Xiaomi: ಕೊರೋನಾ ನಡುವೆ ಚೀನಾ ಬಿಡುಗಡೆ ಮಾಡಿದೆ ಡ್ಯುಯಲ್ ಕ್ಯಾಮೆರಾದ ಸ್ಮಾರ್ಟ್ವಾಚ್!
mi bunny watch 4: ಚೀನಾ ಮೂಲದ ಶಿಯೋಮಿ ಕಂಪೆನಿ ಹೊಸ ಸ್ನಾರ್ಟ್ವಾಚ್ ಅನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್ವಾಚ್ನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ.
News18 Kannada | April 3, 2020, 7:49 PM IST
1/ 10
ಚೀನಾ ಮೂಲದ ಶಿಯೋಮಿ ಕಂಪೆನಿ ಹೊಸ ಸ್ಮಾರ್ಟ್ವಾಚ್ ಅನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್ವಾಚ್ನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ.
2/ 10
ಮಾತ್ರವಲ್ಲದೆ, ಸ್ಮಾರ್ಟ್ವಾಚ್ಗೆ ತಕ್ಕಂತೆ ಬ್ಯಾಟರಿ ಬಾಳಿಕೆಯನ್ನು ವೃದ್ಧಿಸಲಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 8 ದಿನಗಳ ಕಾಲ ಬಳಸಬಹುದಾಗಿದೆ.
3/ 10
ಶಿಯೋಮಿ ಕಂಪೆನಿ ಮಿ ಬ್ಯಾಂಡ್ಗಳನ್ನು ಪರಿಚಯಿಸುತ್ತಾ ಬಂದಿದೆ. ಮಿ, ಮಿ1 ಮಿ2, ಕಲರ್ ಡಿಸ್ಪ್ಲೇ ಹೊಂದಿರುವ ಮಿ3 ಬ್ಯಾಂಡ್ಗಳನ್ನು ಪರಿಚಯಿಸುತ್ತಾ ಬಂದಿದೆ. ಜೊತೆಗೆ ಅದಕ್ಕೆ ಅನುಗುಣವಾದ ಫೀಚರ್ಸ್ಗಳನ್ನು ಅದರಲ್ಲಿ ನೀಡಿದೆ.
4/ 10
ಮಿ ಬ್ಯಾಂಡ್ಗಳು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಗಳಿಸಿತ್ತು ಮತ್ತು ಕಡಿಮೆ ಬೆಲೆಯ ಈ ಸ್ಮಾರ್ಟ್ಬ್ಯಾಂಡ್ಗಳು ಗ್ರಾಹಕರ ಮನಸನ್ನು ಬೇಗ ಸೆಳೆದುಕೊಂಡಿತ್ತು.
5/ 10
ಈ ಹಿಂದೆಯೇ ಶಿಯೊಮಿ ಕಂಪೆನಿ ಸ್ಮಾರ್ಟ್ವಾಚ್ಗಳನ್ನು ಮಾರುಕಟ್ಟೆಗೆ ತರಲು ಯೋಜನೆ ಹಾಕಿದ್ದು, ಆದರೆ ಇದೀಗ ಮಿ ಬುನ್ನಿ ಹೆಸರಿನ ವಾಚ್ 4 ಅನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಾತ್ರವಲ್ಲದೆ ಹಲವಾರು ಫೀಚರ್ಸ್ಗಳನ್ನು ಇದರಲ್ಲಿ ನೀಡಿದೆ.
6/ 10
ನೂತನ ಮಿ ಬುನ್ನಿ ವಾರ್ಚ್ 1.78 ಇಂಚಿನ ಅಮೋಲ್ಡ್ ಡಿಸ್ಪ್ಲೇ ಹೊಂದಿದ್ದು, 5 ಮೆಗಾಪಿಕ್ಸೆಲ್ ಡ್ಯುಯೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿ ವಿಡಿಯೋ ಕಾಲ್ ಫೀಚರ್ ಕೂಡ ಇರಲಿದೆ.
7/ 10
ಮಾತ್ರವಲ್ಲದೆ ಎನ್ಎಫ್ಸಿ, ವೈ-ಫೈ, 4ಜಿ, ಸ್ಟೀಕರ್, ಮೈಕ್ರೋಫೋನ್ ಆಯ್ಕೆ ಕೂಡ ಇದರಲ್ಲಿದೆ. ನೀರಿನಿಂದಲೂ ಈ ಸ್ಮಾರ್ಟ್ವಾಚ್ ರಕ್ಷಣೆ ಪಡೆಯಬಹುದಾದ ಸಾಮರ್ಥ್ಯ ಹೊಂದಿದೆ.
8/ 10
296 ಗ್ರಾಂ ತೂಕವಿರುವ ಶಿಯೋಮಿ ಬುನ್ನಿ ವಾಚ್ನಲ್ಲಿ 920ಎಮ್ಎಎಚ್ ಬ್ಯಾಟರಿ ಅಳವಡಿಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 8 ದಿನಗಳ ಕಾಲ ಬಳಸಬಹುದಾಗಿದೆ.
9/ 10
ಚೀನಾ ಮಾರುಕಟ್ಟೆಗೆ ಈ ಸ್ಮಾರ್ಟ್ವಾರ್ಚ್ ಬಿಡುಗಡೆಗೊಂಡಿದ್ದು, ಏಪ್ರಿಲ್ 9ರ ನಂತರ ಶಿಯೋಮಿ ಬುನ್ನಿ ವಾಚ್ ಜೆಡಿ.ಕಾಮ್ ಮತ್ತು ಮಿ.ಡಾಟ್ ಕಾಮ್ ವೆಬ್ಸೈಟ್ನಲ್ಲಿ ಮಾರಾಟ ಶುರು ಮಾಡಲಿದೆ
10/ 10
ಮಾಹಿತಿಗಳ ಪ್ರಕಾರ ಮಿ ಬುನ್ನಿ ಸ್ಮಾರ್ಟ್ವಾಚ್ ಬೆಲೆ 9,600 ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