Crime News: ರಾಜ್ಯದಲ್ಲಿ ದಾಖಲಾಗುತ್ತಿವೆ ಸಾಲು ಸಾಲು ಕೊಲೆ ಪ್ರಕರಣ; ಚಿತ್ರ ವಿಚಿತ್ರ ರೀತಿಯಲ್ಲಿ ಅಪರಿಚಿತ ಶವಗಳು ಪತ್ತೆ!

ಅಪರಿಚಿತ ಕೊಲೆ ಮೃತದೇಹಗಳ ಪತ್ತೆ ಪ್ರಕರಣದಲ್ಲಿ ಕೊಲೆಗಾರರ ಉದ್ದೇಶವೇ ಕೇಸ್ ಪತ್ತೆಯಾಗಬಾರದು ಅನ್ನೋದಾಗಿರುತ್ತೆ. ಅದಕ್ಕಾಗಿ ಕೊಲೆಯಾದ ವ್ಯಕ್ತಿಯ ಗುರುತು ಸಿಗದ ರೀತಿ ಮಾಡುತ್ತಾರೆ.

First published:

  • 19

    Crime News: ರಾಜ್ಯದಲ್ಲಿ ದಾಖಲಾಗುತ್ತಿವೆ ಸಾಲು ಸಾಲು ಕೊಲೆ ಪ್ರಕರಣ; ಚಿತ್ರ ವಿಚಿತ್ರ ರೀತಿಯಲ್ಲಿ ಅಪರಿಚಿತ ಶವಗಳು ಪತ್ತೆ!

    ಬೆಂಗಳೂರು: ರಾಜ್ಯದಲ್ಲಿ ಸಾಲು ಸಾಲು ಕೊಲೆ ಪ್ರಕರಣಗಳು ವರದಿಯಾಗುತ್ತಿದ್ದು, ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ. ಅನಾಥ ಶವಗಳು, ಗುರುತು ಸಿಗದ ಮೃತದೇಹಗಳು ಪತ್ತೆಯಾದ ಸಂದರ್ಭದಲ್ಲಿ ಅವುಗಳ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ. ಹೌದು, ರಾಜ್ಯದಲ್ಲಿ ಇತ್ತೀಚೆಗೆ ವರದಿಯಾಗಿರುವ 8 ರಣಭೀಕರ ಕೊಲೆಗಳು ಪೊಲೀಸರಿಗೆ ಬಹುದೊಡ್ಡ ಸವಾಲು ನೀಡಿದೆ. ಸದ್ಯ ಪತ್ತೆಯಾಗಿರುವ ಎಲ್ಲಾ ಕೊಲೆ ಪ್ರಕರಣಗಳಿಗೆ ಲಿಂಕ್ ಇದ್ಯಾ? ಪತ್ತೆಯಾಗುತ್ತಿರುವ ಅಪರಿಚಿತ ಮೃತದೇಹಗಳ ಹಿಂದಿನ ರಹಸ್ಯವೇನು? ಎಂಬ ಪ್ರಶ್ನೆಗಳು ಪೊಲೀಸರನ್ನು ಕಾಡುತ್ತಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Crime News: ರಾಜ್ಯದಲ್ಲಿ ದಾಖಲಾಗುತ್ತಿವೆ ಸಾಲು ಸಾಲು ಕೊಲೆ ಪ್ರಕರಣ; ಚಿತ್ರ ವಿಚಿತ್ರ ರೀತಿಯಲ್ಲಿ ಅಪರಿಚಿತ ಶವಗಳು ಪತ್ತೆ!

    ‘ಹಚ್ಚೆ’ ಹಾದಿ 01: 2022ರ ಡಿಸೆಂಬರ್ 10 ರಂದು ಮೈಸೂರು ಜಿಲ್ಲೆಯ ಬನ್ನೂರು ಬಳಿ 25-30 ವಯಸ್ಸಿನ ಪುರುಷನ ಮೃತದೇಹ ಪತ್ತೆಯಾಗಿತ್ತು. ಬಲಗೈನಲ್ಲಿ ರಾಜಿ, ಕುಮಾರ, ರುಕಿ ಎಂದು ಹಚ್ಚೆ ಇದ್ದು, ಎಡಗೈ ಮುಂಗೈ ಮೇಲೆ ನಾಗ ಎಂದು ಹಚ್ಚೆ ಪತ್ತೆಯಾಗಿದೆ. ಕೊಲೆ ಮಾಡಿ ನೀರಿನ ಹೊಂಡದಲ್ಲಿ ಬೀಸಾಡಿದ್ದು, ಜಲಚರಗಳು ಮೃತದೇಹ ತಿಂದು ಹಾಕಿರುವ ಪರಿಣಾಮ ಶವದ ಗುರುತು ಪತ್ತೆಯಾಗಿಲ್ಲ.

    MORE
    GALLERIES

  • 39

    Crime News: ರಾಜ್ಯದಲ್ಲಿ ದಾಖಲಾಗುತ್ತಿವೆ ಸಾಲು ಸಾಲು ಕೊಲೆ ಪ್ರಕರಣ; ಚಿತ್ರ ವಿಚಿತ್ರ ರೀತಿಯಲ್ಲಿ ಅಪರಿಚಿತ ಶವಗಳು ಪತ್ತೆ!

    ‘ಹಚ್ಚೆ’ ಹಾದಿ 02: 2023ರ ಜನವರಿ 7ರಂದು ಬೆಂಗಳೂರು ಗ್ರಾಮಾಂತರದ ಆವಲಹಳ್ಳಿ ಬಳಿ 25-30 ವಯಸ್ಸಿನ ಪುರುಷನ ಮೃತದೇಹ ಪತ್ತೆಯಾಗಿತ್ತು. ಬಲಗೈನ ಐದೂ ಬೆರಳಲ್ಲಿ ಐದು ಅಕ್ಷರಗಳು ಪತ್ತೆಯಾಗಿದೆ. ಐದೂ ಬೆರಳು ಸೇರಿಸಿದ್ರೆ RADHE ಎಂಬ ಹೆಸರು ಹಾಗೂ ಎಡಭಾಗದ ಎದೆ ಮೇಲೆ Chinnu ಎಂಬ ಹಚ್ಚೆ ಕಂಡು ಬಂದಿದೆ. ಎಡಗೈ ಮೇಲೆ Sara, ಮುಂಗೈ ಮಧ್ಯಭಾಗದಲ್ಲಿ Amma ಹಚ್ಚೆ ಇದೆ.

    MORE
    GALLERIES

  • 49

    Crime News: ರಾಜ್ಯದಲ್ಲಿ ದಾಖಲಾಗುತ್ತಿವೆ ಸಾಲು ಸಾಲು ಕೊಲೆ ಪ್ರಕರಣ; ಚಿತ್ರ ವಿಚಿತ್ರ ರೀತಿಯಲ್ಲಿ ಅಪರಿಚಿತ ಶವಗಳು ಪತ್ತೆ!

    ‘ಹಚ್ಚೆ’ ಹಾದಿ 03: 2023ರ ಫೆಬ್ರವರಿ 16 ರಂದು ಬೆಂಗಳೂರು ಗ್ರಾಮಾಂತರದ ಆವಲಹಳ್ಳಿ ಬಳಿ 35-40 ವಯಸ್ಸಿನ ಪುರುಷನ ಮೃತದೇಹ ಪತ್ತೆಯಾಗಿತ್ತು. ಬಲಗೈನಲ್ಲಿ S R ಎಂಬ ಹಚ್ಚೆ ಗುರುತು ಪತ್ತೆಯಾಗಿದೆ. ಕಿತ್ತಗನೂರು ಕೆರೆ ಏರಿ ಪಕ್ಕದ ಕೆರೆಯಲ್ಲಿ ಮೃತದೇಹಯಾಗಿದ್ದು, ಕೈಕಾಲುಗಳನ್ನು ಪ್ಲಾಸ್ಟಿಕ್ ದಾರದಿಂದ ಕಟ್ಟಿ, ಮೂರು ಬೆಡ್​ಶೀಟ್​ ಸುತ್ತಿ ಚೀಲದೊಳಗೆ ಹಾಕಿದ ಬೀಸಾಡಿದ್ದರು.

    MORE
    GALLERIES

  • 59

    Crime News: ರಾಜ್ಯದಲ್ಲಿ ದಾಖಲಾಗುತ್ತಿವೆ ಸಾಲು ಸಾಲು ಕೊಲೆ ಪ್ರಕರಣ; ಚಿತ್ರ ವಿಚಿತ್ರ ರೀತಿಯಲ್ಲಿ ಅಪರಿಚಿತ ಶವಗಳು ಪತ್ತೆ!

