ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

First published:

  • 113

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ವಿಶ್ವವೇ ಕೊರೋನಾ ಭೀತಿಯಿಂದ ತತ್ತರಿಸಿದೆ. ಇತ್ತ ಭಾರತದಲ್ಲೂ ಈ ವೈರಾಣು ಹರಡದಂತೆ ಮುನ್ನೆಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದರೊಂದಿಗೆ ಕೊರೋನಾ ಹೋರಾಟಕ್ಕೆ ಸಹಾಯ ಮಾಡುವಂತೆ ಪ್ರಧಾನಿ ಮೋದಿ ಅವರು ಮನವಿ ಮಾಡಿದ್ದಾರೆ.

    MORE
    GALLERIES

  • 213

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಹೀಗಾಗಿ ಸೋಂಕಿನ ವಿರುದ್ಧ ಹೋರಾಟಕ್ಕೆ ದೇಶದ ಕ್ರೀಡಾಪಟುಗಳು ದೇಣಿಗೆ ನೀಡುವ ಮೂಲಕ ಕೈ ಜೋಡಿಸಿದ್ದಾರೆ. ಈಗಾಗಲೇ ಕುಸ್ತಿಪಟು ಭಜರಂಗ್ ಪುನಿಯಾ, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಧನ ಸಹಾಯ ಮಾಡಿದ್ದಾರೆ.

    MORE
    GALLERIES

  • 313

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಅತ್ತ ಪಾಕಿಸ್ತಾನದಲ್ಲೂ ಕೊರೋನಾ ಮರಣ ಮೃದಂಗವಾಡುತ್ತಿದ್ದು, ಈ ಸೋಂಕಿನ ವಿರುದ್ಧ ಹೋರಾಟಕ್ಕೆ ಸಹಾಯ ಮಾಡುವಂತೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

    MORE
    GALLERIES

  • 413

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಅಫ್ರಿದಿ ಅವರ ಫೌಂಡೇಷನ್ ಇದೀಗ ಸೋಂಕಿನ ವಿರುದ್ಧ ಹೋರಾಡಲು ದೇಣಿಗೆ ಸಂಗ್ರಹಕ್ಕೆ ಇಳಿದಿದ್ದು, ಪಾಕ್ ಆಟಗಾರನ ಈ ಕಾರ್ಯಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಕೂಡ ಬೆಂಬಲ ಸೂಚಿಸಿದ್ದರು.

    MORE
    GALLERIES

  • 513

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಪ್ರತಿಯೊಬ್ಬರಿಗೂ ಇದು ಕಠಿಣ ಸಮಯ. ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಅದಕ್ಕಾಗಿ ನಾನು ಶಾಹಿದ್ ಅಫ್ರಿದಿ ಫೌಂಡೇಶನ್ ಕಾರ್ಯವನ್ನು ಬೆಂಬಲಿಸುತ್ತೇನೆ ಎಂದು ಯುವರಾಜ್ ಟ್ವೀಟ್ ಮಾಡಿದ್ದರು.

    MORE
    GALLERIES

  • 613

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಹಾಗೆಯೇ ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಕೂಡಾ ಶಾಹಿದ್ ಅಫ್ರಿದಿ ಫೌಂಡೇಶನ್​ಗೆ ನೀವು ಸಾಧ್ಯವಾದಷ್ಟು ಸಹಾಯ ಮಾಡಿ ಎಂದು ಟ್ವೀಟ್   ಮೂಲಕ ಮನವಿ ಮಾಡಿದ್ದರು.

    MORE
    GALLERIES

  • 713

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಇದೀಗ ಯುವಿ-ಭಜ್ಜಿ ಮಾಡಿರುವ ಟ್ವೀಟ್​ಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಪಾಕ್ ಪರ ಬ್ಯಾಟ್ ಬೀಸಿದ ಯುವರಾಜ್ ಸಿಂಗ್​ರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

    MORE
    GALLERIES

  • 813

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಹಾಗೆಯೇ ಅಫ್ರಿದಿಯ ಕಾರ್ಯಕ್ಕೆ ಬೆಂಬಲ ಸೂಚಿಸಿರುವ ಹರ್ಭಜನ್ ಸಿಂಗ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.

    MORE
    GALLERIES

  • 913

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಭಾರತದ ಕೊರೋನಾ ಸೋಂಕಿತರ ಬಗ್ಗೆ ಮಾತನಾಡದ ಇವರುಗಳು ಪಾಕ್ ರೋಗಿಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂಬುದು ಕೆಲವರ ಆಕ್ರೋಶ. ಈ ಸಿಟ್ಟನ್ನು #shameonyuvibhajji ಎಂಬ ಹ್ಯಾಶ್ ಟ್ಯಾಗ್ ಬಳಸಿ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

    MORE
    GALLERIES

  • 1013

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಇತ್ತ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿ ಬರುತ್ತಿದಂತೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

    MORE
    GALLERIES

  • 1113

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಎಲ್ಲದಕ್ಕಿಂತ ದೊಡ್ಡದು ಮಾನವೀಯತೆ. ನಾನು ಒಂದೊಳ್ಳೆ ಕಾರ್ಯಕ್ಕೆ ಬೆಂಬಲ ಸೂಚಿಸಿದ್ದೇನೆ. ಯಾರಿಗೂ ನೋವು ಮಾಡಬೇಕೆಂಬ ಉದ್ದೇಶ ನನಗಿರಲಿಲ್ಲ. ನಾನು ಭಾರತೀಯ, ಹಾಗೆಯೇ ಸದಾ ಮಾನವೀಯತೆಯ ಪರ ನಿಲ್ಲುವುದಾಗಿ ತಮ್ಮ ನಿಲುವನ್ನು ಯುವರಾಜ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

    MORE
    GALLERIES

  • 1213

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಹಾಗೆಯೇ ಶಾಹಿದ್ ಅಫ್ರಿದಿಗೆ ಬೆಂಬಲವಾಗಿ ಹರ್ಭಜನ್ ಕೂಡ ವಿಡಿಯೋ ಹಾಕಿದ್ದು, ಅದ್ಭುತ ಕೆಲಸ ಮಾಡುತ್ತಿದ್ದೀರಿ. ಇಂತಹದೊಂದು ಕಾರ್ಯಕ್ಕೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿ. ಕೊರೋನಾ ಬಗ್ಗೆ ಜಾಗೃತಿ ಮೂಡಿಸಿ ಎಂದು ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ತಿಳಿಸಿದ್ದಾರೆ.

    MORE
    GALLERIES

  • 1313

    ಪಾಕ್ ಕ್ರಿಕೆಟಿಗ ಅಫ್ರಿದಿಗೆ ಯುವಿ-ಭಜ್ಜಿ ಬೆಂಬಲ: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸಿಕ್ಸರ್ ಸಿಂಗ್

    ಇನ್ನು ಟೀಂ ಇಂಡಿಯಾದ ಆಟಗಾರರು ಸೂಚಿಸಿದ ಬೆಂಬಲಕ್ಕೆ ಪಾಕ್ ತಂಡ ಮಾಜಿ ನಾಯಕ ಅಫ್ರಿದಿ ಸಹ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಮಾನವೀಯತೆ ದೃಷ್ಟಿಯಿಂದ ದೇಶ ಗಡಿಯನ್ನು ಮೀರಿದ ನಿಮ್ಮ ಪ್ರೀತಿ, ಬೆಂಬಲ ಮತ್ತು ಶಾಂತಿಯನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.

    MORE
    GALLERIES