ಮಾತೃತ್ವಕ್ಕೆ ಕಳಂಕ ತರುವಂತಹ ಘಟನೆ ಗುಜರಾತ್ನಲ್ಲಿ ನಡೆದಿದೆ. ಸುರೇಂದ್ರನಗರ ಜಿಲ್ಲೆಯಲ್ಲಿ ಹೆತ್ತ ತಾಯಿಯೇ ಮಗುವಿನ ಪಾಲಿಗೆ ರಾಕ್ಷಸಿಯಾಗಿದ್ದಾಳೆ. ತನ್ನ ಪ್ರಿಯಕರನಿಗಾಗಿ ಎರಡು ವರ್ಷದ ಮಗನನ್ನೇ ಅಮಾನುಷವಾಗಿ ಕೊಲೆಗೈದಿದ್ದಾಳೆ. ಮಗನನ್ನು ಕಳೆದುಕೊಂಡ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ದಾರುಣ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಬಾಲಕನನ್ನು ಕೊಲೆಗೈದ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಬಂಧನ ಮಾಡಿ ಜೈಲಿಗಟ್ಟಿದ್ದಾರೆ.
ಗುಜರಾತ್ನ ಸಾವರಕುಂಡ್ಲುಗೆ ಸೇರಿದ ಹುಸ್ಸೇನ ವಾಘರ್ ಎಂಬ ಮಹಿಳೆಗೆ 8 ವರ್ಷದ ಹಿಂದೆ ಸಾವರ್ಕುಂಡ್ಲದಲ್ಲಿ ಸಲೀಂ ಭಾಯ್ ರಫಾಯಿನಿಯನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಕೂಡ ಜನಿಸಿದ್ದರು. ಮೊದಲ ಮಗನಿಗೆ ನಾಲ್ಕು ವರ್ಷ ವಯಸ್ಸಾಗಿದ್ದು, ಎರಡನೇ ಮಗ ಆರ್ಯನ್ ಉಮರ್ಗೆ ಎರಡು ವರ್ಷ ವಯಸ್ಸಾಗಿತ್ತು. ಪದೇ ಪದೇ ದಂಪತಿ ನಡುವೆ ಜಗಳವಾಗುತ್ತಿದ್ದ ಕಾರಣ ಮೂರು ವರ್ಷಗಳ ಹಿಂದೆ ಇಬ್ಬರು ದೂರವಾಗಿದ್ದರು. ಗಂಡನೊಂದಿಗೆ ದೂರವಾದ ಬಳಿಕ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹುಸ್ಸೇನ ಇಬ್ಬರು ಮಕ್ಕಳನ್ನು ಕರೆದುಕೊಂಡು ರಾಜ್‌ಕೋಟ್‌ನಲ್ಲಿ ವಾಸಿಸುತ್ತಿದ್ದಳು.
ಹುಸ್ಸೇನ ವಾಘರ್ ಪತಿ ಸಲೀಂ ಭಾಯ್ ಕೂಡ ರಾಜ್‌ಕೋಟ್‌ನಲ್ಲಿ ಅತ್ತೆ ಮನೆಯ ಪಕ್ಕದಲ್ಲೇ ಬೇರೆ ಮನೆ ಮಾಡಿ ವಾಸಿಸುತ್ತಿದ್ದರು. ಆದರೆ ಕಳೆದ 6 ತಿಂಗಳಿನಿಂದ ಪತ್ನಿ ಮಕ್ಕಳನ್ನು ಪದೇ ಪದೇ ಹೊಡೆಯುತ್ತಿರುವುದನ್ನು ಗಮನಿಸಿದ ಸಲೀಂ ಭಾಯ್ ಅಲ್ಲಿಂದ ತನ್ನ ಗ್ರಾಮಕ್ಕೆ ವಾಪಸ್ ಆಗಿದ್ದ. ಈ ನಡುವೆ ಕಳೆದ ನಾಲ್ಕು ತಿಂಗಳಿನಿಂದ ವಾಘರ್, ಹುಸೇನ್ ಜಾಕಿರ್ ಎಂಬ ಯುವಕನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳಂತೆ. ಅಲ್ಲದೆ ಪ್ರಿಯಕರನೊಂದಿಗೆ ಇರಲು ಬೇರೆ ಮನೆಯೊಂದನ್ನು ಮಾಡಿದ್ದಳಂತೆ. ಆದರೆ 2 ವರ್ಷ ಮಗ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದು ಪ್ರಿಯಕರ ಹಾಗೂ ತಾಯಿ ಕೂಡ ಬಾಲಕನಿಗೆ ಹಿಂಸೆ ನೀಡಲು ಶುರು ಮಾಡಿದ್ದರಂತೆ.
ಇನ್ನು, ಮಗನ ಸಾವಿನ ಸುದ್ದಿ ಕೇಳಿದ ತಂದೆ, ಆತನ ಅಂತ್ಯಕ್ರಿಯೆಗೆ ಆಗಮಿಸಿದ್ದಾರೆ. ಈ ವೇಳೆ ಮಗುವಿನ ಮೃತದೇಹ ನೋಡಿ ಅಚ್ಚರಿಕೊಂಡಿದ್ದಾರೆ. ಮಗುವಿನ ಬೆನ್ನು, ಕುತ್ತಿಗೆ, ಹೊಟ್ಟೆ ಭಾಗದಲ್ಲಿ ಪೆಟ್ಟು ಬಿದ್ದಿರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಈ ವೇಳೆ ಮೃತದೇಹ ಪರಿಶೀಲನೆ ನಡೆಸಿದ ವೈದ್ಯರು ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪ್ರಿಯಕರ ಹಾಗೂ ಮಹಿಳೆ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧನ ಮಾಡಿ ವಿಚಾರಣೆ ನಡೆಸಿದ್ದಾರೆ.