Prakash Rai Is Feeding 500 Families: ಕೊರೋನಾ ಲಾಕ್ಡೌನ್ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ದಿನಗೂಲಿ ಕಾರ್ಮಿಕರ ನೆರವಿಗೆ ಸೆಲೆಬ್ರಿಟಿಗಳು ಬಂದಿದ್ದಾರೆ. ನಟ ಪ್ರಕಾಶ್ ಸಹ ಹಸಿದವರ ಪಾಲಿನ ಅನ್ನದಾತನಾಗಿದ್ದಾರೆ. ಈ ಹಿಂದೆ ತಮ್ಮ ಬಳಿ ಕೆಲಸ ಮಾಡುವವರಿಗೆ ಎರಡು ತಿಂಗಳ ವೇತನ ಮುಂಚಿತವಾಗಿಯೇ ನೀಡಿ ಸುದ್ದಿಯಾಗಿದ್ದರು. ಈಗ 500 ಕುಟುಂಬಗಳಿಗೆ ದಿನಸಿ ವಿತರಿಸುವ ಮೂಲಕ ಮತ್ತೆ ಮಾದರಿಯಾಗಿದ್ದಾರೆ. (ಚಿತ್ರಗಳು ಕೃಪೆ: ಪ್ರಕಾಶ್ ರಾಜ್ ಟ್ವಿಟರ್ ಖಾತೆ)
ಕೊರೋನಾ ಲಾಕ್ಡೌನ್ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ದಿನಗೂಲಿ ಕಾರ್ಮಿಕರ ನೆರವಿಗೆ ಸೆಲೆಬ್ರಿಟಿಗಳು ಬಂದಿದ್ದಾರೆ. ನಟ ಪ್ರಕಾಶ್ ಸಹ ಹಸಿದವರ ಪಾಲಿನ ಅನ್ನದಾತನಾಗಿದ್ದಾರೆ.
2/ 11
ಹೌದು, ನಿತ್ಯ 250 ಮಂದಿ ದಿನಗೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
3/ 11
ಪ್ರಕಾಶ್ ರಾಜ್ ಫೌಂಡೇಶನ್ ಮೂಲಕ ಅನ್ನದಾನ ಮಾಡುತ್ತಿದ್ದಾರೆ.
4/ 11
ನಿತ್ಯ 250 ಮಂದಿ ನಿರಾಶ್ರಿತರು ಹಾಗೂ ದಿನಗೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುತ್ತಿರುವುದಾಗಿಯೂ, ಅದಕ್ಕಾಗಿ ತಮ್ಮ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿರುವ ಧಾನ್ಯಗಳ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ ಪ್ರಕಾಶ್ ರೈ.
5/ 11
ನಿರಾಶ್ರಿತರಿಗಾಗಿ ನಿತ್ಯ ಊಟ ಸಿದ್ದಪಡಿಸುತ್ತಿರುವ ಚಿತ್ರವನ್ನೂ ಹಂಚಿಕೊಂಡಿದ್ದಾರೆ ಪ್ರಕಾಶ್ ರೈ.
6/ 11
ಇದು ಕೇವಲ ಸರ್ಕಾರದ ಕೆಲಸವಲ್ಲ... ನಮ್ಮೆಲ್ಲ ಜವಾಬ್ದಾರಿ ಎಂದೂ ಬರೆದುಕೊಂಡಿದ್ದಾರೆ ಪ್ರಕಾಶ್ ರೈ.
7/ 11
ಕೆಲವೇ ಗಂಟೆಗಳ ಹಿಂದೆ 500 ಕುಟುಂಬಗಳಿಗೆ ದಿನಸಿ ವಿತರಿಸಿರುವ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
8/ 11
ದಿನಗೂಲಿ ಕಾರ್ಮಿಕರ ಮನೆ ಬಾಗಿಲಿಗೆ ದಿನಸಿ ತಲುಪಿಸುವ ವ್ಯವಸ್ಥೆ ಮಾಡಿರುವ ಪ್ರಕಾಶ್ ರೈ.
9/ 11
ಪ್ರಕಾಶ್ ರೈ ಅವರ ತೋಟದ ಮನೆಯಲ್ಲಿ ಸಂಗ್ರಹಿಸಲಾಗಿರುವ ದಿನಸಿ
10/ 11
ಕೋವಲಂನಲ್ಲಿ ಪ್ರಕಾಶ್ ರಾಜ್ ಫೌಂಡೇಶನ್ನಿಂದ ದಿನಸಿ ವಿತರಣೆ