ಆರೋಪಿ ಪಾಂಡ್ಯನ್ ತನ್ನ ಇಡೀ ಸಂಬಳವನ್ನು ಆನ್ಲೈನ್ ಜೂಜಾಟದಲ್ಲಿ ಕಳೆಯುತ್ತಿದ್ದನಂತೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬವನ್ನು ಶಾಲಾ ಶಿಕ್ಷಕಿಯಾಗಿರುವ ಆತನ ಪತ್ನಿ ತನ್ನ ಸಂಬಳದಲ್ಲಿ ನಿರ್ವಹಣೆ ಮಾಡುತ್ತಿದ್ದರಂತೆ. ತಾನು ಜೂಜಾಟದಲ್ಲಿ ಕಳೆದುಕೊಂಡಿದ್ದ ಹಣವನ್ನು ಮತ್ತೆ ಗೆಲ್ಲಲು ಬ್ಯಾಂಕ್ ಗ್ರಾಹಕರ ಖಾತೆಯಿಂದ ಹಣವನ್ನು ಅಕ್ರಮವಾಗಿ ಡ್ರಾ ಮಾಡಿಕೊಳ್ಳುತ್ತಿದ್ದನಂತೆ. ಈ ಹಣವನ್ನು ಸಹ ಆತ ಜೂಜಾಟದಲ್ಲಿ ಕಳೆದುಕೊಂಡಿದ್ದಾನೆ.