ಪ್ರತಿಕೆಯೊಂದರ ಸ್ಟಿಂಗ್ ಕಾರ್ಯಾಚರಣೆ ನಂತರ ಪಾಕಿಸ್ತಾನದ ಅಮೀರ್, ಆಸಿಫ್ ಮತ್ತು ಸಲ್ಮಾನ್ ಬಟ್ ಅವರಿಗೆ ಐಸಿಸಿ ಮತ್ತು ಯುಕೆ ಜೈಲು 5 ವರ್ಷಗಳ ನಿಷೇಧ ಹೇರಿತು. 2010ರ ಇಂಗ್ಲೇಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಲಾರ್ಡ್ಸ್ ಸಮಯದಲ್ಲಿ ವೇಗದ ಎಸೆತಗಾರ ಅಮೀರ್ ಮತ್ತು ಆಸಿಫ್ ನೋ ಬಾಲ್ ಎಸೆಯಲು ಒಪ್ಪಿಕೊಂಡಿದ್ದರು. ಪಾಕಿಸ್ತಾನದ ತಂಡದ ನಾಯಕರಾಗಿದ್ದ ಸಲ್ಮಾನ್ ಬಟ್ ಕೂಡ ಈ ಫಿಕ್ಸಿಂಗ್ ಆರೋಪದಡಿ ಸಿಲುಕಿದ್ದರು.