ಚೀನಾದಲ್ಲಿ ಉದ್ಭವಿಸಿದ ಕೊರೊನಾ ವೈರಸ್ ಇದೀಗ ವಿಶ್ವದ ಅನೇಕ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಚೀನಾ ಜರ್ಝರಿತಗೊಳ್ಳುತ್ತಿರುವುದು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವುದು ಒಂದೆಡೆಯಾದರೆ, ಕೊರೊನಾ ವೈರಸ್ ವಿಶ್ವದ ಹಲವು ರಾಷ್ಟ್ರಗಳಲ್ಲಿ ಹರಡುವ ಭೀತಿ ಸೃಷ್ಟಿಸುತ್ತಿರುವುದು ಇನ್ನೊಂದೆಡೆ ಇದೆ. ಇದು ಜಾಗತಿಕವಾಗಿ ದುಷ್ಪರಿಣಾಮ ಬೀರುತ್ತಿದೆ. ಇದೇ ಕಾರಣಕ್ಕೆ ಭಾರತದ ಷೇರುಪೇಟೆ ಭಾರೀ ಕುಸಿತ ಕಾಣುತ್ತಿದೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ತೀವ್ರ ಕುಸಿತ ಕಾಣುತ್ತಿವೆ.
ಪೌರತ್ವ ಕಾಯ್ದೆ ಪರ ವಿರೋಧಿ ಗುಂಪುಗಳ ನಡುವಿನ ಹಿಂಸಾಚಾರ ಹತ್ತಿಕ್ಕಲು ಕೇಂದ್ರ ಸರ್ಕಾರ ಹರಸಾಹಸ ನಡೆಸುತ್ತಿರುವ ಹೊತ್ತಲ್ಲೇ ಎಸ್.ಎನ್. ಶ್ರೀವಾಸ್ತವ ಅವರು ನವದೆಹಲಿಯ ನೂತನ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಅಮೂಲ್ಯ ಪಾಟ್ನಾಯಕ್ ಅವರ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಶ್ರೀವಾಸ್ತವ ಅವರು ಆ ಸ್ಥಾನ ತುಂಬಲಿದ್ಧಾರೆ. ನೂತನ ಪೊಲೀಸ್ ಆಯುಕ್ತರಾಗಿ ಶ್ರೀವಾಸ್ತವ ಅವರ ನೇಮಕಾತಿಗೆ ಕೇಂದ್ರ ಗೃಹ ಇಲಾಖೆ ಅಂತಿಮ ಮುದ್ರೆ ಒತ್ತಿದೆ
ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಕೊನೆಗೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮಹದಾಯಿ ನ್ಯಾಯಾಧಿಕರಣದ ಐತೀರ್ಪು ಪ್ರಕಟವಾಗಿದ್ದು, ಕರ್ನಾಟಕಕ್ಕೆ ಒಟ್ಟು 13.05 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಕೇಂದ್ರ ಸರ್ಕಾರದ ಅಧಿಸೂಚನೆಗೆ ರಾಜ್ಯ ಸಚಿವರು ಹಾಗೂ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆಯೂ ರಮೇಶ್ ಜಾರಕಿಹೊಳಿ ನೀರಾವರಿ ಖಾತೆ ವಹಿಸಿಕೊಂಡಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ಇನ್ನೂ ಮಹತ್ವ ಪಡೆದಿದೆ. ಈ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಖಾಲಿ ಉಳಿದಿರುವ ಮೂರು ಸಚಿವ ಸ್ಥಾನಗಳಲ್ಲಿ ಒಂದನ್ನು ದತ್ತಾತ್ರೇಯ ಪಾಟೀಲ್ ಅವರಿಗೆ ನೀಡಬೇಕು. ಅವರನ್ನು ಸಚಿವರನ್ನಾಗಿ ಮಾಡದಿದ್ದರೆ, ಶಾಸಕರಿಂದ ರಾಜೀನಾಮೆ ಕೊಡಿಸಲಾಗುವುದು ಎಂದು ಶ್ರೀಶೈಲ ಸಾರಂಗ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಗಳು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಎಚ್ವರಿಕೆ ನೀಡಿದ್ದಾರೆ. ದತ್ತಾತ್ರೇಯ ಪಾಟೀಲ್ ಆಲಿಯಾಸ್ ಅಪ್ಪುಗೌಡ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಈ ಹಿಂದೆ ಕೊಟ್ಟ ಮಾತಿನಂತೆ ಅಪ್ಪುಗೌಡಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಇನ್ಮುಂದೆ ಶೋಕಿಗಾಗಿ ನಾಯಿ ಸಾಕುವಂತಿಲ್ಲ. ನಿಮಗೆ ತೋಚಿದಷ್ಟು ಸಂಖ್ಯೆಯ ನಾಯಿಗಳನ್ನು ತಂದಿಟ್ಟುಕೊಳ್ಳುವಂತಿಲ್ಲ.ನಾಯಿಗಳ ಸ್ವಾತಂತ್ರ್ಯ ಹಾಗೂ ಬದುಕಿಗೆ ಕಿಂಚಿತ್ತೂ ತೊಂದರೆ ನೀಡುವಂತಿಲ್ಲ. ಹಾಗೇನಾದ್ರೂ ಮಾಡಿದ್ರೆ ದಂಡ ಪಾವತಿಸಬೇಕಾಗುತ್ತದೆ. ಫ್ಲಾಟ್ಗೊಂದೇ ನಾಯಿ ಸಾಕೋಕೆ ಅವಕಾಶ ಕಲ್ಪಿಸುವುದು ಸೇರಿದಂತೆ ಅನೇಕ ಅಂಶಗಳನ್ನೊಳಗೊಂಡ ಪರಿಷ್ಕ್ರತ ‘ಸಾಕು ನಾಯಿ ಪರವಾನಗಿ ಉಪನಿಯಮ-2018’ ಈಗಾಗಲೇ ಸಿದ್ಧವಾಗಿದ್ದು ನಾಳೆ ನಡೆಯುವ ಕೌನ್ಸಿಲ್ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದು ಅಂಗೀಕಾರ ಪಡೆಯಲು ಸರ್ಕಾರಕ್ಕೆ ರವಾನಿಸಲಾಗುತ್ತಿದೆ.
ಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಭೂ ದಾಖಲೆಗಳಲ್ಲಿ ಲೋಪ ಇದೆ ಎಂಬ ಕಾರಣವನ್ನು ಮುಂದೊಡ್ಡಿರುವ ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಸುಮಾರು 1.10 ಲಕ್ಷ ರೈತರನ್ನು ಸಾಲಮನ್ನಾ ಯೋಜನೆಯಿಂದ ಕೈಬಿಡಲು ಮುಂದಾಗಿದೆ. ಅಲ್ಲದೆ, 2019-20ನೇ ಆರ್ಥಿಕ ವರ್ಷದೊಳಗೆ ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲು ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ.ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರೈತರಿಗೆ ಸಾಲಮನ್ನಾ ಯೋಜನೆಯನ್ನು ಘೋಷಿಸಿತ್ತು. ಆದರೆ, ಬಿಜೆಪಿ ಸರ್ಕಾರ ಸಾಲಮನ್ನಾ ಯೋಜನೆಗಾಗಿ ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಭೂ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕಾನೂನು ರೂಪಿಸಿತ್ತು. ಹೀಗಾಗಿ ದಾಖಲೆಗಳಲ್ಲಿನ ಲೋಪದೋಷದ ಕಾರಣ ಸಾಲಮನ್ನಾ ಯೋಜನೆಯಿಂದ ಸುಮಾರು 1.10 ಲಕ್ಷ ರೈತರನ್ನು ಕೈಬಿಡಲಾಗಿದೆ ಎಂದು ಆರ್ಥಿಕ ಇಲಾಕೆ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.
ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆಯಿಂದ ದೇಶದ ಪ್ರಜೆಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮರು ಸ್ಪಷ್ಟನೆ ನೀಡಿದ್ದಾರೆ. ಇಂದು ಒರಿಸ್ಸಾ ರಾಜಧಾನಿ ಭುವನೇಶ್ವರದಲ್ಲಿ ನಡೆದ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತಾಡಿದ ಅಮಿತ್ ಶಾ, ಸಿಎಎ ಮತ್ತು ಎನ್ಆರ್ಸಿ ಬಗ್ಗೆ ವಿರೋಧ ಪಕ್ಷಗಳು ಸುಳ್ಳು ಹಬ್ಬಿಸುತ್ತಿವೆ. ಇದರಿಂದ ದೇಶಾದ್ಯಂತ ಮಾರಣಾಂತಿಕ ಘಟನೆಗಳು ಸಂಭವಿಸುತ್ತಿವೆ. ಆದರೆ, ಸಿಎಎ ಕಾಯ್ದೆ ಯಾರೊಬ್ಬರ ಪೌರತ್ವ ಕಸಿದುಕೊಳ್ಳುವ ಉದ್ದೇಶ ಹೊಂದಿಲ್ಲ ಎಂದರು.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಥಾಯ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಹರಿಣರ ತಂಡ ಹೊಸ ದಾಖಲೆ ಬರೆದಿದ್ದಾರೆ. ಲಿಜೆಲ್ಲಿ ಲೀ(101 ರನ್) ಅವರ ಭರ್ಜರಿ ಶತಕದ ನೆರವಿನಿಂದ ಸೌತ್ ಆಫ್ರಿಕಾ ನಿಗದಿತ 20 ಓವರ್ನಲ್ಲಿ 195 ರನ್ ಕಲೆಹಾಕಿತುಇದು ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ತಂಡವೊಂದು ಬಾರಿಸಿದ ಅತ್ಯಧಿಕ ಮೊತ್ತವಾಗಿದೆ. ಈ ಭರ್ಜರಿ ಇನಿಂಗ್ಸ್ನೊಂದಿಗೆ ದಕ್ಷಿಣ ಆಫ್ರಿಕಾ ವನಿತೆಯರು ಈ ಹಿಂದೆ ಟೀಂ ಇಂಡಿಯಾ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು.