ಗಲ್ಲಿ ಕ್ರಿಕೆಟ್ನಂತಾದ ಆಸೀಸ್-ಕಿವೀಸ್ ಏಕದಿನ ಪಂದ್ಯ; ಚೆಂಡು ಹುಡುಕಲು ಆಟಗಾರರ ಹರಸಾಹಸ
Australia vs New Zealand: ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯ, ಕೊರೋನಾ ವೈರಸ್ ಭೀತಿಯಿಂದಾಗಿ ಖಾಲಿ ಮೈದಾನದಲ್ಲಿ ನಡೆಯಿತು.
ಮಾರಕ ಕೊರೋನಾ ವೈರಸ್ ಕ್ರಿಕೆಟ್ ಜಗತ್ತಿಗೂ ಕಾಲಿಟ್ಟು ಈಗಾಗಲೇ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್, ಭಾರತ-ದ. ಆಫ್ರಿಕಾ ಸರಣಿ, ಇಂಗ್ಲೆಂಡ್- ಶ್ರೀಲಂಕಾ ಸರಣಿ ಹೀಗೆ ವಿಶ್ವದ ಅನೇಕ ಕ್ರೀಡಾಕೂಟಗಳು ರದ್ದಾಗಿವೆ.
2/ 10
ಕೆಲವು ಕ್ರಿಕೆಟ್ ಪಂದ್ಯಗಳು ನಡೆಯುತ್ತಿವೆಯಾದರೂ ಖಾಲಿ ಮೈದಾನದಲ್ಲಿ ಆಡಿಸಲಾಗುತ್ತಿದೆ. ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿರುವ ಮೈದಾನದಲ್ಲಿ ಎರಡು ತಂಡಗಳ ನಡುವಣ ಕಾದಾಟ ನಡೆಯುತ್ತಿವೆ.
3/ 10
ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಅದರಲ್ಲೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸ್ಟೇಡಿಯಂನಲ್ಲಿ ಪ್ರೇಕ್ಷಕರಿಲ್ಲದಿದ್ದರೆ ಎಷ್ಟು ಸಮಸ್ಯೆ ಎಂಬ ಪ್ರಶ್ನೆಗೆ ನಿನ್ನೆ ನಡೆದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯವೇ ಸಾಕ್ಷಿ.
4/ 10
ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯ, ಕೊರೋನಾ ವೈರಸ್ ಭೀತಿಯಿಂದಾಗಿ ಖಾಲಿ ಮೈದಾನದಲ್ಲಿ ನಡೆಯಿತು.
5/ 10
ಇದರಿಂದ ಫೀಲ್ಡರ್ಗಳು ಪಟ್ಟ ಕಷ್ಟ ಅಷ್ಟಿಟ್ಟಲ್ಲ. ಬ್ಯಾಟ್ಸ್ಮನ್ ಸಿಕ್ಸರ್ ಬಾರಿಸಿದಾದ ಚೆಂಡು ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿಯತ್ತ ತಲುಪುತ್ತಿತ್ತು. ಚೆಂಡನ್ನು ಮತ್ತೆ ಮೈದಾನದತ್ತ ಎಸೆಯಲು ಯಾರೂ ಇಲ್ಲದ ಕಾರಣ ಸ್ವತಃ ಆಟಗಾರರೇ ಬಾಲ್ ಎಲ್ಲಿದೆ ಎಂದು ಹುಡುಕಿ ತರಬೇಕಿತ್ತು.
6/ 10
ಎರಡೂ ಇನ್ನಿಂಗ್ಸ್ಗಳಲ್ಲಿ ಕಳೆದು ಹೋದ ಚೆಂಡನ್ನು ಹುಡುಕಲು ಉಭಯ ತಂಡಗಳ ಆಟಗಾರರು ಪರದಾಡಿದರು.
7/ 10
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ, ನಾಯಕ ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಶೇನ್ ಅವರ ಅರ್ಧಶತಕದ ನೆರವಿನಿಂದ 50 ಓವರ್ನಲ್ಲಿ 258 ರನ್ ಗಳಿಸಿತ್ತು.
8/ 10
ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆಸೀಸ್ ಬೌಲರ್ಗಳ ಸಂಘಟಿತ ಹೋರಾಟಕ್ಕೆ ತಲೆಬಾಗಿ ಕೇವಲ 187 ರನ್ಗೆ ಆಲೌಟ್ ಆಯಿತು.
9/ 10
ಆಸ್ಟ್ರೇಲಿಯಾ 71 ರನ್ಗಳ ಭರ್ಜರಿ ಜಯ ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
10/ 10
ಮಾರಕ ಕೊರೋನಾ ವೈರಸ್ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಈವರೆಗೂ ಜಗತ್ತಿನಾದ್ಯಂತ 5 ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಭಾರತದಲ್ಲೂ 81 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.