ಏನಿದು ಪ್ರಕರಣ? ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಯಾಗಿರುವ ಹರ್ಷ ಎಸ್ 2021ರಲ್ಲಿ ಫ್ಲಿಪ್ ಕಾರ್ಟ್ನಲ್ಲಿ ಐಫೋನ್ ಆರ್ಡರ್ ಮಾಡಿದ್ದರು. ಆದರೆ ಪಾರ್ಸೆಲ್ ತೆರೆದು ನೋಡಿದ ಸಂದರ್ಭದಲ್ಲಿ ಬಾಕ್ಸ್ನಲ್ಲಿ ಚಿಕ್ಕ ಕೀಪ್ಯಾಡ್ ಫೋನ್ ಹಾಗೂ ನಿರ್ಮಾ ಕಂಪನಿಯ ಸೋಪು ಲಭ್ಯವಾಗಿತ್ತು. ಆದರೆ ಪಾರ್ಸೆಲ್ಗಾಗಿ ವಿದ್ಯಾರ್ಥಿ 48,999 ರೂಪಾಯಿ ಪಾವತಿ ಮಾಡಿದ್ದ. (ಸಾಂದರ್ಭಿಕ ಚಿತ್ರ)
ಈ ಹಿನ್ನೆಲೆಯಲ್ಲಿ ಸೇವೆ ನೀಡಿದ್ದ ಫ್ಲಿಪ್ಕಾರ್ಟ್ ಹಾಗೂ ಸಂಸ್ಥೆಯೊಂದಿಗೆ ಮಾರಾಟ ಒಪ್ಪಂದ ಮಾಡಿಕೊಂಡು ಮೊಬೈಲ್ ನೀಡಿದ್ದ ಚಿಲ್ಲರೆ ವ್ಯಾಪಾರಿಯ ಕೆಲಸದಲ್ಲಿ ಲೋಪ ಉಂಟಾಗಿದೆ. ಇದರಿಂದ ಮೋಸದ ವ್ಯಾಪಾರಕ್ಕಾಗಿ 10,000 ರೂಪಾಯಿ ಹಾಗೂ ಗ್ರಾಹಕನಿಗೆ ಉಂಟಾಗಿದ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ 15,000 ಸಾವಿರ ರೂಪಾಯಿ ನೀಡುವಂತೆ ಸೂಚನೆ ನೀಡಿದೆ. ಅಲ್ಲದೆ ಎಂಟು ವಾರಗಳಲ್ಲಿ ಫೋನ್ ಬೆಲೆ 48,999 ರೂಪಾಯಿಗಳನ್ನು ಮರುಪಾವತಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ. (ಸಾಂದರ್ಭಿಕ ಚಿತ್ರ)