ನಾವು ವಿಭಿನ್ನವಾದ ವೈರಸ್ನೊಂದಿಗೆ ಜೀವನ ಸಾಗಿಸುತ್ತಿದ್ದೇವೆ. ಈ ಓಮೈಕ್ರಾನ್ ಡೆಲ್ಟಾಗಿಂತ ಸೌಮ್ಯವಾಗಿದೆ. ಎಲ್ಲರಿಗೂ ತಿಳಿದಿರುವಂತೆ ಇದನ್ನು ಪ್ರಾಯೋಗಿಕವಾಗಿ ತಡೆಯಲು ಆಗದು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರದ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಜೈಪ್ರಕಾಶ್ ಮುಳಿಯಿಲ್ ಹೇಳಿದರು.