ಕಿರುತೆರೆ ಧಾರವಾಹಿಗೂ ತಟ್ಟಿದ ಕೊರೋನಾ ಎಫೆಕ್ಟ್; ಪ್ರಸಾರ ನಿಲ್ಲಿಸಲಿದೆ ಈ ಸೀರಿಯಲ್ಗಳು
Corona Effect: ಜೀ ಕನ್ನಡ ವಾಹಿನಿಯಲ್ಲಿ ಹೆಚ್ಚು ವೀಕ್ಷಕರ ಮನಗೆದ್ದಿರುವ ಮತ್ತು ಚಾನೆಲ್ಗೆ ಹೆಚ್ಚು ಟಿಆರ್ಪಿ ತಂದುಕೊಡುತ್ತಿರುವ ಗಟ್ಟಿ ಮೇಳ ಮತ್ತು ಜೊತೆ ಜೊತೆ ಸೀರಿಯಲ್ಗಳ ಪ್ರಸಾರವನ್ನು ನಿಲ್ಲಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಕೊರೋನಾ ವೈರಸ್ ಸಿನಿಮಾ ರಂಗವಲ್ಲದೆ ಕಿರುತೆರೆಯ ಮೇಲೂ ದೊಡ್ಡ ಪ್ರಭಾವ ಬೀರಿದೆ. ಎಲ್ಲಾ ಧಾರವಾಹಿಗಳು ತಮ್ಮ ಶೂಟಿಂಗ್ ಅನ್ನು ನಿಲ್ಲಿಸಿವೆ. ಹೀಗಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 2 ಪ್ರತಿಷ್ಠಿತ ಧಾರಾವಾಹಿಗಳು ತಮ್ಮ ಪ್ರಸಾರವನ್ನು ಕೊನೆಗೊಳಿಸಲು ಮುಂದಾಗಿದೆಯಂತೆ.
2/ 11
ಜೀ ಕನ್ನಡ ವಾಹಿನಿಯಲ್ಲಿ ಹೆಚ್ಚು ವೀಕ್ಷಕರ ಮನಗೆದ್ದಿರುವ ಮತ್ತು ಚಾನೆಲ್ಗೆ ಹೆಚ್ಚು ಟಿಆರ್ಪಿ ತಂದುಕೊಡುತ್ತಿರುವ ಗಟ್ಟಿ ಮೇಳ ಮತ್ತು ಜೊತೆ ಜೊತೆ ಸೀರಿಯಲ್ಗಳ ಪ್ರಸಾರವನ್ನು ನಿಲ್ಲಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
3/ 11
ಮಾಹಿತಿಗಳ ಪ್ರಕಾರ ಜೊತೆ ಜೊತೆ ಧಾರಾವಾಹಿ ಮಾರ್ಚ್ 31ರವರೆಗೆ ಮಾತ್ರ ಪ್ರಸಾರವಾಗಲಿದೆ. ಗಟ್ಟಿಮೇಳ ಧಾರಾವಾಹಿ ಎಪ್ರಿಲ್ 2 ಅಥವಾ 3ರ ವರೆಗೆ ವೀಕ್ಷಕರ ವೀಕ್ಷಣೆಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
4/ 11
ಜೊತೆ ಜೊತೆಯಲಿ ಸೀರಿಯಲ್ ಕಿರುತೆರೆಯಲ್ಲಿ ಹೆಚ್ಚು ಜನಮನ್ನಣೆ ಗಳಿಸಿತ್ತು. ಈ ಸೀರಿಯಲ್ನಲ್ಲಿ ನಟ ಅನಿರುದ್ಧ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ ಕಾಣಿಸಿಕೊಂಡಿದ್ದಾರೆ.
5/ 11
ಇನ್ನು ಟಿಆರ್ಪಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಜೊತೆ ಜೊತೆಯಲಿ ಸೀರಿಯಲ್ ಅನ್ನು ಹಿಂದಿಕ್ಕಿ ಗಟ್ಟಿಮೇಳ ಧಾರವಾಹಿ ಮುಂದೆಬಂದಿದೆ, ಈ ಧಾರವಾಹಿ ಕೂಡ ಪ್ರಸಾರವನ್ನು ನಿಲ್ಲಿಸುತ್ತಿರುವುದು ಸಾಕಷ್ಟು ಸೀರಿಯಲ್ ಪ್ರಿಯರಿಗೆ ಶಾಕಿಂಗ್ ಸುದ್ದಿ ನೀಡಿದಂತಾಗಿದೆ.
6/ 11
ದೇಶದಾದ್ಯಂತ ಮಹಾಮಾರಿ ಕೊರೋನಾ ವೈರಸ್ ಉಪಟಳ ಹೆಚ್ಚಾಗಿದೆ. ಸಾಕಷ್ಟು ಜನರ ಜೀವವನ್ನು ಈ ವೈರಾಣು ಬಲಿ ಪಡೆದುಕೊಂಡಿದೆ. ಇತ್ತ ಸಿನಿಮಾ ಇಂಡಸ್ಟ್ರಿಗಳು ಮಾತ್ರವಲ್ಲದೆ ಕಿರುತೆರೆ ಮೇಲೂ ಪ್ರಭಾವಬಿದ್ದಿದೆ.
7/ 11
ಕೇಂದ್ರ ಸರ್ಕಾರ ಕೊರೋನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಶೂಟಿಂಗ್, ಸಿನಿಮಾ ಪ್ರದರ್ಶನವನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿತ್ತು.
8/ 11
ಹೀಗಾಗಿ ಸರ್ಕಾರದ ಆದೇಶವನ್ನು ಪಾಲಿಸಿ ಸಿನಿಮಾಗಳು, ಧಾರವಾಹಿ ಶೂಟಿಂಗ್ಗಳನ್ನು ಮೊಟಕುಗೊಳಿಸಬೇಕಾದ ಅನಿವಾರ್ಯತೆ ಉಂಟಾಗಿತ್ತು.
9/ 11
ಹೀಗಾಗಿ ಚಾನೆಲ್ಗಳು ಸರ್ಕಾರದ ಆದೇಶ ಬರುವವರೆಗೆ ಪ್ರಸಾರ ಅವಧಿಗೆ ಕೊಂಚ ಕತ್ತರಿ ಪ್ರಯೋಗ ಮಾಡಿ ಪ್ರಸಾರ ಮಾಡುತ್ತಿದ್ದವು. ಕೆಲವು ಚಾನೆಲ್ಗಳು ಧಾರಾವಾಗಿ ಆರಂಭವಾದ 3 ನಿಮಿಷಗಳ ಕಾಲ ಟೈಟಲ್ ಟ್ರಾಕ್ಗಳನ್ನು ಪ್ರಸಾರ ಮಾಡುತ್ತಿದ್ದವು.
10/ 11
ಆದರೀಗ ಶೂಟಿಂಗ್ ಮಾಡಿಕೊಂಡಿರುವ ಎಪಿಸೋಡ್ಗಳನ್ನು ಚಾನೆಲ್ಗಳು ಪ್ರಸಾರ ಮಾಡಿಯಾಗಿದೆ. ಇನ್ನು ಪ್ರಸಾರ ಮಾಡಲು ಯಾವುದೇ ಕಂತು ಇಲ್ಲದ ಕಾರಣ ಬೇರೆದಾರಿಯಿಲ್ಲದೆ ಧಾರವಾಹಿಗಳ ಪ್ರಸಾರವನ್ನ ನಿಲ್ಲಸಲು ಜೀ ಕನ್ನಡ ಮುಂದಾಗಿದೆ ಎನ್ನಲಾಗಿದೆ.
11/ 11
ಹೀಗಾಗಿ ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ. ಜೀ ವಾಹಿಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಜೊತೆ ಜೊತೆಯಲಿ ಮತ್ತು ಗಟ್ಟಿಮೇಳ ಧಾರಾವಾಹಿಗಳ ಪ್ರಸಾರವನ್ನು ಸದ್ಯದಲ್ಲೆ ಅಂತ್ಯವಾಗಲಿದೆಯಂತೆ.