Cyclone Amphan : ಮಾರಕ ಅಂಫಾನ್ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ತತ್ತರ
ನಿನ್ನೆ ಮಧ್ಯಾಹ್ನ ಅಪ್ಪಳಿಸಿದ ಅಂಫಾನ್ ಚಂಡಮಾರುತ ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳನ್ನು ನಡುಗಿಸಿ ಹೋಗಿದೆ. ಗಂಟೆಗೆ 190 ಕಿಮೀ ವೇಗದಲ್ಲಿ ದಾಂಗುಡಿ ಇಟ್ಟ ಅತ್ಯಂತ ತೀವ್ರಮಟ್ಟದ ಚಂಡಮಾರುತದ ದಾಳಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಅಧಿಕೃತ ಮಾಹಿತಿ ಪ್ರಕಾರ ಬಂಗಾಳದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ.