ನವದೆಹಲಿ(ಜ.11): ದೇಶದಲ್ಲಿ ಕೊರೋನಾ-ಓಮೈಕ್ರಾನ್(Corona-Omicron) ಅಟ್ಟಹಾಸ ಮುಂದುವರೆದಿದ್ದು, ಜನರ ಮನಸ್ಸಲ್ಲಿ ಮತ್ತೆ ತಲ್ಲಣ ಮೂಡಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ(Delhi)ಯಲ್ಲಿ ಕೊರೋನಾ ಮಹಾಮಾರಿ ಕೇಕೆ ಹಾಕುತ್ತಿದೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊಸ ನಿರ್ಬಂಧಗಳಿಗೆ (New Rules) ದಾರಿ ಮಾಡಿಕೊಡುತ್ತಿದೆ. ಮತ್ತೊಂದು ಆತಂಕಕಾರಿ ವಿಷವೇನೆಂದರೆ, ದೆಹಲಿಯಲ್ಲಿ ಜನವರಿ 1ರಿಂದ ಅಂದರೆ ಕಳೆದ 10 ದಿನಗಳಲ್ಲಿ ಸುಮಾರು ಒಂದು ಸಾವಿರ ಪೊಲೀಸ್ ಸಿಬ್ಬಂದಿಗೆ(Police Personnel) ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಸೋಮವಾರ COVID-19 ಹರಡುವುದನ್ನು ತಡೆಯಲು ಲಾಕ್‌ಡೌನ್ ಹೇರದಿರಲು ನಿರ್ಧರಿಸಿದೆ. ರೆಸ್ಟೋರೆಂಟ್‌ಗಳಲ್ಲಿ ಕುಳಿತು ಊಟ ಮಾಡುವ ಸೌಲಭ್ಯಗಳನ್ನು ಮುಚ್ಚುವುದು ಮತ್ತು ಮೆಟ್ರೋ ರೈಲುಗಳು ಮತ್ತು ಬಸ್‌ಗಳಲ್ಲಿ ಆಸನ ಸಾಮರ್ಥ್ಯವನ್ನು ಕಡಿಮೆ ಮಾಡುವುದು ಮುಂತಾದ ಹೆಚ್ಚಿನ ನಿರ್ಬಂಧಗಳ ಕುರಿತು ಚರ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.