Seva Sindhu: ಆಟೋ ಚಾಲಕರ ಸಹಾಯಧನ ಅರ್ಜಿ ಹಾಕಲು ಮತ್ತೊಂದು ಅವಕಾಶ
Lockdown Relief Fund: ಟ್ಯಾಕ್ಸಿ ಚಾಲಕರೇ, ಕೊರೋನಾ ಸಂಕಷ್ಟ ಹಿನ್ನೆಲೆ ಸರ್ಕಾರ ನೀಡುವ ಪರಿಹಾರ ಧನ ನೀವು ಸ್ವೀಕರಿಸಿಲ್ಲವೇ? ಇನ್ನೂ ನೀವು ಅರ್ಜಿ ಹಾಕಿಲ್ಲವಾದ್ರೆ ನಿಮಗೆ ಮತ್ತೊಂದು ಅವಕಾಶವಿದೆ. ಜುಲೈ 31 ರವರೆಗೆ ಅರ್ಜಿ ಸಲ್ಲಿಸಬಹುದು.
ಆಟೋ, ಟ್ಯಾಕ್ಸಿ ಚಾಲಕರೇ ಕೊರೋನಾ ಸಂಕಷ್ಟ ಹಿನ್ನೆಲೆ ಸರ್ಕಾರ ನೀಡುವ ಪರಿಹಾರ ಧನ ನೀವು ಸ್ವೀಕರಿಸಿಲ್ಲವೇ? ಇನ್ನೂ ನೀವು ಅರ್ಜಿ ಹಾಕಿಲ್ಲವಾದ್ರೆ ನಿಮಗೆ ಮತ್ತೊಂದು ಅವಕಾಶವಿದೆ. ಜುಲೈ 31 ರವರೆಗೆ ಅರ್ಜಿ ಸಲ್ಲಿಸಬಹುದು.
2/ 11
ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದಂತೆ ಲಾಕ್ ಡೌನ್ ಮಾಡಲಾಯಿತು. ಇದರಿಂದ ಇಡೀ ದೇಶದ ಅರ್ಥಿಕ ಪರಿಸ್ಥಿತಿಯೇ ಸ್ತಬ್ದಗೊಂಡಿತು. ಆಗ ರಾಜ್ಯ ಸರ್ಕಾರ ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನವಾಗಿ ತಲಾ ಒಬ್ಬ ಆಟೋ ಚಾಲಕರಿಗೆ ಐದು ಸಾವಿರ ನೀಡಲು ನಿರ್ಧರಿಸಿತ್ತು
3/ 11
ಅದರ ಹಿನ್ನೆಲೆ ಈಗಾಗಲೇ ಆಟೋ ಚಾಲಕರು ಸೇವಾ ಸಿಂಧು ಆಪ್ ನಲ್ಲಿ ನೊಂದಣಿ ಮಾಡಿಸಿದ್ದಾರೆ. ಆದರೆ, ಇದರ ಪ್ರಮಾಣ ತುಂಬ ಕಡಿಮೆಯಿದೆ. ಇದರ ಹಿನ್ನೆಲೆ ಸಾರಿಗೆ ಇಲಾಖೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಎಂದು ಸಾರಿಗೆ ಇಲಾಖೆ ವಿಸ್ತರಿಸಿದೆ
4/ 11
ವೆಬ್ಸೈಟ್ನಲ್ಲಿ ಆಟೋರಿಕ್ಷಾ ಚಾಲಕರು/ಟಾಕ್ಸಿ ಚಾಲಕರಿಗೆ ಕೋವಿಡ್-19ರ ಅವಧಿಯಲ್ಲಿ ಪರಿಹಾರ ವಿತರಿಸುವುದು' ಎಂಬ ಬರಹದ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ಸಲ್ಲಿಸುವ ಪುಟ ತೆರೆಯುತ್ತದೆ. ದಯವಿಟ್ಟು ಅರ್ಜಿಯನ್ನು ಆಂಗ್ಲ ಭಾಷೆ ಯಲ್ಲಿ ನೋಂದಾಯಿಸಿ ಎಂದು ಮನವಿ ಮಾಡಲಾಗಿದೆ. ಒಟ್ಟು 4 ಹಂತದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
5/ 11
ಮೊದಲ ಹಂತ ಮೊದಲ ಹಂತದಲ್ಲಿ ಅರ್ಜಿದಾರರ ವಿಳಾಸ ನಮೂದಿಸಬೇಕು. ಆಧಾರ್ ಕಾರ್ಡ್ನಲ್ಲಿ ಇರುವಂತೆ ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ವಿಳಾಸ, ಜಿಲ್ಲೆ, ತಾಲೂಕು, ವರ್ಗವನ್ನು ಭರ್ತಿ ಮಾಡಬೇಕು.
