Bengaluru: ಪ್ರೇಯಸಿ ಜೊತೆ ಶೋಕಿ ಜೀವನಕ್ಕಾಗಿ ಬೈಕ್​, ಮೊಬೈಲ್​ ಕಳವು; ಖಾಕಿ ಅತಿಥಿಯಾದ ಕಿಲಾಡಿ ಜೋಡಿ!

ಮುರುಗನಿಗೆ ಜೋಡಿ ಆಗಿದ್ದು ಆತನ ಫ್ರೆಂಡ್ ತಂಗಿ. ಫ್ರೆಂಡ್ ತಂಗಿಯನ್ನೇ ಪರಿಚಯ ಮಾಡಿಕೊಂಡಿದ್ದ ಆರೋಪಿ ಮುರುಗಾ, ಆಕೆಗೂ ತನ್ನ ಚಾಲಾಕಿ ಬುದ್ಧಿ ಕಲಿಸಿದ್ದ.

  • News18 Kannada
  • |
  •   | Bangalore [Bangalore], India
First published:

  • 17

    Bengaluru: ಪ್ರೇಯಸಿ ಜೊತೆ ಶೋಕಿ ಜೀವನಕ್ಕಾಗಿ ಬೈಕ್​, ಮೊಬೈಲ್​ ಕಳವು; ಖಾಕಿ ಅತಿಥಿಯಾದ ಕಿಲಾಡಿ ಜೋಡಿ!

    ಬೆಂಗಳೂರು: ಇವರಿಬ್ಬರು ಜೋಡಿ ಹಕ್ಕಿಗಳು. ಬೇರೆ ಬೇರೆ ಏರಿಯಾದವರಾದರೂ ಪರಿಚಯ ಆಗಿ ಲವ್ ಆಗಿತ್ತು. ಆದರೆ ಈ ಜೋಡಿ ಹಕ್ಕಿಗೆ ಸುತ್ತಾಟ, ಮೋಜು ಮಸ್ತಿ ಅಂದರೆ ಪುಲ್ ಖುಷಿ.

    MORE
    GALLERIES

  • 27

    Bengaluru: ಪ್ರೇಯಸಿ ಜೊತೆ ಶೋಕಿ ಜೀವನಕ್ಕಾಗಿ ಬೈಕ್​, ಮೊಬೈಲ್​ ಕಳವು; ಖಾಕಿ ಅತಿಥಿಯಾದ ಕಿಲಾಡಿ ಜೋಡಿ!

    ಈ ಫೋಟೋದಲ್ಲಿರುವ ಈ ಜೋಡಿ ನೋಡಲು ಅಮಾಯಕರ ರೀತಿ ಕಾಣಿಸುತ್ತಾರೆ. ಏನೂ ಗೊತ್ತೆ ಇಲ್ಲ, ಅನ್ನೋ ರೀತಿ ಪೋಸ್​ ಕೊಡುತ್ತಿದ್ದಾರೆ. ಇವರಿಬ್ಬರು ಅಮರ ಪ್ರೇಮಿಗಳು. ಹೌದು, ಶೋಕಿ ಮಾಡಲು ಇವರು ಆಯ್ಕೆ ಮಾಡಿಕೊಂಡಿದ್ದು ಕಳ್ಳತನ. ಕಂಡವರ ಬೈಕ್ ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ ಈ ಕಿಲಾಡಿ ಜೋಡಿ ಈಗ ಮಲ್ಲೇಶ್ವರಂ ಪೊಲೀಸರ ಅತಿಥಿಗಳಾಗಿದ್ದಾರೆ.

    MORE
    GALLERIES

  • 37

    Bengaluru: ಪ್ರೇಯಸಿ ಜೊತೆ ಶೋಕಿ ಜೀವನಕ್ಕಾಗಿ ಬೈಕ್​, ಮೊಬೈಲ್​ ಕಳವು; ಖಾಕಿ ಅತಿಥಿಯಾದ ಕಿಲಾಡಿ ಜೋಡಿ!

    ಬಂಧಿತ ಆರೋಪಿಗಳ ಹೆಸರು ಮುರುಗಾ, ಡ್ರಗ್ ಅಡಿಕ್ಟ್ ಆಗಿದ್ದ ಆರೋಪಿ ಬೈಕ್ ಕಳ್ಳತನ ಮಾಡುವುದರಲ್ಲಿ ಎತ್ತಿದ ಕೈ. ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದರೂ ಕಳ್ಳತನ ಮಾತ್ರ ಬಿಟ್ಟಿರಲಿಲ್ಲ.

