David Warner: ನಾನೇನಿದ್ದರೂ ನಿನ್ನಿಂದಲೇ ಎಂದು ಭಾವುಕರಾದ ಡೇವಿಡ್ ವಾರ್ನರ್..!
David Warner's Adorable Family Photos: ಲಾಕ್ಡೌನ್ನಲ್ಲಿ ಡೇವಿಡ್ ತಮ್ಮ ಹೆಂಡತಿ ಹಾಗೂ ಮಕ್ಕಳೊಂದಿಗೆ ಸೇರಿ ಎಲ್ಲರನ್ನೂ ತಮ್ಮ ಟಿಕ್ಟಾಕ್ ವಿಡಿಯೋಗಳ ಮೂಲಕ ರಂಜಿಸಿದ್ದಾರೆ. ಈಗ ತಮ್ಮ ಪತ್ನಿ ಕ್ಯಾಂಡಿ ಬಗ್ಗೆ ಭಾವುಕರಾಗಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
(ಚಿತ್ರಗಳು ಕೃಪೆ: ಡೇವಿಡ್ ವಾರ್ನರ್ ಇನ್ಸ್ಟಾಗ್ರಾಂ ಖಾತೆ)
ಡೇವಿಡ್ ವಾರ್ನರ್ ಈಗಾಗಲೇ ಕ್ರಿಕೆಟ್ ಆಟಗಾರನಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಆದರೆ ಲಾಕ್ಡೌನ್ನಲ್ಲಿ ಅವರಲ್ಲಿರುವ ಮತ್ತೊಂದು ಪ್ರತಿಭೆಯನ್ನು ಅವರ ಪತ್ನಿ ಕ್ಯಾಂಡಿ ಗುರುತಿಸಿ, ಬೆಳಕಿಗೆ ತಂದಿದ್ದಾರೆ.
2/ 23
ಮುದ್ದಿನ ಮಡದಿ ಕ್ಯಾಂಡಿ ಹಾಗೂ ಮಕ್ಕಳೊಂದಿಗೆ ಸೇರಿ ಲಾಕ್ಡೌನ್ನಲ್ಲಿ ನಿಜಕ್ಕೂ ಸಖತ್ ಮನರಂಜಿಸಿದ್ದಾರೆ ಡೇವಿಡ್ ವಾರ್ನರ್.
3/ 23
ಮಕ್ಕಳು ಹಾಗೂ ಪತ್ನಿ ಜೊತೆಗೆ ತೆಲುಗು, ಹಿಂದಿ ಹಾಗೂ ತಮಿಳಿನ ಹಾಡುಗಳಿಗೆ ಸಖತ್ ಸ್ಟೆಪ್ ಹಾಕಿದ ಟಿಕ್ಟಾಕ್ ವಿಡಿಯೋಗಳು ವೈರಲ್ ಆಗಿವೆ.
4/ 23
ಈಗ ಮಡದಿ ಕ್ಯಾಂಡಿ ಕುರಿತಾಗಿ ಭಾವುಕರಾಗಿ ಒಂದು ಪೋಸ್ಟ್ ಮಾಡಿದ್ದಾರೆ.
5/ 23
ಜೀವನದ ಒಂದು ಘಟ್ಟದಲ್ಲಿ ಮಾರ್ಗದರ್ಶನ ಹಾಗೂ ಸ್ಥಿರತೆಗಾಗಿ ಕಾಯುತ್ತಿದ್ದಾಗ ನಿನ್ನ ಪರಿಚಯವಾಯಿತು. ಸರಿಯಾದ ಸಮಯದಲ್ಲಿ ನೀನು ನನ್ನ ಜೀವನಕ್ಕೆ ಕಾಲಿಟ್ಟೆ, ಅದರ ಫಲವೇ ಇಂದು ನಾನು ಈ ಮಟ್ಟದಲ್ಲಿದ್ದೇನೆ.
6/ 23
ಮುದ್ದಾದ ಮೂರು ಮಕ್ಕಳೊಂದಿಗೆ ಖುಷಿಯಾಗಿ ಜೀವನ ಸಾಗಿಸುತ್ತಿದ್ದೇನೆ ಎಂದು ಪ್ರೀತಿಯಿಂದ ಕೆಲವು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.