ಅದೇ ರೀತಿ ಜೆ.ಪಿ.ನಗರದ ಕಿರಣ್ ಎಂಬುವರ ಮನೆಗೆ ಸುನೀಲ್, ಲಕ್ಷ್ಮಿ ಹಾಗೂ ನೇತ್ರಾ ಎಂಬುವನ್ನು ಕೆಲಸಕ್ಕೆ ಸೇರಿಸಿದ್ದ. ಕೆಲಸಕ್ಕೆ ಸೇರಿದ್ದ ಲಕ್ಷ್ಮಿ ಸೇಜುವಲ್ (33) ಹಾಗೂ ನೇತ್ರಾ ಶಾಹಿ (43), ಸುನಿಲ್ ಮೊದಲಿಗೆ ಮಾಲೀಕರ ವಿಶ್ವಾಸ ಗಳಿಸಿದ್ದರು. ಈ ಮಧ್ಯೆ ಕಿರಣ್ ತಂದೆ ತಾಯಿ ತಿರುಪತಿಗೆ ಹೋಗಿದ್ದರು. ಇದೇ ಸಮಯ ನೋಡಿ ಕಿರಣ್ಗೆ ಊಟದಲ್ಲಿ ನಿದ್ದೆ ಬರುವಂತ ಔಷಧಿ ಬೆರೆಸಿ ಪ್ರಜ್ಞೆ ತಪ್ಪಿಸಿದ್ದರು.
ನಿದ್ರೆ ಮಾತ್ರ ಕೆಲಸ ಶುರು ಮಾಡುತ್ತಿದ್ದಂತೆ ಖದೀಮರು ಕೂಡ ಕೆಲಸ ಶುರು ಮಾಡಿದ್ದರು. ಎಪ್ಪತ್ತು ಲಕ್ಷಕ್ಕೂ ಅಧಿಕ ನಗದು ಹಾಗೂ ಒಂದು 1,100 ಗ್ರಾಂ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು. ನಿದ್ರೆಯಿಂದ ಎಚ್ಚರ ಆದ ಬಳಿಕ ಕಳ್ಳತನ ಆಗಿದ್ದು ಗೊತ್ತಾಗಿ, ಜೆ.ಪಿ.ನಗರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಕೃತ್ಯ ನಡೆದ 24 ಗಂಟೆಯೊಳಗೆ ಬಂಗಾರ ಹಾಗೂ ಕ್ಯಾಶ್ ಜೊತೆಗೆ ಭಾರತ ಬಿಟ್ಟು ಎಸ್ಕೇಪ್ ಆಗ್ತಿದ್ದ ನೇಪಾಳಿ ಗ್ಯಾಂಗ್ ಸಿಬ್ಬಂದಿಗಳಾದ ಸುನೀಲ್ ಸಾಹಿ, ನೇತ್ರಾ ಶಾಹಿ, ಲಕ್ಷ್ಮಿ ಸೇಜುವಲ್ (33), ಅಂಜಲಿ, ಪ್ರಶಾಂತ್ ಶಾಹಿ (21), ಅಭೇಶ್ ಶಾಹಿ, ಗೋರಖ್ ಶಾಹಿ ಎಂಬುವರನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 77 ಲಕ್ಷ ನಗದು ಹಾಗೂ 1127 ಗ್ರಾಂ ಚಿನ್ನಾಭರಣ ಹಾಗೂ ಎರಡು ಪಿಸ್ತೂಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ. ಜೆ.ಪಿ.ನಗರ ಪೊಲೀಸರು ಉಳಿದ ಮತ್ತೊಬ್ಬ ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಜಯನಗರ ಠಾಣಾ ವ್ಯಾಪ್ತಿಯಲ್ಲಿ ಒಬೇದುಲ್ಲಾ ಎಂಬುವರ ಮನೆಯಲ್ಲಿ ನೇಪಾಳಿ ದಂಪತಿ ವಿವಿಧ ಬ್ರ್ಯಾಂಡ್‌ನ 18 ವಾಚ್ಗಳು, ತಲಾ ಒಂದೊಂದು ಟ್ಯಾಬ್ ಹಾಗೂ ಮೊಬೈಲ್, ಚಿನ್ನಾಭರಣ ದೋಚಿದ್ದವರು ಬಂಧನವಾಗಿದ್ದಾರೆ. ಒಟ್ಟು ಮೂರು ಪ್ರಕರಣಗಳಲ್ಲಿ ಎರಡು ಕೋಟಿ ಮೌಲ್ಯದ ಚಿನ್ನಾಭರಣ, ನಗದು, ಪಿಸ್ತೂಲ್, ವಿದೇಶಿ ಕರೆನ್ಸಿ ವಶಪಡಿಸಿಕೊಂಡಿದ್ದಾರೆ.