Lockdown Effect: ಕೊಪ್ಪಳದಲ್ಲಿ ಲಾಕ್​ಡೌನ್ ಹೇಗಿದೆ? ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ದೃಶ್ಯಗಳಿವು..!

ಒಂದು ಫೋಟೋ ಸಾವಿರ ಶಬ್ದಗಳಿಗೆ ಸಮವೆನ್ನುತ್ತಾರೆ. ಏಕೆಂದರೆ ಇಡೀ ಸನ್ನಿವೇಶವನ್ನು ಒಂದು ಫೋಟೋ ಕಟ್ಟಿಕೊಡುತ್ತದೆ. ಕೊರೊನಾ ಸಂದರ್ಭದಲ್ಲಿ ಈ ಸನ್ನಿವೇಶವನ್ನು ಕೊಪ್ಪಳ ಯುವ ಛಾಯಾಗ್ರಹಕನೊಬ್ಬ ತನ್ನ ಅದ್ಭುತ ಫೋಟೋಗಳ ಮೂಲಕ ಕಟ್ಟಿಕೊಡುತ್ತಿದ್ದಾರೆ. ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ನಾಗರಾಜ ಹಡಗಲಿ ಎಂಬ ಯುವ ಛಾಯಾಗ್ರಾಹಕ ಕಳೆದ 10 ವರ್ಷಗಳಿಂದ ಫೋಟೋಗ್ರಫಿಯನ್ನು ಮಾಡುತ್ತಿದ್ದಾರೆ. ಪತ್ರಿಕೆಯೊಂದರ ಫೋಟೋ ಜರ್ನಲಿಸ್ಟ್ ಆಗಿರುವ ನಾಗರಾಜ ಹಡಗಲಿ ಸೃಜನಾತ್ಮ ಫೋಟೋಗಳನ್ನು ಸೆರೆ ಹಿಡಿಯುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ವಿಷಯ ವಸ್ತುವನ್ನು ಗ್ರಹಿಸಿ ಫೋಟೋ ಸೆರೆ ಹಿಡಿಯುವ ಮೂಲಕ ಇಡೀ ಸನ್ನಿವೇಶವನ್ನು ತಮ್ಮ ಛಾಯಾಚಿತ್ರಗಳ ಮೂಲಕ ಕಟ್ಟಿಕೊಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಈ ಲಾಕ್‍ಡೌನ್ ಕೊಪ್ಪಳದ ಸನ್ನಿವೇಶವನ್ನು, ಜನರ ಸ್ಥಿತಿಗತಿಯ ಕುರಿತ ನಾಗರಾಜ ಹಡಗಲಿ ಸೆರೆ ಹಿಡಿದಿರುವ ಹಲವಾರು ಛಾಯಾಚಿತ್ರಗಳು ಈಗ ಗಮನ ಸೆಳೆಯುತ್ತಿವೆ. (ಫೋಟೋ ಕೃಪೆ: ನಾಗರಾಜ ಹಡಗಲಿ)

First published: