Covid Fear: ಸೋಂಕಿತ ಮಗನನ್ನು ಕಾರ್ ಡಿಕ್ಕಿಯಲ್ಲಿ ಕೂಡಿದ ತಾಯಿ; ಕತ್ತಲೆಯಲ್ಲಿ ಕಂಗಾಲಾದ ಕಂದ
ಮಗನಿಗೆ ಕೋವಿಡ್ ಸೋಂಕು (Covid) ತಗುಲಿರುವ ಸುದ್ದಿ ತಿಳಿದ ತಾಯಿ ತನಗೂ ಸೋಂಕು ಹರಡಬಹುದು ಎಂಬ ಭೀತಿಯಲ್ಲಿ ಆತನನ್ನು ಕಾರಿನ ಡಿಕ್ಕಿಯಲ್ಲಿ (Car Trunk) ಕೂಡಿದ ಅಮಾನವೀಯ ಘಟನೆ ನಡೆದಿದೆ.
ಅಮೆರಿಕದ ಟೆಕ್ಸಾಸ್ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 13 ವರ್ಷದ ಮಗನಿಗೆ ಕೋವಿಡ್ ಸೋಂಕು ದೃಢಗೊಂಡಿದೆ. ಈ ಸುದ್ದಿ ತಿಳಿದ ಆತನ ತಾಯಿ 41 ವರ್ಷದ ಸರಾ ಬೀಮ್ , ತನಗೂ ಹರಡಬಹುದು ಎಂದು ಹೆದರಿದ್ದಾಳೆ.
2/ 5
ಈ ಹಿನ್ನೆಲೆ ಮಗನನ್ನು ಮನೆಯ ಕಾರ್ ಡಿಕ್ಕಿಯಲ್ಲಿ ಕೂಡಿದ್ದಾಳೆ. ಕಾರ್ ಶೆಡ್ನಲ್ಲಿ ಮಗು ಅಕ್ರಂದನ ಕೇಳಿ ಸ್ಥಳೀಯ ಮಹಿಳೆ ಈ ಸಂಬಂಧ ದೂರು ನೀಡಿದ್ದಾಳೆ. ಆಗ ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಮಗು ಡಿಕ್ಕಿಯಲ್ಲಿ ಮಲಗಿದ್ದು ಪತ್ತೆಯಾಗಿದೆ ಎಂದು ವರದಿಯಾಗಿದೆ.
3/ 5
ಕೋವಿಡ್ ದೃಢಗೊಂಡಿದ್ದ ಮಗನನ್ನು ಮತ್ತೊಂದು ವೈದ್ಯಕೀಯ ಪರೀಕ್ಷೆಗೆ ಬೀಮ್ ಕರೆದೊಯ್ಯುವಾಗ ಆತನನ್ನು ಕಾರಿನ ಡಿಕ್ಕಿಯಲ್ಲಿ ಕೂರಿಸಿ ಕರೆದುಕೊಂಡು ಹೋಗಿದ್ದಾಳೆ. ಮಗನಿಂದ ಸೋಂಕು ಹರಡಬಾರದು ಎಂದು ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
4/ 5
ಬಾಲಕನಿಗೆ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಲು ಅನುಮತಿಸುವವರೆಗೆ ಯಾವುದೇ ಪರೀಕ್ಷೆಯನ್ನು ಮಾಡಲಾಗುವುದಿಲ್ಲ ಎಂದು ಇದೇ ವೇಳೆ ಆರೋಗ್ಯ ಕಾರ್ಯಕರ್ತರು ಪಟ್ಟು ಹಿಡಿದರು.
5/ 5
ಕಳೆದ ಒಂದು ವಾರದ ಹಿಂದೆ ಕೂಡ ಈಕೆ ಮಗುವನ್ನು ಇದೇ ರೀತಿ ಕರೆದೊಯ್ದ ಸಂಬಂಧ ದೂರು ದಾಖಲಾಗಿದ್ದು, ಈ ಸಂಬಂಧ ಆಕೆ ಬಂಧನಕ್ಕೆ ವಾರೆಂಟ್ ಜಾರಿ ಮಾಡಲಾಗಿದೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಹಾನಿ ಆಗಿಲ್ಲ.
First published:
15