ಇತ್ತ ಯುವತಿಯೊಂದಿಗೆ ನಾಪತ್ತೆಯಾಗಿರುವ ವ್ಯಕ್ತಿಯ ಪತ್ನಿ ಕೂಡ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭ ಮಾಡಿದ್ದು, ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನು, ಯುವತಿ ಮದುವೆಯಾಗ ಬೇಕಿದ್ದ ಯುವಕ ಕೂಡ ಅದೇ ಗ್ರಾಮದವನಾಗಿದ್ದು, ಭಾವಿ ಪತ್ನಿ ಆಗಬೇಕಿದ್ದ ಯುವತಿ ಮಾಡಿದ ಕೆಲಸ ನೋಡಿ ಶಾಕ್ ಆಗಿದ್ದಾರೆ. (ಸಾಂದರ್ಭಿಕ ಚಿತ್ರ)
ಯುವತಿ ಮನೆ ಬಿಟ್ಟು ತೆರಳುವ ಮುನ್ನ ಪತ್ರವೊಂದನ್ನು ಬರೆದು ತನ್ನ ರೂಮ್ನಲ್ಲಿಟ್ಟಿದ್ದು, ಪತ್ರದಲ್ಲಿ ತನಗೆ ಇಷ್ಟ ಆಗಿರುವ ವ್ಯಕ್ತಿಯೊಂದಿಗೆ ಹೊರಟು ಹೋಗುತ್ತಿದ್ದಾಗಿ ಬರೆದಿದ್ದಾಳೆ ಎನ್ನಲಾಗಿದೆ. ಇನ್ನು, ಯುವತಿಯ ಕುಟುಂಬಸ್ಥರು ಹೇಳುವ ಪ್ರಕಾರ, ಅವರ ಮಗಳನ್ನು ಘೋಘರ್ ನಿವಾಸಿ ಇರ್ಷಾದ್ ಮನ್ಸೂರಿ ಎಂಬಾತ ಅಪಹರಣ ಮಾಡಿದ್ದು, ಈಗಾಗಲೇ ಆತನಿಗೆ ಮದುವೆಯಾಗಿ ಆರು ಮಕ್ಕಳಿದ್ದಾರೆ. ಅಲ್ಲದೆ ಯುವತಿ ಮನೆಯಲ್ಲಿದ್ದ 40 ಸಾವಿರ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ತಿಳಿಸಿದ್ದಾರೆ. ಇನ್ನು, ಯುವತಿಯನ್ನು ಕರೆದುಕೊಂಡು ಹೋಗಿರುವ ವ್ಯಕ್ತಿ ಹಾಗೂ ಆಕೆ ಇಬ್ಬರು ಬೇರೆ ಬೇರೆ ಧರ್ಮಗಳಿಗೆ ಸೇರಿದ್ದಾರೆ. (ಸಾಂದರ್ಭಿಕ ಚಿತ್ರ)