IPL 2020: ಐಪಿಎಲ್ ಯಾವಾಗ ಆರಂಭವಾಗಲಿದೆ?; ಖಚಿತ ಮಾಹಿತಿ ನೀಡಿದ ಆಶಿಶ್ ನೆಹ್ರಾ

ಸ್ಟಾರ್ ಸ್ಪೋರ್ಟ್ಸ್ ಆನ್​ಲೈನ್​ ಚಿಟ್ ಚಾಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ವೇಗಿ ನೆಹ್ರಾ, ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಬಂದರೆ ಅಕ್ಟೋಬರ್​​ನಲ್ಲಿ ಐಪಿಎಲ್ 2020 ಟೂರ್ನಿ ಆಯೋಜನೆ ಖಂಡಿತಾ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

First published:

 • 110

  IPL 2020: ಐಪಿಎಲ್ ಯಾವಾಗ ಆರಂಭವಾಗಲಿದೆ?; ಖಚಿತ ಮಾಹಿತಿ ನೀಡಿದ ಆಶಿಶ್ ನೆಹ್ರಾ

  ಅಕ್ಟೋಬರ್ ತಿಂಗಳಾದ್ಯಂತ ವಿಶ್ವದೆಲ್ಲೆಡೆ ಕೊರೋನಾ ವೈರಸ್ ಹತೋಟಿಗೆ ಬಂದರೆ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ಆಯೋಜಿಸಲು ಸಾಧ್ಯವಾಗಲಿದೆ ಎಂದು ಹಿರಿಯ ಕ್ರಿಕೆಟಿಗ ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.

  MORE
  GALLERIES

 • 210

  IPL 2020: ಐಪಿಎಲ್ ಯಾವಾಗ ಆರಂಭವಾಗಲಿದೆ?; ಖಚಿತ ಮಾಹಿತಿ ನೀಡಿದ ಆಶಿಶ್ ನೆಹ್ರಾ

  13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 29ರಿಂದ ಆರಂಭಗೊಳ್ಳಬೇಕಾಗಿತ್ತು. ಆದರೆ, ಕೊರೋನಾ ವೈರಸ್​ನಿಂದ ಏಪ್ರಿಲ್ 15ಕ್ಕೆ ಮುಂದೂಡಲಾಯಿತು. ಇತ್ತ ಏ. 15ಕ್ಕೆ ಟೂರ್ನಿ ಆರಂಭವಾಗುವ ಯಾವುದೇ ಲಕ್ಷಣಗಳು ಗೋಚಿಸುತ್ತಿಲ್ಲ.

  MORE
  GALLERIES

 • 310

  IPL 2020: ಐಪಿಎಲ್ ಯಾವಾಗ ಆರಂಭವಾಗಲಿದೆ?; ಖಚಿತ ಮಾಹಿತಿ ನೀಡಿದ ಆಶಿಶ್ ನೆಹ್ರಾ

  ಕೇಂದ್ರ ಸರಕಾರದ ನೂತನ ನಿರ್ದೇಶನದ ಆಧಾರದ ಮೇರೆಗೆ ಬಿಸಿಸಿಐ ಈ ವರ್ಷದ ಐಪಿಎಲ್ ಟೂರ್ನಿಯ ಭವಿಷ್ಯವನ್ನು ನಿರ್ಧರಿಸಲಿದೆ. ಸೋಂಕು ನಿಯಂತ್ರಣಕ್ಕೆ ಬಾರದೆ ಭಾರತದಲ್ಲಿ ಕ್ರಿಕೆಟ್ ಚಟುವಟಿಕೆ ಮತ್ತೆ ಆರಂಭಿಸಲು ಖಂಡಿತಾ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ.

  MORE
  GALLERIES

 • 410

  IPL 2020: ಐಪಿಎಲ್ ಯಾವಾಗ ಆರಂಭವಾಗಲಿದೆ?; ಖಚಿತ ಮಾಹಿತಿ ನೀಡಿದ ಆಶಿಶ್ ನೆಹ್ರಾ

  ಈ ನಡುವೆ ಸ್ಟಾರ್ ಸ್ಪೋರ್ಟ್ಸ್ ಆನ್​ಲೈನ್​ ಚಿಟ್ ಚಾಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ವೇಗಿ ನೆಹ್ರಾ, ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಬಂದರೆ ಅಕ್ಟೋಬರ್​​ನಲ್ಲಿ ಐಪಿಎಲ್ 2020 ಟೂರ್ನಿ ಆಯೋಜನೆ ಖಂಡಿತಾ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 510

