ಇಡೀ ವಿಶ್ವವನ್ನೇ ಇಂದು ಪೆಡಂಭೂತದಂತೆ ಕಾಡುತ್ತಿರುವ ಕೊರೋನಾ ಸದ್ಯಕ್ಕಂತೂ ದೂರಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.
2/ 14
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇವತ್ತು ಬೆಳಗ್ಗೆ ಒಬ್ಬ ವ್ಯಕ್ತಿ ಕೊರೋನಾ ಸೋಂಕಿನಿಂದ ಬಲಿಯಾಗಿರುವುದು ವರದಿಯಾಗಿದೆ. ಈ ರಾಜ್ಯದಲ್ಲಿ ಒಟ್ಟು ಮೂವರು ಸಾವನ್ನಪ್ಪಿದಂತಾಗಿದೆ.
3/ 14
ದೇಶಾದ್ಯಂತ ಕೊರೋನಾದಿಂದ ಸತ್ತವರ ಸಂಖ್ಯೆ 18ಕ್ಕೆ ಏರಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 700 ದಾಟಿದೆ. ಕೇಂದ್ರ ಆರೋಗ್ಯ ಇಲಾಖೆ ಜಾಲತಾಣದಲ್ಲಿರುವ ಮಾಹಿತಿ ಪ್ರಕಾರ ಈದ 640 ರೋಗಿಗಳಲ್ಲಿ ಕೊರೋನಾ ಸೋಂಕು ಇದೆ.
4/ 14
ಇನ್ನೂ ವಿಶ್ವಾದ್ಯಂತ ಸಾವಿನ ಪ್ರಮಾಣ 24 ಸಾವಿರದ ಗಡಿ ಮುಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ. ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ಎಲ್ಲರಿಗಿಂತ ಮುಂದಿದೆ. ಇಲ್ಲಿ 85 ಸಾವಿರ ಜನರಿಗೆ ಸೋಂಕು ತಗುಲಿದೆ.
5/ 14
ಸಾವಿನ ಸಂಖ್ಯೆಯಲ್ಲಿ ಇಟಲಿ ಮುಂದಿದೆ. ಇಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ಧಾರೆ. ಸ್ಪೇನ್ನಲ್ಲಿ ಸಾವಿನ ಸಂಖ್ಯೆ 4,300ರ ಗಡಿ ದಾಟಿದೆ.
6/ 14
ಸದ್ಯ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಆರ್ಥಿಕ ಸಹಾಯ ನೀಡಲು ಅನೇಕರು ಮುಂದಾಗಿದ್ದಾರೆ. ಕ್ರೀಡಾಪಟುಗಳು ಕೂಡ ಸಹಾಯ ಹಸ್ತ ಚಾಚುತ್ತಿದ್ದಾರೆ.
7/ 14
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 50 ಲಕ್ಷ ರೂಪಾಯಿಯನ್ನು ನೀಡಿ ಕೋವಿಡ್-19 ನಿಂದ ಬಳಲುತ್ತಿರುವವರಿಗೆ ನೆರವಿನ ಹಸ್ತ ಚಾಚಿದ್ದಾರೆ.
8/ 14
ಸಚಿನ್ ಅವರು ತಲಾ 25 ಲಕ್ಷವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
9/ 14
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ನೂರು ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ.
10/ 14
ಕ್ರೌಡ್ ಫಂಡಿಂಗ್ ವೆಬ್ಸೈಟ್ಗೆ 1 ಲಕ್ಷ ರೂಪಾಯಿ ಧೋನಿ ನೀಡಿದ್ದಾತೆ.
11/ 14
ಇನ್ನೂ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಕೂಡ ಕೋವಿಡ್-19 ನಿಂದ ಬಳಲುತ್ತಿರುವವರಿಗೆ ನೆರವಿನ ಹಸ್ತ ಚಾಚಿದ್ದಾರೆ.
12/ 14
ವಿಶ್ವ ಚಾಂಪಿಯನ್ ಸಿಂಧು, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
13/ 14
ಇದರ ಜೊತೆಗೆ ಏಸ್ ಇಂಡಿಯನ್ ಸ್ಪ್ರಿಂಟರ್ ಹಿಮಾ ದಾಸ್ ತನ್ನ ಒಂದು ತಿಂಗಳ ಸಂಬಳವನ್ನು ಅಸ್ಸಾಂನ ಕೋವಿಡ್-19 ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.
14/ 14
ತನ್ನ ಟ್ವಿಟ್ಟರ್ ಮೂಲಕ ಈ ಬಗ್ಗೆ ತಿಳಿಸಿರುವ ಹಿಮಾದಾಸ್, ಎಲ್ಲರೂ ಒಟ್ಟಾಗಿ ನಿಂತು ನಿರ್ಗತಿಕರನ್ನು ಬೆಂಬಲಿಸುವ ಸಮಯ ಇದಾಗಿದೆ. ಆದ್ದರಿಂದ, ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ತನ್ನ ಒಂದು ತಿಂಗಳ ಸಂಬಳವನ್ನು ನೀಡಲು ನಿರ್ಧರಿಸಿರುವುದಾಗಿ ಬರೆದಿದ್ದಾರೆ.