ಕೊರೋನಾ ಕಡಿವಾಣಕ್ಕೆ ಮಂಡ್ಯದ ವೈದ್ಯನೋರ್ವ ಹೊಸ ವಿನೂತನ ಪ್ರಯೋಗ ಮಾಡಿದ್ದಾರೆ. ತನ್ನ ಖಾಸಗಿ ಕ್ಲಿನಿಕ್ನಲ್ಲಿ ತಪಾಸಣೆಗೆ ಬರುವವರಿಗೆ ಸೋಡಿಯಂ ಹೈಪೋ ಕ್ಲೋರೈಟ್ ಬಳಸಿ ಸ್ಯಾನಿಟೇಜ್ ಸ್ಪ್ರೇ ಮಾಡುತ್ತಿದ್ದಾರೆ. ಡ್ರಾಪ್ಲೆಟ್ ಚೇಂಬರ್ ಕೇರ್ ನಲ್ಲಿ ಕೂರಿಸಿ ತಪಾಸಣೆ ಮತ್ತು ಪರಿಶೀಲನೆ ಮಾಡುವ ಮೂಲಕ ಪ್ರಾಥಮಿಕ ಹಂತದಲ್ಲೇ ಕೊರೋನಾ ಕಡಿವಾಣ ಹಾಕಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ.
ಹೌದು! ಅಂದ ಹಾಗೆ ಇವರ ಹೆಸರು ಡಾ. ಪ್ರಶಾಂತ್ ಈಶ್ವರ್. ಇವರು ಮಂಡ್ಯ ನಗರದ ಪ್ರಸಿದ್ದ ರೇಡಿಯಾಲಜಿಸ್ಟ್ ಆಗಿದ್ದು, ನಗರದಲ್ಲಿ ಅನುಷಾ ಡಯಾಗ್ನಸ್ಟಿಕ್ ಸೆಂಟರ್ ಇಟ್ಟುಕೊಂಡಿದ್ದು ಬಹಳ ಪ್ರಸಿದ್ದಿಯಾಗಿದ್ದಾರೆ. ಕೋವಿಡ್ನಿಂದಾಗಿ ಬಹುತೇಕ ಡಯಾಗ್ನಸ್ಟಿಕ್ ಸೆಂಟರ್ ಮುಚ್ಚಿವೆಯಾದರೂ,ಇವರು ಮಾತ್ರ ಮುಚ್ಚಿಲ್ಲ. ಹಾಗಂತ ಇವರಿಗೆ ಕೊರೋನಾ ಭಯ ಇಲ್ಲ ಅಂತಲ್ಲ. ಇವರಿಗೂ ಭಯವಿದ್ರು, ಇವರು ಇದರಿಂದ ತಪ್ಪಿಸಿಕೊಳ್ಳಲು ತಮ್ಮದೇ ಅನುಭವದ ವಿಧಾನವೊಂದನ್ನು ಕಂಡುಕೊಂಡಿದ್ದಾರೆ.
ಇನ್ನು ಇದಕ್ಕಾಗಿ ಇವರು ತಮ್ಮ ಕ್ಲಿನಿಕ್ನಲ್ಲಿ DCC ಕೊಠಡಿ ನಿರ್ಮಿಸಿಕೊಂಡಿದ್ದಾರೆ. (ಡ್ರಾಪ್ಲೆಟ್ ಚೇಂಬರ್ ಕೇರ್). ಇಲ್ಲಿ ಸ್ಪ್ರೇ ಮೂಲಕ ಸಿಂಪಡಿಸಲಾದ ಸೋಡಿಯಂ ಹೈಪೋಕ್ಲೋರೈಟ್ನ್ನು ಇಲ್ಲಿಗೆ ಬಂದವರು ಸೇವಿಸಿದಾಗ ಶ್ವಾಸಕೋಸದಲ್ಲಿನ ಉಸಿರಾಟದ ಸಮಸ್ಯೆ ಸಲೀಸಾಗಿದೆ. ಸಣ್ಣ ಸಣ್ಣ ಮೈಕ್ಲೋಪೇಟ್ ಗಳಾಗಿ ಈ ರಾಸಾಯನಿಕ ಸೇವನೆ ಮಾಡುವುದು ಆರೋಗ್ಯಕ್ಕೆ ಉಪಯುಕ್ತವಾಗಲಿದೆ.