ಕೊರೋನಾದಿಂದ ವೈರಸ್ ಹಾವಳಿಯಿಂದ ಸಂಕಷ್ಟದಲ್ಲಿರುವ ಜನತೆಗೆ ಟೆಲಿಕಾಂ ಕಂಪೆನಿಗಳು ಹೆಚ್ಚಿನ ಸೇವೆಯನ್ನು ಒದಗಿಸುತ್ತಿರುವುದಲ್ಲದೆ ಉಚಿತ ಇಂಟರ್ನೆಟ್ ಸೇವೆ, ಟಾಕ್ಟೈಂ ಮತ್ತು ವ್ಯಾಲಿಡಿಟಿ ವಿಸ್ತರಣೆಯನ್ನು ಮಾಡಿದೆ.
2/ 9
ಟೆಲಿಕಾಂ ಕಂಪೆನಿಗಳಲ್ಲಿ ಮೊದಲ ಸ್ಥಾನದಲ್ಲಿರವ ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಜಿಯೋ ಫೈಬರ್ ಮೂಲಕ ಉಚಿತ ಇಂಟರ್ನೆಟ್ ಸೇವೆ ಒದಗಿಸುತ್ತಿದೆ.
3/ 9
ಅದರ ಬೆನ್ನಲೇ ರಿಲಾಯನ್ಸ್ ಕಂಪೆನಿ ಮತ್ತೊಂದು ಆಫರ್ ಹೊರಡಿಸಿದೆ. ಜಿಯೋ ಫೋನ್ ಬಳಕೆದಾರರಿಗೆ ವಿಶೇಷ ಕೊಡುಗೆ ನೀಡಲು ಮುಂದಾಗಿದೆ.
4/ 9
ರಿಲಾಯನ್ಸ್ ಜಿಯೋ ಇನ್ಫೋಕಾಮ್ (ಆರ್ ಜಿಯೋ) ತನ್ನ ಜಿಯೋ ಫೋನ್ ಬಳಕೆದಾರರಿಗೆ 100 ನಿಮಿಷಗಳ ಉಚಿತ ಕರೆಯನ್ನು ನೀಡಿದೆ. ಇದರ ಜೊತೆಗೆ 100 ಉಚಿತ ಎಸ್ಎಮ್ಎಸ್ ನೀಡಿದೆ.
5/ 9
ಇನ್ನು ಈ ಸೇವೆಯನ್ನು ಏಪ್ರಿಲ್ 17ರವರೆಗೆ ಒದಗಿಸುವುದಾಗಿ ರಿಲಾಯನ್ಸ್ ಜಿಯೋ ಸಂಸ್ಥೆ ತಿಳಿಸಿದೆ.
6/ 9
ಕೊರೋನಾ ಭೀತಿಯನ್ನು ಎದುರಿಸುತ್ತಿರುವ ಜನತೆಗೆ ರಿಲಾಯನ್ಸ್ ಜಿಯೋ ಒಂದಲ್ಲಾ ಒಂದು ಸೌಲಭ್ಯವನ್ನು ನೀಡುತ್ತಾ ಬಂದಿದೆ. ಕೆಲ ದಿನಗಳ ಹಿಂದೆ ಎಟಿಎಎಂ ಮಷಿನ್ ಮೂಲಕ ರೀಚಾರ್ಜ್ ಮಾಡುವ ಆಯ್ಕೆಯನ್ನು ಪರಿಚಯಿಸಿತ್ತು.
7/ 9
ಇದೀಗ ಜಿಯೋ ಫೋನ್ ಬಳಕೆದಾರರಿಗೆ 100 ನಿಮಿಷಗಳ ಉಚಿತ ಕರೆ ಉಚಿತ ಎಸ್ಎಮ್ಎಸ್ ನೀಡುತ್ತಿದೆ. ಗ್ರಾಹಕರಿಗೆ ಈ ಸೇವೆ ಪ್ರಯೋಜನಕ್ಕೆ ಬರಲಿದೆ
8/ 9
ಮಾತ್ರವಲ್ಲದೆ ಪ್ರಿಪೇಯ್ಡ್ ಬಳಕೆದಾರರಿಗೆ ಜಿಯೋ ವರ್ಕ್ ಫ್ರಮ್ ಹೋಮ್ ಪ್ಲಾನ್ ಅನ್ನು ಪರಿಚಯಿಸಿತ್ತು. ಮನೆಯಲ್ಲಿ ಕುಳಿತು ಆಫೀಸು ಕೆಲ ಮಾಡುತ್ತರುವ ಆನೇಕ ನೌಕಕರಿಗೆ ಈ ಸೌಲಭ್ಯ ಉಪಯೋಗಕ್ಕೆ ಬಂದಿದೆ
9/ 9
ಇನ್ನು ಏರ್ಟೆಲ್ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕಂಪನಿ ವ್ಯಾಲಿಡಿಟಿ ವಿಸ್ತರಣೆ ಮತ್ತು 10 ರೂ. ಟಾಕ್ಟೈಂ ನೆರವನ್ನು ನೀಡಿದೆ.