    ‘ಹಚ್ಚೆ’ ಹಾದಿ 04: 2023ರ ಫೆಬ್ರವರಿ 22ರಂದು ಮಂಡ್ಯದ ಕೆರಗೋಡು ಬಳಿ ತುಂಡು ತುಂಡು ಮಾಡಲಾಗಿದ್ದ ಮೃತದೇಹಯಾಗಿತ್ತು. ಕೈಕಾಲು, ರುಂಡ ಮುಂಡ ಕತ್ತರಿಸಿ ಬೇರ್ಪಡಿಸಿದ ಸ್ಥಿತಿಯಲ್ಲಿ ಶವ ಸಿಕ್ಕಿತ್ತು. ಮೃತದೇಹದ ಎಡಗೈ ಮೇಲೆ ‘ಕಾವ್ಯ ರಘು’ ಎಂಬ ಹಚ್ಚೆ ಇದ್ದು, ಬಲಗೈ ಮೇಲೆ ‘ವಂಜಾ/ವಂಜಾಕ್ಷಿ’ ಎಂಬ ಹಚ್ಚೆ ಇದೆ. ಕೊಲೆ ಮಾಡಿ ಕಾಲುವೆಯಲ್ಲಿ ಮೃತದೇಹದ ಭಾಗಗಳನ್ನು ಎಸೆದಿದ್ದಾರೆ.

    MORE
    GALLERIES

  • 69

    Crime News: ರಾಜ್ಯದಲ್ಲಿ ದಾಖಲಾಗುತ್ತಿವೆ ಸಾಲು ಸಾಲು ಕೊಲೆ ಪ್ರಕರಣ; ಚಿತ್ರ ವಿಚಿತ್ರ ರೀತಿಯಲ್ಲಿ ಅಪರಿಚಿತ ಶವಗಳು ಪತ್ತೆ!

    ‘ಹಚ್ಚೆ’ ಹಾದಿ 06: 2023ರ ಫೆಬ್ರವರಿ 27ರಂದು ರಾಮನಗರದ ಕಗ್ಗಲೀಪುರದ ಬಳಿ 25-30 ವಯಸ್ಸಿನ ಯುವತಿಯ ಮೃತದೇಹ ಪತ್ತೆಯಾಗಿತ್ತು. ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಬೇರೆಲ್ಲೋ ಕೊಲೆ ಮಾಡಿ ಇಲ್ಲಿ ತಂದು ಸುಟ್ಟಿದ್ದರು. ಗುರುತು ಸಿಗದ ರೀತಿಯಲ್ಲಿ ಸುಟ್ಟು ಕರಕಲಾದ್ದ ದೇಹ ಪತ್ತೆಯಾಗಿತ್ತು.

    MORE
    GALLERIES

  • 79

    Crime News: ರಾಜ್ಯದಲ್ಲಿ ದಾಖಲಾಗುತ್ತಿವೆ ಸಾಲು ಸಾಲು ಕೊಲೆ ಪ್ರಕರಣ; ಚಿತ್ರ ವಿಚಿತ್ರ ರೀತಿಯಲ್ಲಿ ಅಪರಿಚಿತ ಶವಗಳು ಪತ್ತೆ!

    ‘ಹಚ್ಚೆ’ ಹಾದಿ 07: 2023ರ ಮಾರ್ಚ್ 04ರಂದು ಬೆಂಗಳೂರು ಗ್ರಾಮಾಂತರದ ಸೂಲಿಬೆಲೆ ಬಳಿ 40-45 ವಯಸ್ಸಿನ ಪುರುಷ ಮೃತದೇಹ ಪತ್ತೆಯಾಗಿತ್ತು. ಶವದ ಬಲಗೆ ಭುಜದ ಮೇಲೆ ಹ್ಯಾಟ್ರಿಕ್ ಶಿವ ಹಚ್ಚೆ, ಮೈಲಾರಿ ಮತ್ತು ಗಣೇಶನ ಭಾವಚಿತ್ರದ ಹಚ್ಚೆ, ಬಲಗೈನಲ್ಲಿ ಮಂಚಮ್ಮದೇವಿ, ರತ್ನ ಲೋಕೇಶ್ ಎಂಬ ಹಚ್ಚೆ ಹಾಗೂ ಮುಂಗೈ ಮೇಲೆ ಹೂವಿನ ಹಚ್ಚೆ, ಎಡಗೈ ಭುಜದ ಮೇಲೆ ಡಮರುಗ ಸಹಿತ ತ್ರಿಶೂಲ ಹಚ್ಚೆ, ಎಡಗೈ ಭುಜದ ಮೇಲೆ ಪುನೀತ್ ಮತ್ತು ಜಾಕಿ ಹಚ್ಚೆ ಸೇರಿದಂತೆ ಕೈನಲ್ಲಿ THANUJA & JEEVAN ಎಂಬ ಹಚ್ಚೆ ಕಂಡು ಬಂದಿದೆ.

