ಅವರಿಬ್ಬರು ಪ್ರೇಮಿಗಳು. ಎಲ್ಲಾ ಪ್ರೇಮಿಗಳಂತೆ ಇಲ್ಲಿ ಇವರಿಗೂ ಹೆತ್ತವರೇ ವಿಲನ್ ಆಗಿದ್ದರು. ಇದೇ ಕಾರಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡ ಪ್ರೇಮಿಗಳು, ವಿಷ ಕುಡಿದು ಸ್ಲೀಪರ್ ಬಸ್ ಏರಿದ್ದರು. ಮುಂದೇನಾಯ್ತು?
ಪ್ರೇಮಿಗಳಿಬ್ಬರು ಸ್ಲೀಪರ್ ಕೋಚ್ ಬಸ್ ನಲ್ಲಿ ವಿಷ ಕುಡಿದು ಮಲಗಿದ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ರಾಣೆೇಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಬಳಿ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಬಳಿ ನಡೆದ ಘಟನೆ ಬೆಳಕಿಗೆ ಬಂದಿದೆ.
2/ 7
20 ವರ್ಷದ ಹೇಮಾ ಹಾಗೂ ಅಖಿಲ್ ಎಂಬುವರೇ ಪ್ರೇಮಿಗಳಾಗಿದ್ದಾರೆ. ಬೆಂಗಳೂರು ಮೂಲದ ಹೇಮಾ ಹಾಗೂ ಬಾಗಲಕೋಟೆ ಮೂಲದ ಅಖಿಲ್ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
3/ 7
ಆದರೆ ಇವರಿಬ್ಬರ ಪ್ರೀತಿಗೆ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಹೀಗಾಗಿಯೇ ಇಬ್ಬರೂ ಒಟ್ಟಿಗೆ ಸಾಯೋ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಅಂತಲೇ ಸ್ಲೀಪರ್ ಬಸ್ ಹತ್ತಿ ಇಬ್ಬರೂ ವಿಷ ಕುಡಿದಿದ್ದಾರೆ.
4/ 7
ಸಾಯೋದಕ್ಕೂ ಮುಂಚೆ ಹುಡುಗಿ ಮನೆಯವರಿಗೆ ಕಾಲ್ ಮಾಡಿದ್ದಾಳೆ. ನಮ್ಮ ಮದುವೆಗೆ ನೀವು ಒಪ್ಪಿಗೆ ಕೊಡಲ್ಲ ಅನ್ನೋದು ಗೊತ್ತಾಯ್ತು. ಹೀಗಾಗಿ ನಾವು ಬಾಂಬೆಗೆ ಹೋಗ್ತಾ ಇದ್ದೇವೆ ಅಂತ ಫೋನ್ನಲ್ಲಿ ಹೇಳಿದ್ದಾಳೆ.
5/ 7
ಬಳಿಕ ಇಬ್ಬರೂ ಬಸ್ನಲ್ಲೇ ವಿಷ ಕುಡಿದಿದ್ದಾರಂತೆ. ಊಟಕ್ಕೆ ಬಸ್ ನಿಲ್ಲಿಸಿದಾಗ ಬಸ್ ನವರಿಗೆ ಅನುಮಾನ ಬಂದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ವಿಷದ ವಾಸನೆ ಬಂದ ಹಿನ್ನೆಲೆ ಕೂಡಲೇ ಆಸ್ಪತ್ರೆಗೆ ದಾಖಲಿಸೋ ಪ್ರಯತ್ನ ಮಾಡಿದ್ದಾರೆ.
ಅದೃಷ್ಟವಶಾತ್ ಪ್ರೇಮಿ ಅಖಿಲ್ ಚಿಕಿತ್ಸೆಗೆ ಸ್ಪಂದಿಸಿ, ಗುಣಮುಖನಾಗಿದ್ದಾನೆ. 5 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳೆಕಿಗೆ ಬಂದಿದೆ. ಇನ್ನು ಘಟನೆ ಸಂಬಂಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.