Bengaluru: ಜಾಲಿ ರೈಡ್ ಬಂದು ಸರಗಳ್ಳತನ ಮಾಡ್ತಿದ್ದ ಮಿಸ್ಟರ್​ ಆಂಧ್ರ ಅರೆಸ್ಟ್; ಮಾರುವೇಷದಲ್ಲಿ ಪೊಲೀಸರ ಕಾರ್ಯಾಚರಣೆ ಹೇಗಿತ್ತು?

ಬೆಂಗಳೂರಿಗೆ ಜಾಲಿರೈಡ್ ಬಂದು ಸರಗಳ್ಳತನ ಮಾಡುತ್ತಿದ್ದ ಬಾಡಿ ಬಿಲ್ಡರ್ ಮಿಸ್ಟರ್ ಆಂಧ್ರ ವಿಜೇತ ಸೈಯದ್ ಪಾಷಾ ಎಂಬಾತನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

First published:

 • 17

  Bengaluru: ಜಾಲಿ ರೈಡ್ ಬಂದು ಸರಗಳ್ಳತನ ಮಾಡ್ತಿದ್ದ ಮಿಸ್ಟರ್​ ಆಂಧ್ರ ಅರೆಸ್ಟ್; ಮಾರುವೇಷದಲ್ಲಿ ಪೊಲೀಸರ ಕಾರ್ಯಾಚರಣೆ ಹೇಗಿತ್ತು?

  ಆಂಧ್ರ ಪ್ರದೇಶ ಕಡಪ ಮೂಲದ ಮಿಸ್ಟರ್ ಆಂಧ್ರ ವಿಜೇತ ಸೈಯದ್ ಪಾಷಾ ಬಂಧಿತ ಆರೋಪಿ. ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬರುತ್ತಿದ್ದ ಸೈಯದ್ ಇಲ್ಲಿಯೇ ಬೈಕ್ ಕದ್ದು ಸರಗಳ್ಳತನ ಮಾಡುತ್ತಿದ್ದನು.

  MORE
  GALLERIES

 • 27

  Bengaluru: ಜಾಲಿ ರೈಡ್ ಬಂದು ಸರಗಳ್ಳತನ ಮಾಡ್ತಿದ್ದ ಮಿಸ್ಟರ್​ ಆಂಧ್ರ ಅರೆಸ್ಟ್; ಮಾರುವೇಷದಲ್ಲಿ ಪೊಲೀಸರ ಕಾರ್ಯಾಚರಣೆ ಹೇಗಿತ್ತು?

  ಸರಗಳ್ಳತನ ಬಳಿಕ ಬೈಕ್​ ಒಂದು ನಿಗದಿತ ಪ್ರದೇಶದಲ್ಲಿ ನಿಲ್ಲಿಸಿ ಆಂಧ್ರಕ್ಕೆ ತೆರಳುತ್ತಿದ್ದನು. ನಂತರ ಮತ್ತೆ ಬಂದು ಅದೇ ಬೈಕ್ ಬಳಸಿ ಕಳ್ಳತನ ಮಡೋದನ್ನು ರೂಢಿ ಮಾಡಿಕೊಂಡಿದ್ದನು.

  MORE
  GALLERIES

 • 37

  Bengaluru: ಜಾಲಿ ರೈಡ್ ಬಂದು ಸರಗಳ್ಳತನ ಮಾಡ್ತಿದ್ದ ಮಿಸ್ಟರ್​ ಆಂಧ್ರ ಅರೆಸ್ಟ್; ಮಾರುವೇಷದಲ್ಲಿ ಪೊಲೀಸರ ಕಾರ್ಯಾಚರಣೆ ಹೇಗಿತ್ತು?

  ಸೈಯದ್ ಪಾಷಾ ಬಿಟ್ಟು ಹೋದ ಬೈಕ್​ಗೆ ಪೊಲೀಸರು ಜಿಪಿಎಸ್​ ಡಿವೈಸ್ ಅಳವಡಿಸಿದ್ದರು. ಈ ಡಿವೈಸ್ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 6 ಲಕ್ಷ ಮೌಲ್ಯದ  100 ಗ್ರಾಂನ 2 ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.

  MORE
  GALLERIES

 • 47

  Bengaluru: ಜಾಲಿ ರೈಡ್ ಬಂದು ಸರಗಳ್ಳತನ ಮಾಡ್ತಿದ್ದ ಮಿಸ್ಟರ್​ ಆಂಧ್ರ ಅರೆಸ್ಟ್; ಮಾರುವೇಷದಲ್ಲಿ ಪೊಲೀಸರ ಕಾರ್ಯಾಚರಣೆ ಹೇಗಿತ್ತು?

  ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾನಕಿ ಎಂಬವರ ಸರಗಳ್ಳತನವಾಗಿತ್ತು. ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಸಿಸಿಟಿವಿಯ ಜಾಡು ಹಿಡಿದು ಹೊರಟಾಗ ಆರೋಪಿಯ ಕದ್ದ ಬೈಕ್ ಸಿಕ್ಕಿತ್ತು. ಬೈಕ್ ಬಿಟ್ಟು ಹೋದವನು ಮತ್ತೆ ಬರ್ತಾನೆ ಎಂದು ಬೈಕ್​​ಗೆ ಪೊಲೀಸರು ಜಿಪಿಎಸ್ ಅಳವಡಿಸಿದ್ದರು.

  MORE
  GALLERIES

 • 57

  Bengaluru: ಜಾಲಿ ರೈಡ್ ಬಂದು ಸರಗಳ್ಳತನ ಮಾಡ್ತಿದ್ದ ಮಿಸ್ಟರ್​ ಆಂಧ್ರ ಅರೆಸ್ಟ್; ಮಾರುವೇಷದಲ್ಲಿ ಪೊಲೀಸರ ಕಾರ್ಯಾಚರಣೆ ಹೇಗಿತ್ತು?

  ಕೆಲ ದಿನಗಳ ಬಳಿಕ ಬಂದು ಕದ್ದ ಬೈಕ್​​ನಲ್ಲೇ ಸವಾರಿ ಹೊರಟಾಗ ಸೈಯದ್ ಪಾಷಾ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ವೇಳೆ ಮತ್ತೊಬ್ಬ ಆರೋಪಿ ಶೇಕ್ ಅಯೂಬ್ ಎಂಬಾತನನ್ನು ಬಂಧಿಸಲಾಗಿದೆ. (ಪೊಲೀಸ್ ಸಿಬ್ಬಂದಿ)

  MORE
  GALLERIES

 • 67

  Bengaluru: ಜಾಲಿ ರೈಡ್ ಬಂದು ಸರಗಳ್ಳತನ ಮಾಡ್ತಿದ್ದ ಮಿಸ್ಟರ್​ ಆಂಧ್ರ ಅರೆಸ್ಟ್; ಮಾರುವೇಷದಲ್ಲಿ ಪೊಲೀಸರ ಕಾರ್ಯಾಚರಣೆ ಹೇಗಿತ್ತು?

  ಬೈಕ್ ನಿಲ್ಲಿಸಿದ್ದ ಜಾಗದಲ್ಲಿ ಪೊಲೀಸರು ಲಾರಿ ಚಾಲಕ, ಕೂಲಿಕಾರ್ಮಿಕನಂತೆ ನಿಂತು ಆರೋಪಿ ಬರುವಿಕೆಗಾಗಿ ಕಾದಿದ್ದರು. ಪೊಲೀಸರು ಮಾರುವೇಷದಲ್ಲಿರೋ ಫೋಟೋಗಳು ನ್ಯೂಸ್​ 18ಗೆ ಲಭ್ಯವಾಗಿವೆ. (ಮಾರುವೇಷದಲ್ಲಿರುವ ಪೊಲೀಸರು)

  MORE
  GALLERIES

 • 77

  Bengaluru: ಜಾಲಿ ರೈಡ್ ಬಂದು ಸರಗಳ್ಳತನ ಮಾಡ್ತಿದ್ದ ಮಿಸ್ಟರ್​ ಆಂಧ್ರ ಅರೆಸ್ಟ್; ಮಾರುವೇಷದಲ್ಲಿ ಪೊಲೀಸರ ಕಾರ್ಯಾಚರಣೆ ಹೇಗಿತ್ತು?

  ನಟೋರಿಯಸ್ ಸೈಯದ್ ಬಂಧನವಾದ ಹಿನ್ನೆಲೆ ಕಾರ್ಯಾಚರಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಕರಣದ ಆರಂಭದಲ್ಲಿಯೂ ಪೊಲೀಸರು ಕಬ್ಬಾಳಮ್ಮ ದೇವಿಗೆ ಪೂಜೆ ಸಲ್ಲಿಸಿದ್ದರು.

  MORE
  GALLERIES