಲಿ ಕೋಳಿ ಫಾರಮ್​​ವೊಂದನ್ನು ನಡೆಸುತ್ತಿದ್ದಾರೆ.

    MORE
    GALLERIES

  • 39

    Tumakuru: ಅದೃಷ್ಟ ಕೈಹಿಡಿಯಬೇಕು ಅಂತ ನರಿಯನ್ನು ಸಾಕಿ ಜೈಲು ಪಾಲಾದ ಉದ್ಯಮಿ!

    ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಒಳ್ಳೆದಾಗುತ್ತದೆ, ಅದೃಷ್ಟ ಹುಡುಕಿಕೊಂಡು ಬರುತ್ತಾರೆ ಎಂಬ ಗಾದೆಯನ್ನು ನಂಬಿದ ಲಕ್ಷ್ಮಿಕಾಂತ್​ ತನ್ನ ಕೋಳಿ ಫಾರಮ್​​ನಲ್ಲಿ ನರಿಯೊಂದನ್ನು ಯಾರಿಗೂ ತಿಳಿಯದಂತೆ ಸಾಕು ತಿದ್ದನಂತೆ. (Image Credit Pixabay)

    MORE
    GALLERIES

  • 49

    Tumakuru: ಅದೃಷ್ಟ ಕೈಹಿಡಿಯಬೇಕು ಅಂತ ನರಿಯನ್ನು ಸಾಕಿ ಜೈಲು ಪಾಲಾದ ಉದ್ಯಮಿ!

    ನರಿಯೊಂದನ್ನು ಹೇಗೋ ಸೆರೆ ಹಿಡಿದಿದ್ದ ಕುಕ್ಕಟೋದ್ಯಮ ನಡೆಸುತ್ತಿದ್ದ ಲಕ್ಷ್ಮಿಕಾಂತ್, ಅದನ್ನು ಯಾರಿಗೂ ತಿಳಿದಂತೆ ಚೆನ್ನಾಗಿ ಬೆಳೆಸಿದ್ದಾರೆ. ನರಿ ಸಾಕಾಲು ಅಂತಾನೆ ಅದಕ್ಕೆ ರೂಮ್​ವೊಂದನ್ನು ನಿರ್ಮಿಸಿದ್ದರಂತೆ. ಪ್ರತಿ ದಿನ ನಿದ್ದೆಯಿಂದ ಕಣ್ಣು ಬಿಡುತ್ತಿದ್ದಂತೆ ನರಿ ಮುಖ ನೋಡುತ್ತಿದ್ದನಂತೆ, ವ್ಯಾಪಾರದಲ್ಲಿ ಲಾಭ ಆದರೂ ನರಿಯಿಂದಲೇ ಎಂದು ಭಾವಿಸಿದ್ದರಂತೆ. (Image Credit Pixabay)

    MORE
    GALLERIES

  • 59

    Tumakuru: ಅದೃಷ್ಟ ಕೈಹಿಡಿಯಬೇಕು ಅಂತ ನರಿಯನ್ನು ಸಾಕಿ ಜೈಲು ಪಾಲಾದ ಉದ್ಯಮಿ!

    ಮುಖ್ಯ ಕೆಲಸ ಮೇಲೆ ಹೊರಗಡೆ ಹೋಗುವ ಸಂದರ್ಭದಲ್ಲಿ ಲಕ್ಷ್ಮಿಕಾಂತ್ ತಪ್ಪದೇ ನರಿ ಮುಖವನ್ನು ನೋಡಿಕೊಂಡೆ ಹೋಗುತ್ತಿದ್ದರಂತೆ. (Image Credit Pixabay)

    MORE
    GALLERIES

  • 69

    Tumakuru: ಅದೃಷ್ಟ ಕೈಹಿಡಿಯಬೇಕು ಅಂತ ನರಿಯನ್ನು ಸಾಕಿ ಜೈಲು ಪಾಲಾದ ಉದ್ಯಮಿ!