  IPL 2020: ಐಪಿಎಲ್ ಯಾವಾಗ ಆರಂಭವಾಗಲಿದೆ?; ಖಚಿತ ಮಾಹಿತಿ ನೀಡಿದ ಆಶಿಶ್ ನೆಹ್ರಾ

  ಇನ್ನೂ ಆಗಸ್ಟ್​ನಲ್ಲಿ ಟೂರ್ನಿ ಆಯೋಜನೆಗೊಂಡರೆ ಮಳೆ ಹೆಚ್ಚಾಗಿ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಅನೇಕ ಪಂದ್ಯಗಳು ರದ್ಧುಗೊಳ್ಳಬೇಕಾಗುತ್ತದೆ. ಪರಿಸ್ಥಿತಿ ಹತೋಟಿಗೆ ಬಂದು ಎಲ್ಲವೂ ಈ ಹಿಂದಿನಂತೆ ಆದರೆ ಅಕ್ಟೋಬರ್ ತಿಂಗಳಲ್ಲಿ ಶೇ. 100 ರಷ್ಟು ಟೂರ್ನಿ ಆಯೋಜನೆ ಮಾಡಬಹುದು- ಆಶಿಶ್ ನೆಹ್ರಾ.

  MORE
  GALLERIES

 • 610

  IPL 2020: ಐಪಿಎಲ್ ಯಾವಾಗ ಆರಂಭವಾಗಲಿದೆ?; ಖಚಿತ ಮಾಹಿತಿ ನೀಡಿದ ಆಶಿಶ್ ನೆಹ್ರಾ

  ಇದೇವೇಳೆ ತಾವು ಭಾರತ ತಂಡಕ್ಕೆ ಆಡಿದ ದಿನಗಳನ್ನು ನೆನಪಿಸಿಕೊಂಡ ಅವರು, ಯುವರಾಜ್ ಸಿಂಗ್ ಕುರಿತು ಕೆಲವು ಮಾತುಗಳನ್ನು ಆಡಿದರು.

  MORE
  GALLERIES

 • 710

  IPL 2020: ಐಪಿಎಲ್ ಯಾವಾಗ ಆರಂಭವಾಗಲಿದೆ?; ಖಚಿತ ಮಾಹಿತಿ ನೀಡಿದ ಆಶಿಶ್ ನೆಹ್ರಾ

  ಯುವರಾಜ್ ಇಬ್ಬ ಅತ್ಯುತ್ತಮ ಆಲ್ರೌಂಡರ್. ಧೋನಿ ನಾಯಕತ್ವದಲ್ಲಿಯೇ ಯುವಿ ಹೆಚ್ಚು ಬೆಳೆದರು. ಅದರಲ್ಲೂ 2007 ಮತ್ತು 2008ರಲ್ಲಿ ಅವರ ಫಾರ್ಮ್ ನೋಡಿ. 2011ರಲ್ಲಂತೂ ಯುವಿ ಅತ್ಯುನ್ನತ ಲಯದಲ್ಲಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ಅವರ ಆಟ ಭರ್ಜರಿ ಆಗಿತ್ತು ಎಂಬುವುದು ನೆಹ್ರಾ ಅಭಿಪ್ರಾಯ.

  MORE
  GALLERIES

 • 810

  IPL 2020: ಐಪಿಎಲ್ ಯಾವಾಗ ಆರಂಭವಾಗಲಿದೆ?; ಖಚಿತ ಮಾಹಿತಿ ನೀಡಿದ ಆಶಿಶ್ ನೆಹ್ರಾ

  ದೇಶದಲ್ಲಿ ಕೊರೋನಾ ವೈರಸ್ ಹಾವಳಿ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಸೋಕಂಕಿತ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

  MORE
  GALLERIES

 • 910

  IPL 2020: ಐಪಿಎಲ್ ಯಾವಾಗ ಆರಂಭವಾಗಲಿದೆ?; ಖಚಿತ ಮಾಹಿತಿ ನೀಡಿದ ಆಶಿಶ್ ನೆಹ್ರಾ

  ಭಾರತದಲ್ಲಿ ಸೋಂಕಿತರ ಸಂಖ್ಯೆ 5194ಕ್ಕೆ ಏರಿಕೆಯಾಗಿದೆ. ಜತೆಗೆ ಇದುವರೆಗೂ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. ಈ ಪೈಕಿ 402 ಮಂದಿ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  MORE
  GALLERIES

 • 1010

  IPL 2020: ಐಪಿಎಲ್ ಯಾವಾಗ ಆರಂಭವಾಗಲಿದೆ?; ಖಚಿತ ಮಾಹಿತಿ ನೀಡಿದ ಆಶಿಶ್ ನೆಹ್ರಾ

  ಜಗತ್ತಿನಾದ್ಯಂತ ಕೊರೋನಾ ಭಾದಿತರ ಸಂಖ್ಯೆ 15 ಲಕ್ಷ ದಾಟಿದ್ದು, ಮೃತರ ಸಂಖ್ಯೆ 80 ಸಾವಿರ ದಾಟಿದೆ. ಇನ್ನು ಅಮೆರಿಕದಲ್ಲಿ ಒಂದೇ ದಿನ 2000 ಮಂದಿ ಮೃತಪಟ್ಟಿದ್ದು ಡೊನಾಲ್ಡ್ ಟ್ರಂಪ್ ಕಂಗಾಲಾಗಿದ್ದಾರೆ.

  MORE
  GALLERIES