ನವದೆಹಲಿ(ಜ.07): ಕೊರೋನಾ ವೈರಸ್ನ ಹೊಸ ರೂಪಾಂತರ ಓಮೈಕ್ರಾನ್ ಪ್ರಾರಂಭದಲ್ಲೇ ತನ್ನ ಪ್ರಭಾವವನ್ನು ತೋರಿಸುತ್ತಿದೆ. ಜನವರಿ-ಫೆಬ್ರವರಿ ವೇಳೆಗೆ ಭಾರತದಲ್ಲಿ ಪರಿಸ್ಥಿತಿ ತೀರಾ ಕೆಡಲಿದ್ದು, ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗಲಿವೆ ಎಂದು ತಜ್ಞರು ಹೇಳಿದ್ದಾರೆ. ಇದು ಕೇವಲ ಪ್ರಾರಂಭ ಅಷ್ಟೇ ಆಗಿದ್ದು, ಮುಂದಿನ ದಿನಗಳಲ್ಲಿ ಓಮೈಕ್ರಾನ್ ತನ್ನ ನಿಜರೂಪ ತೋರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.