    MORE
    GALLERIES

  • 47

    Bengaluru: ಪ್ರೇಯಸಿ ಜೊತೆ ಶೋಕಿ ಜೀವನಕ್ಕಾಗಿ ಬೈಕ್​, ಮೊಬೈಲ್​ ಕಳವು; ಖಾಕಿ ಅತಿಥಿಯಾದ ಕಿಲಾಡಿ ಜೋಡಿ!

    ಮುರುಗನಿಗೆ ಜೋಡಿ ಆಗಿದ್ದು ಆತನ ಫ್ರೆಂಡ್ ತಂಗಿ. ಫ್ರೆಂಡ್ ತಂಗಿಯನ್ನೇ ಪರಿಚಯ ಮಾಡಿಕೊಂಡಿದ್ದ ಆರೋಪಿ ಮುರುಗಾ, ಆಕೆಗೂ ತನ್ನ ಚಾಲಾಕಿ ಬುದ್ಧಿ ಕಲಿಸಿದ್ದ. ಡ್ರಗ್,‌ ಗಾಂಜಾ ಅಭ್ಯಾಸ ಮಾಡಿಕೊಂಡಿದ್ದ ಆರೋಪಿಗಳು ಮೋಜು ಮತ್ತು ಮಾದಕ ಲೈಫ್​ಗೆ ಅಡಿಕ್ಟ್​ ಆಗಿದ್ದರು.

    MORE
    GALLERIES

  • 57

    Bengaluru: ಪ್ರೇಯಸಿ ಜೊತೆ ಶೋಕಿ ಜೀವನಕ್ಕಾಗಿ ಬೈಕ್​, ಮೊಬೈಲ್​ ಕಳವು; ಖಾಕಿ ಅತಿಥಿಯಾದ ಕಿಲಾಡಿ ಜೋಡಿ!

    ಇತ್ತೀಚಿಗೆ ಮಲ್ಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಂದ ಫೋನ್​ ಮಾಡಲು ಅಂತಾ ಮೊಬೈಲ್​ ಈಸ್ಕೊಂಡು ಎಸ್ಕೇಪ್​ ಆಗಿದ್ದರು. ಈ ಕೇಸನ್ನು ಬೆನ್ನಟ್ಟಿದ್ದ ಪೊಲೀಸರು, ಇಬ್ಬರನ್ನ ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಹೊರ ಬಿದ್ದಿದೆ. ಬೈಕ್ ಕಳ್ಳತನಕ್ಕೆ ಇಳಿತಿದ್ದ ಪ್ರೇಮಿಗಳು, ಬೈಕ್​ಗಳನ್ನ ಕದ್ದು ಅವುಗಳನ್ನ ಅಲ್ಪ ಸ್ವಲ್ಪ ಹಣಕ್ಕೆ ಮಾರಾಟ ಮಾಡಿ, ಡ್ರಗ್ಸ್​, ಗಾಂಜಾ ಖರೀದಿಸಿ ಮಜಾ ಮಾಡುತ್ತಿದ್ದರು.

    MORE
    GALLERIES

  • 67

    Bengaluru: ಪ್ರೇಯಸಿ ಜೊತೆ ಶೋಕಿ ಜೀವನಕ್ಕಾಗಿ ಬೈಕ್​, ಮೊಬೈಲ್​ ಕಳವು; ಖಾಕಿ ಅತಿಥಿಯಾದ ಕಿಲಾಡಿ ಜೋಡಿ!

    ಇಬ್ಬರು ಸಾರ್ವಜನಿಕರ ಬಳಿ ಫೋನ್ ಮಾಡುತ್ತೇವೆ ಅಂತ ಮೊಬೈಲ್​ ತೆಗೆದುಕೊಂಡು ಮಾತನಾಡುವಂತೆ ನಾಟಕ ಮಾಡಿ ಎಸ್ಕೇಪ್​ ಆಗುತ್ತಿದ್ದರು. ಅಲ್ಲದೇ ಮನೆ ಎದುರು ನಿಲ್ಲಿಸುತ್ತಿದ್ದ ಬೈಕ್​ಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಉತ್ತರ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದಾರೆ.

    MORE
    GALLERIES

  • 77

    Bengaluru: ಪ್ರೇಯಸಿ ಜೊತೆ ಶೋಕಿ ಜೀವನಕ್ಕಾಗಿ ಬೈಕ್​, ಮೊಬೈಲ್​ ಕಳವು; ಖಾಕಿ ಅತಿಥಿಯಾದ ಕಿಲಾಡಿ ಜೋಡಿ!

    ಸದ್ಯ ಇಬ್ಬರನ್ನೂ ಬಂಧಿಸಿರುವ ಮಲ್ಲೇಶ್ವರಂ ಪೊಲೀಸರು, ಮೂರು ಬೈಕ್​ಗಳು ಮತ್ತು ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.

    MORE
    GALLERIES