MS Dhoni Retired: ಅಂತರಾಷ್ಟ್ರೀಯ ಕ್ರಿಕೆಟ್ಗೆ ಧೋನಿ ನಿವೃತ್ತಿ; ಸ್ವಾತಂತ್ರ್ಯ ದಿನಾಚರಣೆಯಂದು ಮಾಹಿ ವಿದಾಯ ಹೇಳಿದ್ಯಾಕೆ?
Dhoni: ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಿಕೆಟ್ ರಂಗದಿಂದ ದೂರವುಳಿದಿದ್ದ 38ರ ಹರೆಯದ ಮಹೇಂದ್ರ ಸಿಂಗ್ ಧೋನಿ ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಸಲ್ಲಿಸುವ ಮೂಲಕ ಭಾರತ ತಂಡದಿಂದ ದೂರ ಸರಿದಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
2/ 13
ಸ್ವಾತಂತ್ರ್ಯ ದಿನವಾದ ಇಂದು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನವನ್ನು ಕೊನೆಗೊಳಿಸಿದ್ದಾರೆ.
3/ 13
ಇನ್ಸ್ಟಾಗ್ರಾಂನಲ್ಲಿ ಈ ಕುರಿತು ವಿಡಿಯೋವನ್ನು ಧೋನಿ ಹಂಚಿಕೊಂಡಿದ್ದು, ನಿವೃತ್ತಿ ಸಮಯ ಬಂದಾಯಿತು ಎಂದಿದ್ದಾರೆ
4/ 13
ಭಾರತಕ್ಕೆ ಎರಡು ಬಾರಿ ವಿಶ್ವಕಪ್ ತಂದುಕೊಂಡ ಕೀರ್ತಿ ಧೋನಿಗೆ ಸಲ್ಲುತ್ತದೆ. ಧೋನಿ ಕೊನೆಯ ಬಾರಿ 2019 ವಿಶ್ವಕಪ್ನಲ್ಲಿ ಸೆಮಿ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದಿದ್ದರು.
5/ 13
2019 ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ರಂಗದಿಂದ ದೂರವುಳಿದಿದ್ದರು.
6/ 13
ಸುದೀರ್ಘ ವಿಶ್ರಾಂತಿಯಲ್ಲಿದ್ದ ಮಹಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪುನರಾಗಮನ ಮಾಡುತ್ತಾರ ಅಥವಾ ಇಲ್ಲವೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿದ್ದವು.
7/ 13
ಅಲ್ಲದೆ ಟಿ-20 ವಿಶ್ವಕಪ್ನಲ್ಲೂ ಭಾಗವಹಿಸುವರೇ ಎಂಬುದು ಅನುಮಾನವೆನಿತ್ತು. ಈ ಮಧ್ಯೆ ಬಿಸಿಸಿಐ ವಾರ್ಷಿಕ ಗುತ್ತಿಗೆ ಒಪ್ಪಂದದಿಂದಲೂ ವಿಶ್ವಕಪ್ ವಿಜೇತ ಮಾಜಿ ನಾಯಕರನ್ನು ಹೊರಗಿಡಲಾಗಿತು.
8/ 13
ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಿಕೆಟ್ ರಂಗದಿಂದ ದೂರವುಳಿದಿದ್ದ 38ರ ಹರೆಯದ ಮಹೇಂದ್ರ ಸಿಂಗ್ ಧೋನಿ ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಸಲ್ಲಿಸುವ ಮೂಲಕ ಭಾರತ ತಂಡದಿಂದ ದೂರ ಸರಿದಿದ್ದಾರೆ.
9/ 13
2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಂಎಸ್ ಧೋನಿ ಪದಾರ್ಪಣೆ ಮಾಡಿದ್ದರು. ಧೋನಿ ನೇತೃತ್ವದಲ್ಲಿ ಭಾರತ 2007ರ ಟಿ-20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಕಪ್ ಗೆದ್ದು ಬೀಗಿತ್ತು.
10/ 13
ಇದೀಗ 74ನೇ ಸ್ವಾತಂತ್ರ್ಯ ದಿನವಾದ ಇಂದು ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಧಿಡೀರ್ ನಿರ್ದಾರ ಅಭಿಮಾನಿಗಳಿಗೆ ಬೇಸರ ತರಿಸಿದೆ.
11/ 13
ಐಪಿಎಲ್ಗೆ ಪಂದ್ಯಾವಳಿ ಪ್ರಾರಂಭಕ್ಕೆ ಕೆಲವೇ ತಿಂಗಳು ಬಾಕಿ ಇದೇ. ಚೆನ್ನೈ ಸೂಪರ್ ಕಿಂಗ್ ತಂಡದ ನಾಯಕನಾಗಿರುವ ಮಾಹಿ ತಂಡದ ಗೆಲುವಿಗೆ ಹೆಚ್ಚಿನ ಶ್ರಮಹಾಕುತ್ತಿದ್ದಾರೆ.
12/ 13
ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೈದಾನದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಧೋನಿ ತಂಡ ಕೂಡ ಪ್ರಬಲ ಪೈಪೋಟಿ ನೀಡುವ ಉತ್ಸಾಹದಲ್ಲಿದೆ
13/ 13
ಇವೆಲ್ಲವನ್ನು ಗಮನಿಸಿದರೆ ಧೋನಿ ಯಾವುದೋ ಆಲೋಚನೆಯನ್ನು ಇಟ್ಟುಕೊಂಡು ನಿವೃತ್ತಿ ಘೋಷಿಸಿದ್ದಾರೆ ಎಂಬುದು ಕ್ರಿಕೆಟ್ ಪ್ರಿಯರ ಮಾತು