Kangana Ranaut: ಕೊರೋನಾದಿಂದ ಗುಣಮುಖರಾದ ಕಂಗನಾ: ಕೋವಿಡ್ ಗೆದ್ದ ಬಗ್ಗೆ ಅನುಭವ ಹಂಚಿಕೊಂಡ ನಟಿ..!
ಕೆಲವು ದಿನಗಳ ಹಿಂದೆಯಷ್ಟೆ ಕಂಗನಾ ರನೋತ್ ತಮಗೆ ಕೊರೋನಾ ಸೋಂಕಾಗಿರುವುದಾಗಿ ತಿಳಿಸಿದ್ದರು. ಈಗ ನಟಿ ಸೋಂಕಿನಿಂದ ಗುಣಮುಖರಾಗಿದ್ದು, ಪರೀಕ್ಷೆ ಮಾಡಿಸಿರುವ ವರದಿಯಲ್ಲಿ ನೆಗೆಟಿವ್ ಬಂದಿದೆಯಂತೆ. ಅಲ್ಲದೆ ಕೋವಿಡ್ ಬಂದಾಗ ಏನೆಲ್ಲ ಮಾಡಬಹುದು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಕ್ವೀನ್. (ಚಿತ್ರಗಳು ಕೃಪೆ: Kangana Ranaut - Instagram)
ನಟಿ ಕಂಗನಾ ರನೋತ್ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
2/ 8
ಕೆಲವು ದಿನಗಳ ಹಿಂದೆ ಕಂಗನಾ ತಮಗೆ ಕೋವಿಡ್ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
3/ 8
ಈಗ ಗುಣಮುಖರಾಗಿದ್ದು, ಪರೀಕ್ಷೆಯ ವರದಿ ನೆಗೆಟಿವ್ ಬಂದಿದ್ದು, ಅವರು ಹೇಗೆ ಕೊರೋನಾ ಗೆದ್ದರು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
4/ 8
ಕೊರೋನಾ ಬಂದ ಕೂಡಲೇ ಭಯ ಪಡುವುದನ್ನು ಬಿಡಬೇಕು. ತಮಗೆ ಇರುವ ಸಮಸ್ಯೆಗೆ ಮನೆಯಲ್ಲಿ ಏನೆಲ್ಲ ಮಾಡಬಹುದು ಎಂದು ಅರಿತುಕೊಳ್ಳಬೇಕು.
5/ 8
ಉಸಿರಾಟದ ಸಮಸ್ಯೆ ಇದ್ದಾಗ ಸ್ಟೀಮ್ ತೆಗೆದುಕೊಳ್ಳುವುದು ಹಾಗೂ ಗಂಟಲು ನೋವಿದ್ದರೆ ಚೆಚ್ಚಗಿನ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಬೇಕು. ಹೀಗೆ ಮನೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ಎಲ್ಲವನ್ನೂ ಮಾಡಬೇಕು ಎಂದಿದ್ದಾರೆ ಕಂಗನಾ.
6/ 8
ಎಲ್ಲದಕ್ಕಿಂತ ಹೆಚ್ವಾಗಿ ನಕಾರತ್ಮಕ ವಿಷಯಗಳನ್ನು ಹತ್ತಿರ ಬರಲು ಬಿಡಬಾರದು. ಯಾರಾದರೂ ಅಂತಹ ನೆಗೆಟಿವ್ ವಿಷಯಗಳನ್ನು ನಿಮ್ಮ ತಲೆಗೆ ತುಂಬಲು ಬಂದರೆ ಅವರಿಂದ ದೂರ ಇರಿ ಎಂದು ಕಂಗನಾ ಸಲಹೆ ನೀಡಿದ್ದಾರೆ.
7/ 8
ಬಾಲಿವುಡ್ ನಟಿ ಕಂಗನಾ ಅವರು ದ್ವೇಷಪೂರಿತ ಟ್ವೀಟ್ಗಳನ್ನು ಮಾಡುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ಟ್ವಿಟರ್ ಸಹ ಇವರ ಖಾತೆಯನ್ನು ಅಮಾನತುಗೊಳಿಸಿತು.
8/ 8
ಇದರ ಬೆನ್ನಲ್ಲೇ ಕಂಗನಾ ಕೋವಿಡ್ ಒಂದು ಚಿಕ್ಕ ಜ್ವರ ಎಂದು ಮಾಡಿದ್ದ ಪೋಸ್ಟ್ ಅನ್ನು ಇನ್ಸ್ಟಾಗ್ರಾಂ ಡಿಲೀಟ್ ಮಾಡಿತ್ತು. ಇದು ಕೊರೋನಾ ಬಗ್ಗೆ ತಪ್ಪು ಮಾಹಿತಿ ನೀಡುವ ಪೋಸ್ಟ್ ಎಂದು ಕಾರಣ ನೀಡಿತ್ತು.