Honeytrap: ಮೋಹಕ ಮಾತಿನ ಮಹಿಳೆಗೆ ಮನಸೋತ ಉದ್ಯಮಿ; ಮನೆಗೆ ಕರೆಸಿಕೊಂಡವಳು ಮಾಡಿದ್ದು ಮಾತ್ರ ಘನಘೋರ ಕೃತ್ಯ!

ಬೆಂಗಳೂರು: ಹನಿಟ್ರ್ಯಾಪ್‌ ಕೃತ್ಯಗಳು ನಡೆಯೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಉದ್ಯಮಿಗಳಿಂದ ಹಿಡಿದು ರಾಜಕಾರಣಿಗಳ ತನಕ, ಸಿನಿಮಾ ನಟರಿಂದ ಹಿಡಿದು ಮಠಾಧೀಶರ ತನಕ ಹತ್ತಾರು ಹನಿಟ್ರ್ಯಾಪ್‌ ಪ್ರಕರಣಗಳು ಈಗಾಗಲೇ ನಡೆದಿದೆ. ಹಣದ ಉದ್ದೇಶಕ್ಕೆ ಅಥವಾ ಬ್ಲ್ಯಾಕ್‌ಮೇಲ್ ನಡೆಸುವ ಕಾರಣಕ್ಕೆ ಇಂತಹ ಕೃತ್ಯಗಳು ನಡೆದರೂ, ಇನ್ನೂ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಕಾಣುತ್ತಿಲ್ಲ. ಇದೀಗ ಮತ್ತೊಂದು ಹನಿಟ್ರ್ಯಾಪ್‌ ಪ್ರಕರಣ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

First published:

  • 17

    Honeytrap: ಮೋಹಕ ಮಾತಿನ ಮಹಿಳೆಗೆ ಮನಸೋತ ಉದ್ಯಮಿ; ಮನೆಗೆ ಕರೆಸಿಕೊಂಡವಳು ಮಾಡಿದ್ದು ಮಾತ್ರ ಘನಘೋರ ಕೃತ್ಯ!

    ಹೌದು.. ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್‌ ಪ್ರಕರಣ ನಡೆದಿರೋದಾಗಿ ಪ್ರಕರಣ ದಾಖಲಾಗಿದೆ. ನಗರದ ಉದ್ಯಮಿಯೊಬ್ಬ ಹನಿಟ್ರ್ಯಾಪ್‌ಗೆ ಬಲಿಯಾಗಿದ್ದು, ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

    MORE
    GALLERIES

  • 27

    Honeytrap: ಮೋಹಕ ಮಾತಿನ ಮಹಿಳೆಗೆ ಮನಸೋತ ಉದ್ಯಮಿ; ಮನೆಗೆ ಕರೆಸಿಕೊಂಡವಳು ಮಾಡಿದ್ದು ಮಾತ್ರ ಘನಘೋರ ಕೃತ್ಯ!

    ಇತ್ತೀಚೆಗೆ ಉದ್ಯಮಿಗೆ ಟೆಲಿಗ್ರಾಂ ಮೂಲಕ ಮಹಿಳೆಯೊಬ್ಬಳ ಪರಿಚಯವಾಗಿತ್ತು. ತನ್ನನ್ನು ಮೆಹರ್‌ ಎಂದು ಪರಿಚಯಿಸಿಕೊಂಡಿದ್ದ ಮಹಿಳೆ ತನ್ನ ಗಂಡ ದುಬೈನಲ್ಲಿ ಇದ್ದಾನೆ ಎಂದು ಹೇಳಿಕೊಂಡಿದ್ದಳು.

    MORE
    GALLERIES

  • 37

    Honeytrap: ಮೋಹಕ ಮಾತಿನ ಮಹಿಳೆಗೆ ಮನಸೋತ ಉದ್ಯಮಿ; ಮನೆಗೆ ಕರೆಸಿಕೊಂಡವಳು ಮಾಡಿದ್ದು ಮಾತ್ರ ಘನಘೋರ ಕೃತ್ಯ!

    ದಿನನಿತ್ಯ ಮೆಸೇಜ್ ಮಾಡುತ್ತಿದ್ದ ಮಹಿಳೆ ನಂತರ ಉದ್ಯಮಿಯ ಜೊತೆ ತುಂಬಾ ಆತ್ಮೀಯವಾಗಿ ವರ್ತಿಸಿದ್ದಾಳೆ. ಒಂದು ದಿನ ತನ್ನ ಮನೆಗೆ ಬರುವಂತೆ ಆತನಿಗೆ ತಿಳಿಸಿದ್ದು, ಅದರಂತೆ ಆತ ಜೆ.ಪಿ.ನಗರದ ಮನೆಗೆ ಹೋಗಿದ್ದಾನೆ.

    MORE
    GALLERIES

  • 47

    Honeytrap: ಮೋಹಕ ಮಾತಿನ ಮಹಿಳೆಗೆ ಮನಸೋತ ಉದ್ಯಮಿ; ಮನೆಗೆ ಕರೆಸಿಕೊಂಡವಳು ಮಾಡಿದ್ದು ಮಾತ್ರ ಘನಘೋರ ಕೃತ್ಯ!

    ಮಹಿಳೆಯ ಜೊತೆ ರೂಂಗೆ ತೆರಳುತ್ತಿದ್ದಂತೆ ಏಕಾಏಕಿ ಕೋಣೆಗೆ ನುಗ್ಗಿದ ಮೂವರು ಯುವಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಯಾರು ನೀನು? ಇಲ್ಲಿ ಯಾಕೆ ಬಂದಿದ್ದೀಯಾ ಎಂದು ಹಲ್ಲೆ ಮಾಡಿ, ಅರೆಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.

    MORE
    GALLERIES

  • 57

    Honeytrap: ಮೋಹಕ ಮಾತಿನ ಮಹಿಳೆಗೆ ಮನಸೋತ ಉದ್ಯಮಿ; ಮನೆಗೆ ಕರೆಸಿಕೊಂಡವಳು ಮಾಡಿದ್ದು ಮಾತ್ರ ಘನಘೋರ ಕೃತ್ಯ!

    ನಂತರ ನೀನು ಮೂರು ಲಕ್ಷ ನೀಡಿದರೆ ನಿನ್ನನ್ನು ಬಿಟ್ಟು ಕಳಿಸುತ್ತೇವೆ ಎಂದು ಆತನಿಗೆ ಬೆದರಿಕೆ ಹಾಕಿದ್ದು, ಅಲ್ಲದೇ ಫೋನ್‌ ಪೇ ಮೂಲಕ 21 ಸಾವಿರ ರೂಪಾಯಿ ಹಣವನ್ನು ಟ್ರಾನ್ಸ್‌ಫರ್ ಮಾಡಿಸಿಕೊಂಡಿದ್ದಾರೆ.

    MORE
    GALLERIES

  • 67

    Honeytrap: ಮೋಹಕ ಮಾತಿನ ಮಹಿಳೆಗೆ ಮನಸೋತ ಉದ್ಯಮಿ; ಮನೆಗೆ ಕರೆಸಿಕೊಂಡವಳು ಮಾಡಿದ್ದು ಮಾತ್ರ ಘನಘೋರ ಕೃತ್ಯ!

    ಹಣ ನೀಡುವಂತೆ ಬೆದರಿಸಿ ರಾತ್ರಿ 8 ಗಂಟೆಯ ತನಕ ಕಿಡಿಗೇಡಿಗಳು ಉದ್ಯಮಿಯನ್ನು ತನ್ನ ಬಳಿಯೇ ಇರಿಸಿಕೊಂಡಿದ್ದು, ನಂತರ ಮನೆಯಿಂದ ಕ್ರೆಡಿಟ್ ಕಾರ್ಡ್ ತರುವಂತೆ ಆತನನ್ನು ಕರೆದೊಯ್ದಿದ್ದಾರೆ.

    MORE
    GALLERIES

  • 77

    Honeytrap: ಮೋಹಕ ಮಾತಿನ ಮಹಿಳೆಗೆ ಮನಸೋತ ಉದ್ಯಮಿ; ಮನೆಗೆ ಕರೆಸಿಕೊಂಡವಳು ಮಾಡಿದ್ದು ಮಾತ್ರ ಘನಘೋರ ಕೃತ್ಯ!

    ಈ ವೇಳೆ ಆರೋಪಿಗಳ ಕೈಯಿಂದ ಹೇಗೋ ತಪ್ಪಿಸಿಕೊಂಡ ವ್ಯಕ್ತಿ ನಂತರ ನೇರವಾಗಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    MORE
    GALLERIES