ನಂತರ ಪೊಲೀಸ್ ಅಧಿಕಾರಿಗಳು ನಟಿಯನ್ನು ರಕ್ಷಿಸಿದ್ದಾರೆ, ಆದರೆ ಅವರ ಗುರುತು ಬಹಿರಂಗಪಡಿಸಿಲ್ಲ. ದಂಧೆ ನಡೆಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಚವಾಣ್ ತಿಳಿಸಿದ್ದಾರೆ. ಬಂಧಿತರನ್ನು ಪ್ರಬೀರ್ ಪಿ.ಮಜುಂದಾರ್, ದಿನೇಶ್ ಯಾದವ್ ಮತ್ತು ವಿರಾಜ್ ಯಾದವ್ ಎಂದು ತಿಳಿದಿದ್ದು, ಅಪಾರ ಪ್ರಮಾಣದ ಹಣದ ಭರವಸೆ ನೀಡಿ ಇಬ್ಬರು ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.