Coronavirus Kerala: ಕೇರಳದಲ್ಲಿ ಕೊರೋನಾ ಆರ್ಭಟ, ನಿನ್ನೆ ಒಂದೇ ದಿನ 50 ಸಾವಿರ ಪ್ರಕರಣಗಳು ಪತ್ತೆ

Coronavirus Kerala: ಕೇರಳದಲ್ಲಿ(Kerala) ಕೊರೋನಾ ವೈರಸ್(Corona virus)​ ಆರ್ಭಟ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 50,000 ಪ್ರಕರಣಗಳು ಪತ್ತೆಯಾಗಿವೆ. ದೈನಂದಿನ ಪ್ರಕರಣಗಳ ಪೈಕಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳ ದಾಖಲಾಗಿರುವುದು ಗುರುವಾರ ಎಂದು ಕೇರಳ ಆರೋಗ್ಯ ಇಲಾಖೆ(Kerala Health Department) ಮಾಹಿತಿ ನೀಡಿದೆ. ಇದರೊಂದಿಗೆ ಕೇರಳದಲ್ಲಿ ಪಾಸಿಟಿವಿಟಿ ದರ(Positivity Rate) ಶೇ.40 ದಾಟಿದೆ.

First published:

  • 16

    MORE
    GALLERIES

  • 26

    ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 46,387 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಾದಂತೆ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,15,357 ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿತ್ತು. ಸದ್ಯ ಕೇರಳದಲ್ಲಿ ಪಾಸಿಟಿವಿಟಿ ದರವು ಶೇ.40.21 ರಷ್ಟಿದೆ.

    MORE
    GALLERIES

  • 36

    Coronavirus Kerala: ಕೇರಳದಲ್ಲಿ ಕೊರೋನಾ ಆರ್ಭಟ, ನಿನ್ನೆ ಒಂದೇ ದಿನ 50 ಸಾವಿರ ಪ್ರಕರಣಗಳು ಪತ್ತೆ

    ತಿರುವನಂತಪುರಂದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿವೆ. ಅಂದರೆ ಅಲ್ಲಿ ನಿನ್ನೆ ಒಂದೇ ದಿನ 9,720 ಕೋವಿಡ್ ಕೇಸ್​ಗಳು ಪತ್ತೆಯಾಗಿವೆ. ನಂತರದ ಸ್ಥಾನಲದಲ್ಲಿ ಎರ್ನಾಕುಲಂ ಇದೆ. ಕೋಝಿಕೊಡೆ, ತ್ರಿಶೂರ್, ಕೊಟ್ಟಾಯಂ ಮತ್ತು ಕೊಲ್ಲಂನಲ್ಲಿ ಕ್ರಮವಾಗಿ 3,002, 4,016, 3,627 ಮತ್ತು 3,091 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ.

    MORE
    GALLERIES

  • 46

    Coronavirus Kerala: ಕೇರಳದಲ್ಲಿ ಕೊರೋನಾ ಆರ್ಭಟ, ನಿನ್ನೆ ಒಂದೇ ದಿನ 50 ಸಾವಿರ ಪ್ರಕರಣಗಳು ಪತ್ತೆ

    ಸದ್ಯಕ್ಕೆ ರಾಜ್ಯದಲ್ಲಿ 1,99,041 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಶೇ.3ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ 32 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಆ ಮೂಲಕ ಕೇರಳದಲ್ಲಿ ಒಟ್ಟು ಸಾವಿನ ಸಂಖ್ಯೆ 51,501ಕ್ಕೆ ಏರಿಕೆಯಾಗಿದೆ.

    MORE
    GALLERIES

  • 56

    Coronavirus Kerala: ಕೇರಳದಲ್ಲಿ ಕೊರೋನಾ ಆರ್ಭಟ, ನಿನ್ನೆ ಒಂದೇ ದಿನ 50 ಸಾವಿರ ಪ್ರಕರಣಗಳು ಪತ್ತೆ

    ಕೊರೋನಾ ಪಾಸಿಟಿವ್ ಬಂದವರಲ್ಲಿ 172 ಮಂದಿ ಬೇರೆ ರಾಜ್ಯಗಳಿಂದ ಆಗಮಿಸಿದವರು. 43,176 ಜನರಿಗೆ ಪ್ರಾಥಮಿಕ ಸಂಪರ್ಕದ ಮೂಲಕ ವೈರಸ್​​​ ತಗುಲಿದೆ. 2,654 ಪ್ರಕರಣಗಳಲ್ಲಿ ಸೋಂಕಿನ ಮೂಲ ತಿಳಿದಿಲ್ಲ. ಒಟ್ಟು 385 ಆರೋಗ್ಯ ಸಿಬ್ಬಂದಿಗೂ ಸಹ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

    MORE
    GALLERIES

  • 66

    Coronavirus Kerala: ಕೇರಳದಲ್ಲಿ ಕೊರೋನಾ ಆರ್ಭಟ, ನಿನ್ನೆ ಒಂದೇ ದಿನ 50 ಸಾವಿರ ಪ್ರಕರಣಗಳು ಪತ್ತೆ

    ಕಳೆದ ವಾರಕ್ಕೆ ಹೋಲಿಸಿದರೆ, ಕೋವಿಡ್ ಪ್ರಕರಣಗಳ ಸಂಖ್ಯೆ 204 ರಷ್ಟು ಏರಿಕೆಯಾಗಿದೆ. ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಶೇ.201ರಷ್ಟು ಹೆಚ್ಚಾದರೆ, ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಶೇ.70ರಷ್ಟು ಏರಿಕೆ ಕಂಡಿದೆ.

    MORE
    GALLERIES