ಕೊರೋನಾ ವೈರಸ್ನಿಂದಾಗಿ ದೇಶವೇ ಸಂಪೂರ್ಣ 21 ದಿನಗಳ ಕಾಲ ಲಾಕ್ಡೌನ್ ಆಗಿದೆ. ಜನರು ಕೂಡ ಕೊರೋನಾ ಭೀತಿಯಿದಾಗಿ ಮನೆಯಿಂದಲೇ ಆಫೀಸ್ ಕೆಲಸ ಮಾಡುತ್ತಿದ್ದಾರೆ.
2/ 9
ಮನೆಯಲ್ಲಿ ಕುಳಿತು ಕೆಲಸ ಮಾಡುತ್ತಿರುವ ನೌಕಕರಿಗಾಗಿ ಟೆಲಿಕಾಂ ಕಂಪೆನಿಗಳು ಹೊಸ ಯೋಜನೆಗಳನ್ನು ಪರಿಚಯಿಸಿದೆ. ವೇಗದ ಇಂಟರ್ನೆಟ್ ಸೇವೆಯನ್ನು ನೌಕರರಿಗೆ ನೀಡುತ್ತಿದೆ. ಇದರಿಂದಾಗಿ ಮನೆಯಲ್ಲಿ ಕುಳಿತು ಆಫೀಸು ಕೆಲ ಮಾಡುವವ ನೌಕಕರಿಗೆ ಪ್ರಯೋಜನ ಸಿಕ್ಕಿದೆ.
3/ 9
ಹೀಗಿರುವಾಗ ಟೆಲಿಕಾಂ ಸಂಸ್ಥೆಯೊಂದು ಉಚಿತವಾಗಿ ಇಂಟರ್ನೆಟ್ ಸೇವೆಯನ್ನು ನೀಡುತ್ತಿದೆ ಎಂಬ ಸುಳ್ಳು ಸುದ್ದಿಯೊಂದು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿದೆ.
4/ 9
ಹೌದು. ರಿಲಯನ್ಸ್ ಜಿಯೋ ಸಂಸ್ಥೆಯ ಹೆಸರು ಬಳಸಿಕೊಂಡು ವಾಟ್ಸ್ಆ್ಯಪ್ನಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಇದರಲ್ಲಿ 498 ರೂ.ಗಳ ಉಚಿತ ರೀಚಾರ್ಜ್ ನೀಡುವುದಾಗಿ ಸಂದೇಶ ಹರಿದಾಡುತ್ತಿದೆ.
5/ 9
ಈಗಗಾಲೇ ಸಂದೇಶ ವೈರಲ್ ಆಗಿದ್ದು. ಈ ಸಂದೇಶದ ಜೊತೆಗೆ ಲಿಂಕ್ ಒಂದನ್ನು ನೀಡಲಾಗಿದೆ. ಲಿಂಕ್ ಕ್ಲಿಕ್ ಮಾಡಿದ ನಂತರ ನೀವು ಉಚಿತ ರಿಚಾರ್ಜ್ ಮಾಡುವ ಮಾಹಿತಿ ಪಡೆಯುತ್ತೀರಿ ಎಂದು ಬರೆಯಲಾಗಿದೆ.
6/ 9
ಜೊತೆಗೆ ಈ ಕೊಡುಗೆ ಮಾರ್ಚ್ 31ರವರೆಗೆ ಮಾತ್ರ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದೆ. ಮಾಹಿತಿಯ ಪ್ರಕಾರ ಇದೊಂದು ಮೊಬೈಲ್ ಅಥವಾ ಕಂಪ್ಯೂಟರ್ ಮಾಲ್ವೇರ್ ಎಂದು ಹೇಳಲಾಗುತ್ತಿದೆ. ಹಾಗಾಗಿ ಇಂತಹ ಸಂದೇಶಗಳ ಮೇಲೆ ಕ್ಲಿಕ್ ಮಾಡುವ ಮುನ್ನ ಎಚ್ಚರವಹಿಸುವುದು ಅಗತ್ಯ.
7/ 9
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರದಾಡುತ್ತಿರುತ್ತವೆ. ಇದೀಗ ರಿಲಾಯನ್ಸ್ ಜಿಯೋ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಮತ್ತು ಉಚಿತ ರೀಚಾಜ್ ಸೇವೆ ಪಡೆಯಿರಿ ಎಂಬ ಸುಳ್ಳು ಸುದ್ದಿಯನ್ನು ವಾಟ್ಸ್ಆ್ಯಪ್ನಲ್ಲಿ ಹರಿ ಬಿಡಲಾಗುತ್ತಿದೆ .ಹಾಗಾಗಿ ಗ್ರಾಹಕರು ಎಚ್ಚರಿಕೆಯಿಂದ ಇರುವುದು ಒಳಿತು.
8/ 9
ಕೇಂದ್ರ ಸರ್ಕಾರ ಕೊರೋನಾ ವೈರಸ್ ಹರಡುವ ಭೀತಿಯಿಂದ ಇಡೀ ದೇಶವನ್ನು 21 ದಿನಗಳ ಕಾಲ ಲಾಕ್ ಮಾಡಿದೆ. ಹೀಗಿರುವಾಗ ಅನೇಕ ನೌಕಕರು ಮನೆಯಲ್ಲಿ ಕುಳಿತು ಕಂಪೆನಿ ಕೆಲಸಗಳನ್ನು ಮಾಡುತ್ತಿದ್ದಾರೆ.
9/ 9
ಇಂತವರಿಗಾಗಿ ರಿಲಾಯನ್ಸ್ ಜಿಯೋ ‘ವರ್ಕ್ ಫ್ರಮ್ ಹೋಮ್ ಪ್ಲಾನ್‘ ಅನ್ನು ಪರಿಚಯಿಸಿದೆ. ಗ್ರಾಹಕರು 231 ರೂಪಾಯಿ ರೀಚಾರ್ಜ್ ಮಾಡುವ ಮೂಲಕ ದೈನಂದಿನ ಬಳಕೆಗೆ 2ಜಿಬಿ ಡೇಟಾ ಪಡೆಯಬಹುದು.