    MORE
    GALLERIES

  • 89

    Crime News: ರಾಜ್ಯದಲ್ಲಿ ದಾಖಲಾಗುತ್ತಿವೆ ಸಾಲು ಸಾಲು ಕೊಲೆ ಪ್ರಕರಣ; ಚಿತ್ರ ವಿಚಿತ್ರ ರೀತಿಯಲ್ಲಿ ಅಪರಿಚಿತ ಶವಗಳು ಪತ್ತೆ!

    ‘ಹಚ್ಚೆ’ ಹಾದಿ 08: 2023 ಮಾರ್ಚ್ 07 ರಂದು ರಾಮನಗರದ ಕುದೂರು ಬಳಿ 35-40 ವಯಸ್ಸಿನ ಪುರುಷ ಮೃತದೇಹ ಪತ್ತೆಯಾಗಿತ್ತು. ಬಲಗೈ ಮೇಲೆ ಅಮ್ಮ, ಸೀನಾ, ಸಿಂಧು ಎಂಬ ಹಚ್ಚೆ ಕಂಡುಬಂದಿತ್ತು. ಬೇರೆ ಪ್ರದೇಶದಲ್ಲಿ ವೈರ್ ಅಥವಾ ದಾರದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಮೃತದೇಹ ತಂದು ಹಾಕಿದ್ದರು.

    MORE
    GALLERIES

  • 99

    Crime News: ರಾಜ್ಯದಲ್ಲಿ ದಾಖಲಾಗುತ್ತಿವೆ ಸಾಲು ಸಾಲು ಕೊಲೆ ಪ್ರಕರಣ; ಚಿತ್ರ ವಿಚಿತ್ರ ರೀತಿಯಲ್ಲಿ ಅಪರಿಚಿತ ಶವಗಳು ಪತ್ತೆ!

    ಅಪರಿಚಿತ ಕೊಲೆ ಪ್ರಕರಣಗಳ ಪತ್ತೆ ತಡ ಆಗೋದು ಏಕೆ?
    ಅಪರಿಚಿತ ಕೊಲೆ ಮೃತದೇಹಗಳ ಪತ್ತೆ ಪ್ರಕರಣದಲ್ಲಿ ಕೊಲೆಗಾರರ ಉದ್ದೇಶವೇ ಕೇಸ್ ಪತ್ತೆಯಾಗಬಾರದು ಅನ್ನೋದಾಗಿರುತ್ತೆ. ಅದಕ್ಕಾಗಿ ಕೊಲೆಯಾದ ವ್ಯಕ್ತಿಯ ಗುರುತು ಸಿಗದ ರೀತಿ ಮಾಡುತ್ತಾರೆ. ಮುಖ ಗುರುತು ಸಿಗದ ರೀತಿಯಲ್ಲಿ, ಅಥವಾ ಬೆಂಕಿ ಹಚ್ಚಿ ಸುಡುತ್ತಾರೆ. ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾದರೆ ಕೇಸ್ ತನಿಖೆ ಸುಲಭವಾಗುತ್ತೆ. ಆದರೆ ಕೊಲೆಯಾದ ವ್ಯಕ್ತಿಯ ಗುರುತೇ ಪತ್ತೆಯಾಗದಿದ್ದಲ್ಲಿ ಪತ್ತೆ ಮಾಡುವುದು ಕಷ್ಟ. ಹೀಗಾಗಿಯೇ ಅದೆಷ್ಟೋ ಅಪರಿಚಿತ ಕೊಲೆ ಪ್ರಕರಣಗಳು ಪತ್ತೆಯಾಗೋದೇ ಇಲ್ಲ. ಈ ಮೇಲಿನ 8 ಕೊಲೆ ಪ್ರಕರಣಗಳ ತನಿಖೆಯಲ್ಲಿ ಈವರೆಗೂ ಯಾವುದೇ ಬೆಳವಣಿಗೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸ್ ಇಲಾಖೆಗೆ ಸಾಲು ಸಾಲು ಕೊಲೆ ಪ್ರಕರಣಗಳು ಸವಾಲಾಗಿದೆ.

    MORE
    GALLERIES