ಕೊರೋನಾ ಏಫೆಕ್ಟ್; ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ ತಾರೆಯರು: ಮನೆಯಲ್ಲಿ ಏನು ಮಾಡುತ್ತಿದ್ದಾರೆ..ನೀವೇ ನೋಡಿ!
ಭಾರತದಲ್ಲಿ ಕೊರೋನಾ ಹಾವಳಿ ಹೆಚ್ಚಾಗುತ್ತಲೇ ಇದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಯಾಗುತ್ತಿದೆ. ಈಗಾಗಲೇ 195 ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇತ್ತ ಸಿನಿಮಾ ಇಂಡಸ್ಟ್ರಿಗೂ ಕೂಡ ಕೊರೋನಾ ಹಾವಳಿಯಿಂದ ಕಂಗೆಟ್ಟಿದೆ. ಹಾಗಾಗಿ ಸೆಲೆಬ್ರಿಟಗಳು ಶೂಟಿಂಗ್ಗೆ ಬ್ರೇಕ್ ಹಾಕಿ ಮನೆಯಲ್ಲಿರಬೇಕಾದ ಪರಿಸ್ಥಿತಿ ಎದುರಾಗಿದೆ.
ಕೊರೋನಾ ಭೀತಿಯಿಂದ ಸಿನಿ ತಾರೆಯರು ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದಾರೆ. ಮನೆಯಲ್ಲಿ ಉಳಿದುಕೊಂಡು ಸೆಲ್ಫ್ ಕ್ವಾರಂಟೈನ್ ಕ್ಯಾಪ್ಷನ್ನೊಂದಿಗೆ ಸಾಮಾಜಿಕ ತಾಣದಲ್ಲಿ ಫೋಟೊಗನ್ನು ಹಂಚಿಕೊಳ್ಳುತ್ತಿದ್ದಾರೆ.
2/ 10
ನಟಿ ರಕುಲ್ ಪ್ರಿತ್ ಸಿಂಗ್ ಮನೆಯಲ್ಲಿ ಉಳಿದುಕೊಂಡು ಯೋಗ ಹಾಗೂ ವ್ಯಾಯಾಮ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
3/ 10
ನಟಿ ಕರೀನಾ ಕಫೂರ್ ಪತಿ ಸೈಫ್ ಅಲಿ ಖಾನ್ ಪುಸ್ತಕ ಓದುತ್ತಿರುವ ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ತಾನದಲ್ಲಿ ಹಂಚಿಕೊಂಡಿದ್ದಾರೆ. ಪತಿ ಒಂದು ವಾರ ಪುಸ್ತಕದ ಮೊರೆ ಹೋದರೆ ನಾನು ಇನ್ಸ್ಟಾಗ್ರಾಂ ಎಂದು ಬರೆದುಕೊಂಡಿದ್ದಾರೆ.
4/ 10
ಪ್ರಿಯಾಂಕಾ ಚೋಪ್ರಾ ನೆಚ್ಚಿನ ಸಾಕು ನಾಯಿಯೊಂದಿಗೆ ಸಮಯ ಕಳಿಯುತ್ತಿದ್ದೇನೆ ಎಂದು ಹೇಳಿದ್ದಾರೆ.
5/ 10
ಕತ್ರೀನಾ ಕೈಫ್ ಫ್ಯಾಮಿಲಿ ಜೊತೆಗೆ ಫೋಟೋ ಹಾಕಿಕೊಂಡಿದ್ದು, ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂದು ಬರೆದಿದ್ದಾರೆ.
6/ 10
ಕರೀಷ್ಮಾ ಕಫೂರ್ ‘ನೀವಷ್ಟೇ ಒಬ್ಬಂಟಿಯಲ್ಲಿ ನಾನು ಇಲ್ಲಿ ಒಬ್ಬಂಟಿಯೇ.. ಮುಂದಿನ ಭವಿಷ್ಯಕ್ಕಾಗಿ‘ ಎಂದು ಬರೆದುಕೊಂಡಿದ್ದಾರೆ.
7/ 10
ನಟ ಅರ್ಜುನ್ ಕಫೂರ್ ಕ್ವಾರಂಟೈನ್ ಡೇ-3 ಎಂದು ಬರೆದು ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ.
8/ 10
ಅಮಿತಾಭ್ ಬಚ್ಚನ್ ಕೈ ಹಿಂಭಾಗಕ್ಕೆ ಹೋಂ ಕ್ವಾರಂಟೈನ್ ಮುದ್ರೆ ಹಾಕಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಜೊತೆಗೆ ಸೇಫ್ ಆಗಿರಿ ಎಂದು ಸಲಹೆ ನೀಡಿದ್ದಾರೆ.
9/ 10
ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಮುಖಕ್ಕೆ ಮಸಾಜ್ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.
10/ 10
ಟ್ವಿಂಕಲ್ ಖನ್ನಾ ಅವರು ‘ನಾನು ಪುಸ್ತಕ ಓದುತ್ತಿದ್ದೇನೆ. ನೀವು ಕೂಡ ಸುರಕ್ಷಿತವಾಗಿರಿ, ಇತರರನ್ನು ರಕ್ಷಿಸಿ ಎಂದು ಬರೆದುಕೊಂಡಿದ್ದಾರೆ.