    ಅದೃಷ್ಟವೋ ಅಥವಾ ಅವರ ಕೆಲಸದ ಶ್ರಮದ ಫಲವೇ ಗೊತ್ತಿಲ್ಲ ಅವರಿಗೆ ಉಧ್ಯಮದಲ್ಲಿ ಹೆಚ್ಚು ಲಾಭ ಬರಲು ಆರಂಭವಾಗುತ್ತಿದ್ದರಂತೆ. ಆದರೆ ಇದೆಲ್ಲವನ್ನೂ ಗಮನಿಸಿದ್ದ ಆತ ಎಂದರೇ ಇಷ್ಟವಿಲ್ಲ ವ್ಯಕ್ತಿಯೊಬ್ಬ, ನರಿಯಿಂದಲೇ ಆತನಿಗೆ ಅದೃಷ್ಟ ಕೈಹಿಡಿಯುತ್ತಿದೆ ಅಂತ ಭಾವಿಸಿದ್ದಾನೆ. (Image Credit Pixabay)

    MORE
    GALLERIES

  • 79

    Tumakuru: ಅದೃಷ್ಟ ಕೈಹಿಡಿಯಬೇಕು ಅಂತ ನರಿಯನ್ನು ಸಾಕಿ ಜೈಲು ಪಾಲಾದ ಉದ್ಯಮಿ!

    ಇದರಂತೆ ಹೇಗಾದರೂ ಮಾಡಿ ಲಕ್ಷ್ಮಿಕಾಂತ್​​ ಕೋಳಿ ಫಾರಮ್​​​ನಲ್ಲಿ ಸಾಕಿಕೊಂಡಿದ್ದ ನರಿಯನ್ನು ದೂರ ಮಾಡಬೇಕು ಎಂದುಕೊಂಡ ಅನಾಮಿಕ ವ್ಯಕ್ತಿ ನರಿ ಸಾಕುತ್ತಿದ್ದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದನಂತೆ. ಅನಾಮಿಕ ವ್ಯಕ್ತಿ ನೀಡಿದ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಪೊಲೀಸರು ಕೋಳಿ ಫಾರಮ್​ ಮೇಲೆ ದಾಳಿ ಮಾಡಿ ನರಿಯನ್ನು ರಕ್ಷಣೆ ಮಾಡಿದ್ದಾರೆ. (Image Credit Pixabay)

    MORE
    GALLERIES

  • 89

    Tumakuru: ಅದೃಷ್ಟ ಕೈಹಿಡಿಯಬೇಕು ಅಂತ ನರಿಯನ್ನು ಸಾಕಿ ಜೈಲು ಪಾಲಾದ ಉದ್ಯಮಿ!

    ಅಲ್ಲದೆ, ಅಕ್ರಮವಾಗಿ ನರಿಯನ್ನು ಬೋನ್​​ವೊಂದರಲ್ಲಿ ಬಂಧಿಸಿ ಸಾಕಿದ ಕಾರಣ ಲಕ್ಷ್ಮಿಕಾಂತ್ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಿ ನ್ಯಾಯಾಲಯದ ಎದುರು ಹಾಜರು ಪಡಿಸಿದ್ದಾರೆ. ಕೋರ್ಟ್​ ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ. (Image Credit Pixabay)

    MORE
    GALLERIES

  • 99

    Tumakuru: ಅದೃಷ್ಟ ಕೈಹಿಡಿಯಬೇಕು ಅಂತ ನರಿಯನ್ನು ಸಾಕಿ ಜೈಲು ಪಾಲಾದ ಉದ್ಯಮಿ!

    ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಿಕಾಂತ್​ ಕೆಲ ಸಮಯದ ಹಿಂದೆ ನನಗೆ ಕರೆ ಅಂಗಳದಲ್ಲಿ ನರಿಯ ಮರಿಗಳು ಸಿಕ್ಕಿತ್ತು. ಅವುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಒಂದನ್ನು ನನ್ನ ಬಳಿಯೆ ಉಳಿಸಿಕೊಂಡು ಸಾಕಿಕೊಂಡಿದ್ದೆ ಎಂದು ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದಾರಂತೆ. ಏನೇ ಆದರೂ ಅಕ್ರಮವಾಗಿ ನರಿಯನ್ನು ಬೋನ್​​ವೊಂದರಲ್ಲಿ ಬಂಧಿಸಿ ಸಾಕಿಕೊಂಡಿರುವುದು ನಿಯಮಗಳ ಅನ್ವಯ ಅಪರಾಧವಾಗಿದ್ದು, ಕಾನೂನಿನ ಅನ್ವಯ ಕ್ರಮಕೈಗೊಳ್ಳಲು ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರಂತೆ. (Image Credit Pixabay)

    MORE
    GALLERIES