ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

Coronavirus outbreak: ಸಂಸದ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅವರು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಗೆ ಸಂಸದನಾಗಿ ಲಭಿಸಲಿರುವ ಎರಡು ವರ್ಷಗಳ ಸಂಬಳವನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

First published:

  • 112

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ದೇಶದಲ್ಲಿ ಕೊರೋನಾ ವೈರಸ್ ಸೋಂಕಿನ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲಾಕ್​ಡೌನ್​​ಗೆ ಕರೆನೀಡಿದ್ದರೂ ಸೋಂಕಿತ ಪ್ರಕರಣಗಳೇನೂ ಕಡಿಮೆಯಾಗುತ್ತಿಲ್ಲ.

    MORE
    GALLERIES

  • 212

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ಈವರೆಗೆ ಭಾರತದಲ್ಲಿ ಸುಮಾರು 2000 ಜನರಿಗೆ ಕೊರೋನಾ ಸೋಂಕು ಹರಡಿದಂತಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ.

    MORE
    GALLERIES

  • 312

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ಇನ್ನೂ ಆಂಧ್ರಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದ್ದರೆ, ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಇಂದು ಚಂಡೀಘಡ ಮತ್ತು ಗುಜರಾತ್​​ನಲ್ಲಿ ಮೃತಪಟ್ಟಿರುವ ವ್ಯಕ್ತಿಗಳನ್ನೂ ಸೇರಿಸಿ ಭಾರತದಲ್ಲಿ ಕೊರೋನಾ ಸಾವಿನ ಸಂಖ್ಯೆ 50ಕ್ಕೆ ಏರಿದೆ.

    MORE
    GALLERIES

  • 412

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ಈಗಾಗಕೇ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಆರ್ಥಿಕ ಸಹಾಯ ನೀಡಲು ಸಿನಿ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ಅನೇಕ ಗಣ್ಯರು ಮುಂದಾಗಿದ್ದಾರೆ. ಹೆಚ್ಚಿನವರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

    MORE
    GALLERIES

  • 512

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ಸದ್ಯ ಸಂಸದ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅವರು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಗೆ ಸಂಸದನಾಗಿ ಲಭಿಸಲಿರುವ ಎರಡು ವರ್ಷಗಳ ಸಂಬಳವನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

    MORE
    GALLERIES

  • 612

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ಇದರ ಜೊತೆಗೆ ಬೇರೆಯವರ ಬಳಿಯೂ ಮನವಿ ಮಾಡಿಕೊಂಡಿದ್ದು, ಕೋವಿಡ್-19 ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಎಂದು ಕೋರಿದ್ದಾರೆ.

    MORE
    GALLERIES

  • 712

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಗಂಭೀರ್, ದೇಶ ನನಗಾಗಿ ಏನು ಮಾಡಿದೆ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಆದರೆ, ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎಂಬುದು ಮುಖ್ಯ. ಕೊರೋನಾ ಸೋಂಕು ನಿವಾರಣೆ ನಿಟ್ಟಿನಲ್ಲಿ ತಮ್ಮ ಎರಡು ವರ್ಷದ ವೇತನವನ್ನು ಪ್ರಧಾನ ಮಂತ್ರಿ ಕೇರ್ಸ್ ನಿಧಿಗೆ ನೀಡುವುದಾಗಿ ಅವರು ತಿಳಿಸಿದ್ದಾರೆ. ನೀವೂ ಕೂಡ ಮುಂದೆ ಬನ್ನಿ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 812

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ಇನ್ನೂ ಗೌತಮ್ ಗಂಭೀರ್ ಫೌಂಡೇಷನ್ ಕೂಡ ಬಡ ಜನರಿಗೆ ಆಹಾರ ನೀಡುವ ಮೂಲಕ ಮಾನವೀಯತೆಯನ್ನು ಮೆರಿದಿದೆ. ಜೊತೆಗೆ ಬೀದಿ ನಾಯಿಗಳಿಗೂ ಆಹಾರ ನೀಡುವ ಮೂಲಕ ಗಮನ ಸೆಳೆಯುತ್ತಿದೆ.

    MORE
    GALLERIES

  • 912

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ಈಗಾಗಲೇ ಅನೇಕ ಕ್ರೀಡಾಪಟುಗಳು ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಆರ್ಥಿಕ ಸಹಾಯ ನೀಡಿದ್ದಾರೆ.

    MORE
    GALLERIES

  • 1012

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ಅದರಲ್ಲಿ ಪ್ರಮುಖವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಸುರೇಶ್ ರೈನಾ ಮಾತ್ರವಲ್ಲದೆ ಭಾರತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ ಸಿಂಧು, ಹಿಮಾ ದಾಸ್, ಮಿಥಾಲಿ ರಾಜ್ ಸೇರಿದಂತೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ.

    MORE
    GALLERIES

  • 1112

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ಬಿಸಿಸಿಐ ಕೂಡ ಪ್ರಧಾನ ಮಂತ್ರಿ ಸಿಟಿಜನ್ ಅಸಿಸ್ಟೆನ್ಸ್ ಆ್ಯಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚ್ಯುಯೇಷನ್ ಫಂಡ್ (ಕೇರ್ಸ್) ನಿಧಿಗೆ 51 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾಗಿ ತಿಳಿಸಿದೆ.

    MORE
    GALLERIES

  • 1212

    ಕೊರೋನಾ ವಿರುದ್ಧದ ಹೋರಾಟಕ್ಕೆ ನನ್ನ 2 ವರ್ಷಗಳ ಸಂಬಳ ನೀಡುತ್ತೇನೆ ಎಂದ ಗಂಭೀರ್

    ಇತ್ತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​​ಸಿಎ) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಲಾ 50 ಲಕ್ಷ ರೂ. ಸೇರಿದಂತೆ ಒಟ್ಟು ಒಂದು ಕೋಟಿ ರೂಪಾಯಿಗಳ ದೇಣಿಗೆ ನೀಡಿದೆ.

    MORE
    GALLERIES