ಕೊರೋನಾಗೆ ತುತ್ತಾಗಿದ್ದೇನೆಂದು ಏಪ್ರಿಲ್ ಫೂಲ್ ಮಾಡಿದ ಗಾಯಕ! ಮುಂದೇನಾಯ್ತ?
April Fool: ನೆಚ್ಚಿನ ಗಾಯಕ ಕೊರೋನಾ ವೈರಸ್ಗೆ ತುತ್ತಾದರೆ ಎಂದು ಆತಂಕಗೊಂಡಿದ್ದ ಅಭಿಮಾನಿಗಳಿಗೆ ಕೆಲ ಹೊತ್ತಿನ ಬಳಿಕ ಗಾಯಕ ಕಿಮ್ ಜಯಿ ಜೂಂಗ್ ಮತ್ತೊಂದು ಪೋಸ್ಟ್ ಹಾಕುವ ಮೂಲಕ ಶಾಕ್ ನೀಡಿದ್ದಾರೆ.
ಪಾಪ್ ಗಾಯಕ ಕಿಮ್ ಜಯಿ ಜೂಂಗ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಿದ್ದರು. ‘ನನಗೆ ಕೊರೋನಾ ವೈರಸ್ ತಗುಲಿದೆ. ಇದಕ್ಕೆ ನನ್ನ ನಿರ್ಲಕ್ಷಣವೇ ಕಾರಣ, ಸರ್ಕಾರ ಹೊರಡಿಸಿದ್ದ ಆದೇಶವನ್ನು ನಾನು ಕಡೆಗಣಿಸಿದೆ. ಹಾಗಾಗಿ ನನಗೆ ಈ ಗತಿ ಬಂದಿದೆ‘.
2/ 13
‘ನನ್ನ ಈ ನಿರ್ಲಕ್ಷದಿಂದ ಇಡೀ ಸಮಾಜಕ್ಕೆ ತೊಂದರೆ ಆಗುತ್ತಿದೆ. ನನ್ನಿಂದ ಬೇರೆ ಯಾರಿಗಾದರು ಸೋಂಕು ತಗುಲಿದರೆ ದಯವಿಟ್ಟು ಕ್ಷಮಿಸಿ‘ಎಂದು ಪೋಸ್ಟ್ ಮಾಡಿದ್ದರು.
3/ 13
ಇದರ ಜೊತೆಗೆ ‘ನಾನು ಆಸ್ಪತ್ರೆಯಲ್ಲಿ ಇದ್ದೇನೆ ನನ್ನ ಹಳೇ ದಿನಗಳೆಲ್ಲ ನೆನಪಾಗುತ್ತವೆ. ನಾನು ತಪ್ಪು ಮಾಡಿದೆ ಎಂದು ಅನಿಸುತ್ತಿದೆ, ತುಂಬಾ ಜನರನ್ನು ಭೇಟಿ ಮಾಡಬೇಕು ಎಂದು ಅನಿಸುತ್ತಿದೆ‘ ಎಂದು ಬರೆದುಕೊಂಡಿದ್ದರು.
4/ 13
ಕಿಮ್ ಜಯಿ ಜೂಂಗ್ ಅವರ ಇನ್ಸ್ಟಾ ಖಾತೆಯಲ್ಲಿ ಈ ಪೋಸ್ಟ್ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಆತಂಕಗೊಂಡಿದ್ದಾರೆ . ಕೆಲವರು ಬೇಸರ ವ್ಯಕ್ತ ಪಡಿಸಿದ್ದರು. ಮಾತ್ರವಲ್ಲದೆ, ಪೋಸ್ಟ್ಗಳು ವೈರಲ್ ಆದವು.
5/ 13
ಕೆಲವು ನಿಮಿಷಗಳಿಗಳ ಬಳಿಕ ಆ ಪೋಸ್ಟ್ಗಳನ್ನು ಗಾಯಕ ಕಿಮ್ ಜಯಿ ಜೂಂಗ್ ಡಿಲೀಟ್ ಮಾಡಿದ್ದರು.
6/ 13
ನೆಚ್ಚಿನ ಗಾಯಕ ಕೊರೋನಾ ವೈರಸ್ಗೆ ತುತ್ತಾದರೆ ಎಂದು ಆತಂಕಗೊಂಡಿದ್ದ ಅಭಿಮಾನಿಗಳಿಗೆ ಕೆಲ ಹೊತ್ತಿನ ಬಳಿಕ ಗಾಯಕ ಕಿಮ್ ಜಯಿ ಜೂಂಗ್ ಮತ್ತೊಂದು ಪೋಸ್ಟ್ ಹಾಕುವ ಮೂಲಕ ಶಾಕ್ ನೀಡಿದ್ದಾರೆ.
7/ 13
ಆ ಪೋಸ್ಟ್ನಲ್ಲಿ ‘ಇಷ್ಟು ಹೊತ್ತು ನಾನು ಮಾಡಿದ್ದಿ ಏಪ್ರಿಲ್ ಫೂಲ್ ಎಂದು ಬರೆದುಕೊಂಡಿದ್ದಾರೆ. ಈ ರೀತಿ ಯಾರಿಗೂ ಆಗದೇ ಇರಲಿ. ಎಲ್ಲರೂ ಎಚ್ಚರಿಕೆಯಿಂದಿರಿ. ದುಯವಿಟ್ಟು ಯಾರು ಹೊರಗಡೆ ಸುತ್ತಾಟ ನಡೆಸದಿರಿ‘ ಎಂದು ಬರೆದುಕೊಂಡಿದ್ದಾರೆ.
8/ 13
ಬಳಿಕ ಗಾಯಕ ಕಿಮ್ ಜಯಿ ಜೂಂಗ್ ಜನವರಿ 26, 1986 ರಂದು ದಕ್ಷಿಣ ಕೊರಿಯಾದಲ್ಲಿ ಜನಿಸಿದರು.
9/ 13
ಬಳಿಕ ಗಾಯಕ ಕಿಮ್ ಜಯಿ ಜೂಂಗ್ ಹಾಡಿರುವ ಜಸ್ಟ್ ಎನದರ್ ಗರ್ಲ್, ಗುಡ್ ಮಾರ್ನಿಂಗ್ ನೈಟ್, ರೋಟನ್ ಲವ್, ಗುಡ್ ಲಕ್, ಲವ್ ಯೂ ಮೋರ್, ಡೋಂಕ್ ವಾಕ್ ಎವೆ, ಒನ್ ಕಿಸ್, ಮೈನ್, ಯೂ ನೋ ವಾಟ್ ಹಾಡುಗಳನ್ನು ಹಾಡಿದ್ದಾರೆ. ಮಾತ್ರವಲ್ಲದೆ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.