6/ 11
ಚಾಲಕರು 2ನೇ ಹಂತದಲ್ಲಿ ಚಾಲನಾ ಅನುಜ್ಞಾ ಪತ್ರ (ಡಿಎಲ್) ವಿವರಗಳನ್ನು ಭರ್ತಿ ಮಾಡಬೇಕು. ಡಿಎಲ್ ಸಂಖ್ಯೆ, ಡಿಎಲ್ ಸಿಂಧುತ್ವ ದಿನಾಂಕ, ಡಿಎಲ್ನಲ್ಲಿ ಇರುವಂತೆ ನಿಮ್ಮ ಹೆಸರು, ಬ್ಯಾಡ್ಜ್ ಸಂಖ್ಯೆ, ವಾಹನದ ವರ್ಗದ ವಿವರ ತುಂಬಬೇಕು.
7/ 11
ಚಾಲಕರು 2ನೇ ಹಂತದಲ್ಲಿ ಚಾಲನಾ ಅನುಜ್ಞಾ ಪತ್ರ (ಡಿಎಲ್) ವಿವರಗಳನ್ನು ಭರ್ತಿ ಮಾಡಬೇಕು. ಡಿಎಲ್ ಸಂಖ್ಯೆ, ಡಿಎಲ್ ಸಿಂಧುತ್ವ ದಿನಾಂಕ, ಡಿಎಲ್ನಲ್ಲಿ ಇರುವಂತೆ ನಿಮ್ಮ ಹೆಸರು, ಬ್ಯಾಡ್ಜ್ ಸಂಖ್ಯೆ, ವಾಹನದ ವರ್ಗದ ವಿವರ ತುಂಬಬೇಕು.
8/ 11
ಚಾಲಕರು ಲಾಕ್ಡೌನ್ಗಿಂತ ಮುನ್ನ ನೀವು ಚಲಾಯಿಸುತ್ತಿದ್ದ ವಾಹನದ ವಿವರಗಳನ್ನು ತುಂಬಬೇಕು. ವಾಹನದ ಸಂಖ್ಯೆ, ಚಾಸಿಸ್ ಸಂಖ್ಯೆ (ಕೊನೆಯ 5 ಅಂಕಿ), ಆರ್ಸಿ ಪುಸ್ತಕದಲ್ಲಿ ಇರುವಂತೆ ಹೆಸರು, ಸಾರಿಗೆ ವಾಹನದ ವರ್ಗ, ಆಸನ ಸಂಖ್ಯೆ, ಅರ್ಹತಾ ಪತ್ರದ ಸಿಂಧುತ್ವ ದಿನಾಂಕ ಭರ್ತಿ ಮಾಡಬೇಕು
9/ 11
4ನೇ ಹಂತದಲ್ಲಿ ಆಟೋರಿಕ್ಷಾ ಕ್ಯಾಬ್ / ಟ್ಯಾಕ್ಸಿ ಚಾಲಕನಾದ ನಾನು ಲಾಕ್ಡೌನ್ ಸಮಯದಲ್ಲಿ ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯ ಕಳೆದುಕೊಂಡಿರುವುದು ಸತ್ಯವಾಗಿದೆ ಮತ್ತು ಈ ಸಮಯದಲ್ಲಿ ನನ್ನ ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದಿಲ್ಲ ಎಂದು ದೃಢೀಕರಿಸುತ್ತೇನೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು
10/ 11
ಇದರಿಂದ ಅರ್ಜಿ ಸಲ್ಲಿಸಲು ವಿಸ್ತರಣೆಯಾಗಿದ್ದು ಇದುವರೆಗೂ ಅರ್ಜಿ ಸಲ್ಲಿಸಲು ಆಗದೇ ಇರುವ ರಾಜ್ಯದ ಆಟೋ ಚಾಲಕರು ಅರ್ಜಿ ಸಲ್ಲಿಸಲು ಅವಕಾಶ ಮಿಸ್ ಮಾಡ್ಕೋಬೇಡಿ
11/ 11
ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸಮಸ್ಯೆಯಾದರೆ 9449863214 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಅಲ್ಲದೆ, ಇದರ ಜೊತೆಗೆ 080-22236698 ಈ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು