Omicronಗೆ ದೇಶದಲ್ಲಿ ಮೊದಲ ಬಲಿ; ಉದಯಪುರದಲ್ಲಿ ಸೋಂಕಿತ ಸಾವು

ಕೋವಿಡ್ ಹೊಸ ರೂಪಾಂತರ ತಳಿ ಓಮೈಕ್ರಾನ್ (Omicron)​ ಸೋಂಕಿಗೆ ಭಾರತದಲ್ಲಿ ಮೊದಲ ಸಾವು ಸಂಭವಿಸಿದೆ. ರಾಜಸ್ಥಾನದ ಉದಯಪುರದಲ್ಲಿ (Udaipur) 73 ವರ್ಷದ ವೃದ್ದನಿಗೆ ಓಮೈಕ್ರಾನ್ ಸೋಂಕು ದೃಢವಾಗಿದ್ದು, ಅವರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಕಳೆದ ಡಿಸೆಂಬರ್​ 15ರಂದು 73 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಇವರು ಡಯಾಬಿಟೀಸ್​, ಹೈಪರ್​ಟೆನ್ಷನ್ ಹೊಂದಿದ್ದರು.

First published:

  • 15

    Omicronಗೆ ದೇಶದಲ್ಲಿ ಮೊದಲ ಬಲಿ; ಉದಯಪುರದಲ್ಲಿ ಸೋಂಕಿತ ಸಾವು

    ಸಾವನ್ನಪ್ಪಿದ ವ್ಯಕ್ತಿಯ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿತು. ಡಿಸೆಂಬರ್ 21 ರಂದು ಕೋವಿಡ್ ನೆಗೆಟಿವ್ ಎಂದು ಕಂಡುಬಂದಿತು. ಆ ವ್ಯಕ್ತಿಗೆ ಎರಡು ಡೋಸ್​​ ಲಸಿಕೆ ಪಡೆದಿದ್ದಾರೆ. ಇನ್ನು ಈ ವ್ಯಕ್ತಿ ಯಾವುದೇ ಸಂಪರ್ಕ ಮತ್ತು ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ.

    MORE
    GALLERIES

  • 25

    Omicronಗೆ ದೇಶದಲ್ಲಿ ಮೊದಲ ಬಲಿ; ಉದಯಪುರದಲ್ಲಿ ಸೋಂಕಿತ ಸಾವು

    ಜೀನೋಮ್ ಸೀಕ್ವೆನ್ಸಿಂಗ್ ವರದಿ ಡಿಸೆಂಬರ್ 25 ರಂದು ಬಂದಿದ್ದು, ಅದರಲ್ಲಿ ಅವರಿಗೆ ಓಮೈಕ್ರಾನ್​​ ರೂಪಾಂತರ ಸೋಂಕು ಹೊಂದಿದ್ದಾರೆಂದು ಕಂಡುಬಂದಿತು. ಇದಾದ ಆರು ದಿನಗಳ ನಂತರ ಡಿಸೆಂಬರ್ 31 ರಂದು ಮುಂಜಾನೆ 3:30 ರ ಸುಮಾರಿಗೆ ನಿಧನರಾದಗಿದ್ದಾರೆ

    MORE
    GALLERIES

  • 35

    Omicronಗೆ ದೇಶದಲ್ಲಿ ಮೊದಲ ಬಲಿ; ಉದಯಪುರದಲ್ಲಿ ಸೋಂಕಿತ ಸಾವು

    ಇನ್ನು ಇವರ ಸಾವನ್ನು ಓಮೈಕ್ರಾನ್ ಸೋಂಕಿನ ಸಾವು ಎಂದು ರಾಜಸ್ಥಾನ ಆರೋಗ್ಯ ಇಲಾಖೆ ದೃಢಪಡಿಸಿದ್ದು, ದೇಶದಲ್ಲಿ ಹೊಸ ರೂಪಾಂತರ ತಳಿಗೆ ಬಲಿಯಾದ ಮೊದಲ ವ್ಯಕ್ತಿ ಇವರಾಗಿದ್ದಾರೆ

    MORE
    GALLERIES

  • 45

    Omicronಗೆ ದೇಶದಲ್ಲಿ ಮೊದಲ ಬಲಿ; ಉದಯಪುರದಲ್ಲಿ ಸೋಂಕಿತ ಸಾವು

    ಭಾರತದಲ್ಲಿ ಓಮಿಕ್ರಾನ್ ರೂಪಾಂತರದ 2,135 ಪ್ರಕರಣಗಳಿವೆ - ಮಹಾರಾಷ್ಟ್ರದಲ್ಲಿ 653 ಪ್ರಕರಣಗಳೊಂದಿಗೆ, ದೆಹಲಿಯಲ್ಲಿ 464 ಪ್ರಕರಣಗಳಿವೆ.

    MORE
    GALLERIES

  • 55

    Omicronಗೆ ದೇಶದಲ್ಲಿ ಮೊದಲ ಬಲಿ; ಉದಯಪುರದಲ್ಲಿ ಸೋಂಕಿತ ಸಾವು

    ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 58,097 ಹೊಸ COVID-19 ಪ್ರಕರಣಗಳು ವರದಿ ಆಗಿದೆ. ನಿನ್ನೆಯ 37,379 ಪ್ರಕರಣಗಳಿಗಿಂತ ಇದು ಶೇಕಡಾ 55ರಷ್ಟು ಹೆಚ್ಚಾಗಿದೆ. ಕಳೆದ ನಾಲ್ಕುದಿನಗಳ ಸಂಖ್ಯೆಗಿಂತ ಇದು ದುಪ್ಪಟ್ಟಾಗಿದೆ

    MORE
    GALLERIES