ಇನ್ನು, ಜನಗ್ರಾಮದ ಬೆಲ್ಲಂಪಲ್ಲಿ ನಿವಾಸಿಯಾಗಿದ್ದ ಶ್ರೀನಿವಾಸ್, ಜನಗ್ರಾಮದ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ, ಇಬ್ಬರು ಮಕ್ಕಳೊಂದಿಗೆ ನಗರದಲ್ಲೇ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಇತ್ತೀಚೆಗೆ ಮೊದಲನೇ ಮಗನ ವಿವಾಹವನ್ನು ದಂಪತಿ ನೆರವೇರಿಸಿದ್ದರು. ಆದರೆ ಏಕಾಏಕಿ ಇಂದು ಬೆಳಗ್ಗೆ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದು, ಪತಿ ಶ್ರೀನಿವಾಸ್ ಅವರಿಗೆ ಶಾಕ್ ನೀಡಿತ್ತು. (ಸಾಂದರ್ಭಿಕ ಚಿತ್ರ)
ಬೆಳಗ್ಗೆ ಬಾತ್ ರೂಮಿಗೆ ತೆರಳಿದ್ದ ಸ್ವರೂಪ ಅವರು ಅಲ್ಲಿಯೇ ನೇಣಿಗೆ ಶರಣಾಗಿದ್ದರು. ಇದನ್ನು ನೋಡಿದ್ದ ಪತಿ ಅಲ್ಲಿಯೇ ಕುಸಿದು ಬಿದ್ದು ಕಣ್ಣೀರಿಟ್ಟಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರ ಮೊಬೈಲ್ನಲ್ಲಿ ದೃಶ್ಯಗಳು ಸೆರೆಯಾಗಿತ್ತು. ಕೆಲ ಸಮಯದ ಬಳಿಕ ಅದೇ ಬಾತ್ ರೂಮ್ನಲ್ಲಿ ಶ್ರೀನಿವಾಸ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂದೇ ದಿನ ಕೆಲವೇ ಕ್ಷಣಗಳ ಅಂತರದಲ್ಲಿ ಎಸ್ಐ ದಂಪತಿ ಆತ್ಮಹತ್ಯೆ ಶರಣಾಗಿದ್ದು, ಸ್ಥಳೀಯರಿಗೆ ಶಾಕ್ ನೀಡಿದೆ.