ಪಂದ್ಯದ ಮಿಡಿಲ್ ಅರ್ಡರ್ನಲ್ಲಿ ಹಾರ್ದಿಕ್ ಪಾಂಡ್ಯ ವಾಸಿಂ ಜೂನಿಯರ್ರಂತೆ ಬೌಲ್ ಮಾಡ್ತಿದ್ದಾರೆ. ಆದರೆ ಭಾರತದ ಸ್ಪಿನ್ ಬೌಲರ್ಗಳ ಸಾಮರ್ಥ್ಯ ಪಾಕಿಸ್ತಾನದ ಸ್ಪಿನ್ ದಾಳಿಗಿಂತ ಬಲಿಷ್ಠವಾಗಿದೆ ಎಂದು ಹೇಳಿರುವುದು ಇಲ್ಲಿ ವಿಶೇಷವಾಗಿದೆ. ಆದರೆ ಭಾರತದ ಬೌಲಿಂಗ್ ದಾಳಿಯ ಬಗ್ಗೆ ಮಾತನಾಡುವ ಮುನ್ನ ರಮೀಜ್ ರಾಜಾ, ಟೀಂ ಇಂಡಿಯಾದ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್ ಮತ್ತು ಶಿವಂ ಮಾವಿಯಂತಹ ವೇಗದ ಬೌಲರ್ಗಳನ್ನು ನೆನಪು ಮಾಡಿಕೊಳ್ಳಬೇಕಿದೆ.
ಉಳಿದಂತೆ ಟೀಂ ಇಂಡಿಯಾ ಇನ್ನಿಂಗ್ಸ್ನಲ್ಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೊದಲ ಓವರ್ನಿಂದಲೇ ಬೌಲಿಂಗ್ ಮಾಡ್ತಿದ್ದಾರೆ. ಇದನ್ನು ರಮೀಜ್ ರಾಜಾ ಮರೆತಂತಿದ್ದಾರೆ. ಪಿಸಿಬಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿರುವ ರಮೀಜ್ ರಾಜಾ ಮತ್ತೆ ಕ್ರಿಕೆಟ್ ವೀಕ್ಷಕ ವಿವರಣೆ ನೀಡಲಿದ್ದಾರೆ. ಕಿವೀಸ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಟಿ20 ಸರಣಿಯೊಂದಿಗೆ ಅವರು ಕಾಮೆಂಟೇಟರ್ ಆಗಿ ಕಮ್ಬ್ಯಾಕ್ ಮಾಡುವ ಸಾಧ್ಯತೆಯಿದೆ. ಇನ್ನು, ಪದವಿ ಕಳೆದುಕೊಂಡ ಪಾಕ್ ಮಾಜಿ ಆಟಗಾರ ಹೇಳಿಕೆಗಳನ್ನು ಗಮನಿಸಿರುವ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಅಮೀಜ್ ರಾಜಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿ, ವೈದ್ಯರ ಬಳಿ ಹೋಗುವಂತೆ ಕಾಮೆಂಟ್ ಮಾಡಿ ತಿರುಗೇಟು ನೀಡಿದ್ದಾರೆ.