Janhvi kapoor: ಶರಣ್ ಶರ್ಮಾ ನಿರ್ದೇಶಿಸುತ್ತಿರುವ 'ಗುಂಜನ್ ಸಕ್ಸೇನಾ' ದಿ ಕಾಶ್ಮೀರ್ ಗರ್ಲ್ ಸಿನಿಮಾದಲ್ಲಿ ಮುದ್ದುಮುಖದ ಬೆಡಗಿ ಜಾಹ್ನವಿ ಕಾರ್ಗಿಲ್ ಹುಡುಗಿಯಾಗಿ ಕಾಣಿಸಲಿದ್ದಾರೆ. ಈ ಚಿತ್ರವು ಭಾರತದ ಮೊದಲ ಮಹಿಳಾ ಐಎಎಫ್ ಪೈಲಟ್ ಗುಂಜನ್ ಸಕ್ಸೇನಾ ಅವರ ಜೀವನಗಾಥೆಯನ್ನು ತಿಳಿಸಲಿದೆ.
ದಢಕ್ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಅಡಿಯಿಟ್ಟ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಮತ್ತು ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಾರಣ ಮನೆಕೆಲಸದಾತ.
2/ 74
ಕಳೆದ ಎರಡು ತಿಂಗಳಿಂದ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದೆ. ಇದರಿಂದ ಶೂಟಿಂಗ್ ಎಲ್ಲಾ ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ಜಾಹ್ನವಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
3/ 74
ಕೊರೋನಾ ವೈರಸ್ ಭೀತಿಯಲ್ಲಿ ಮನೆಯಿಂದ ಎಲ್ಲೂ ಜಾಹ್ನವಿ ಹೊರ ಹೋಗಿರಲಿಲ್ಲ. ಹಾಗೆಯೇ ಈ ಸಾಂಕ್ರಾಮಿಕ ರೋಗದ ಬಗ್ಗೆ ನಟಿ ಸಾಮಾಜಿಕ ಜಾಲತಾಣದ ಮೂಲಕ ಜಾಗೃತಿ ಮೂಡಿಸುತ್ತಿದ್ದರು.
4/ 74
ಆದರೆ ಬೋನಿ ಕಪೂರ್ ಮನೆಯ ಕೆಲಸದವನು ಮಾತ್ರ ಅಲ್ಲಿ ಇಲ್ಲಿ ಅಡ್ಡಾಡಿದ್ದಾರೆ. ಅಲ್ಲದೆ ಯಾವುದೇ ತೊಂದರೆ ಇಲ್ಲ ಎಂಬಂತೆ ಪ್ರತಿ ದಿನ ಕೆಲಸಕ್ಕೂ ಹಾಜರಾಗುತ್ತಿದ್ದರು.
5/ 74
ಆದರೆ ಕೆಲ ದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ವರದಿ ಬಂದಿದೆ. ಇದರಿಂದ ಇದೀಗ ಬೋನಿ ಕಪೂರ್ ಕುಟುಂಬ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
6/ 74
ನಟಿ ಜಾಹ್ನವಿ ನೆಲೆಸಿರುವ ಲೋಖಂಡ್ವಾಲಾದ ಮನೆಯಲ್ಲಿ ಕೆಲಸ ಮಾಡುವ ಚರಣ್ ಸಾಹು ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. 23 ವರ್ಷದ ಸಾಹು ಕಳೆದ ಶನಿವಾರದಿಂದ ಅನಾರೋಗ್ಯಕ್ಕೀಡಾಗಿದ್ದರು.
7/ 74
ಇದನ್ನು ಗಮನಿಸಿದ ಜಾಹ್ನವಿ ತಂದೆ ಕೆಲಸದವನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು. ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಇದೀಗ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ.
8/ 74
ಹಾಗೆಯೇ ನಟಿ ಜಾಹ್ನವಿ ಹಾಗೂ ತಂಗಿ ಖುಷಿ ಅವರನ್ನು ಕೂಡ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೆ ಎಲ್ಲಾ ರೀತಿಯ ಮುನ್ನಚ್ಚೆರಿಕೆಯನ್ನು ತೆಗೆದುಕೊಳ್ಳುವ ಮೂಲಕ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ.
9/ 74
ಕಳೆದ ಎರಡು ತಿಂಗಳಿಂದ ಕೊರೋನಾ ವೈರಸ್ ಹರಡುವಿಕೆ ಬಗ್ಗೆ ಜಾಗೃತಿ ಮೂಡಿಸುತ್ತಾ ಮನೆಯಲ್ಲಿಯೇ ಕಾಲ ಕಳೆದಿದ್ದ ಜಾಹ್ನವಿ ಇದೀಗ ತಾನು ಮಾಡದ ತಪ್ಪಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
10/ 74
ಇನ್ನೇನು ಲಾಕ್ಡೌನ್ ಮುಗಿದು ಚಿತ್ರೀಕರಣಕ್ಕೆ ಅವಕಾಶ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದ ನಟಿ ಇದೀಗ ಮತ್ತೆ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ.
11/ 74
ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೂ ಶಿಕ್ಷೆ ಎಂಬಂತೆ ಜಾಹ್ನವಿ ಹಾಗೂ ಮನೆಯವರು ಕ್ವಾರಂಟೈನ್ನಲ್ಲೇ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ಎಲ್ಲರೂ ಮನೆಯಲ್ಲಿಯೇ ಇರುವಂತೆ ಮನವಿ ಮಾಡಿದ್ದಾರೆ.